ನೃತ್ಯ ಮಾಡಿ ಹೊಸ ವರ್ಷ ಸ್ವಾಗತಿಸಿದ ಸತೀಶ ಸೈಲ್

New year celebration
Published on

ಕಾರವಾರ: ಹೊಸ ವರ್ಷವನ್ನು ಕಾರವಾರದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾ ಪ್ರವಾಸೋದ್ಯಮ ಸಮಿತಿಯಿಂದ ಇಲ್ಲಿನ ಟ್ಯಾಗೋರ್ ಕಡಲ ತೀರದಲ್ಲಿ ಆಯೋಜಿಸಿದ್ದ ಸಂಗೀತ ಸಂಜೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಜನ ಸೇರಿ ಸಂಭ್ರಮಿಸಿದರು.
ಮಯೂರವರ್ಮ ವೇದಿಕೆಯಲ್ಲಿ ಸಾಯಂಕಾಲ ಸ್ಥಳೀಯ ಕಲಾವಿದರು ನೃತ್ಯ ಪ್ರದರ್ಶನ ಮಾಡಿದರು. ನಂತರ ಟಿವಿ ಗಾಯಕ ನಚಿಕೇತ ಲೇಲೆ ಹಾಗೂ ಮಿಸ್ಮಿ ಭೋಸ್ ಸುಮಾರು 3 ಗಂಟೆಗಳ ಕಾಲ ಹಿಂದಿ ಹಾಡುಗಳನ್ನು ಹಾಡಿ ಜನರನ್ನು ರಂಜಿಸಿದರು. ಕಿಕ್ಕಿರಿದು ಸೇರಿದ್ದ ಜನ ಚಪ್ಪಾಳೆ ತಟ್ಟಿ, ಕುಣಿದು ಕುಪ್ಪಳಿಸಿ ಹಾಡುಗಾರರನ್ನು ಪ್ರೋತ್ಸಾಹಿಸಿದರು. ಪ್ರವಾಸೋದ್ಯಮ ಸಮಿತಿಯಿಂದ ಪಟಾಕಿಗಳನ್ನು ಸಿಡಿಸಲಾಯಿತು. ಸಾಕಷ್ಟು ಮಕ್ಕಳು, ಸ್ವತಃ ಶಾಸಕ ಸತೀಶ ಸೈಲ್ ಸಹ ನೃತ್ಯ ಮಾಡಿ ಗಮನ ಸೆಳೆದರು.

ಇದನ್ನೂ ಓದಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net