ವಿಶ್ವದ ಎರಡನೇ ಅತಿ ಎತ್ತರದ ಕಟ್ಟಡ; ಇಲ್ಲಿದೆ ನೋಡಿ ಇದರ ವಿಶೇಷತೆಗಳು

Untitled-design-2024-09-10T182340.696
Published on

ದುಬೈ: ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಎಂಬುದು ಗೊತ್ತೆ ಇದೆ. ಈಗ ಪ್ರಪಂಚದ ಎರಡನೇ ಅತಿ ಎತ್ತರದ ಕಟ್ಟಡ ನಿರ್ಮಾಣವಾಗುತ್ತಿದೆ. ದುಬೈನಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟದ ಹೆಸರು ಬುರ್ಜ್ ಅಜೀಜಿ. ಈ ಕಟ್ಟಡವನ್ನು ರಿಯಲ್ ಎಸ್ಟೇಟ್ ಸಂಸ್ಥೆ ಅಜೀಜಿ ಡೆವಲಪ್​​​ಮೆಂಟ್​​ ನಿರ್ಮಿಸುತ್ತಿರುವುದರಿಂದ ಆ ಕಂಪನಿಯ ಹೆಸರನ್ನೇ ಕಟ್ಟಡಕ್ಕೆ ಹೆಸರಿಸಲಾಗಿದೆ. ಈ ವರ್ಷದ ಜನವರಿಯಲ್ಲಿ ಕಟ್ಟಡದ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು. ಆದರೆ ಆ ಸಮಯದಲ್ಲಿ ಕಟ್ಟಡದ ಎತ್ತರದ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಿಲಿಲ್ಲ. ಇದೀಗ ಅದರ ಎತ್ತರವನ್ನು ಅಧಿಕಾರಿಗಳು ಅನುಮೋದಿಸಿದ್ದು ಕಂಪನಿಯಿಂದ ಅಧಿಕೃತವಾಗಿ ಘೋಷಿಸಲಾಗಿದೆ.

ಈ ಕಟ್ಟಡವು ದುಬೈನ ಒಂದು ಕಟ್ಟಡವನ್ನು ಹೊರತುಪಡಿಸಿ ಉಳಿದೆಲ್ಲ ಕಟ್ಟಡಗಳಿಗಿಂತ ಎತ್ತರವಾಗಿರುದೆ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ. ಅದರ ಎತ್ತರವು ಸುಮಾರು 725 ಮೀಟರ್ ಆಗಿರುತ್ತದೆ. ಈ ಕಟ್ಟಡಕ್ಕೆ ನಾವು ಎರಡು ವಿನ್ಯಾಸಗಳನ್ನು ಹೊಂದಿದ್ದೇವೆ. ಈ ಪೈಕಿ ಒಂದು 526 ಮೀಟರ್‌ವರೆಗೆ ನಿರ್ಮಿಸಲು ಹಾಗೂ ಮತ್ತೊಂದನ್ನು 725 ಮೀಟರ್‌ವರೆಗೆ ನಿರ್ಮಿಸಲು ಅನುಮೋದನೆ ನೀಡಿದ್ದಾಗಿ ಕಂಪನಿಯ ಮಾಲೀಕ ಮಿರ್ವೈಸ್ ಅಜೀಜಿ ತಿಳಿಸಿದ್ದಾರೆ. ಗಗನಚುಂಬಿ ಕಟ್ಟಡ ಬುರ್ಜ್ ಖಲೀಫಾದ ಎತ್ತರವು ಸುಮಾರು 828 ಮೀಟರ್ ಇದೆ.

ಈ ಕಟ್ಟಡವು ಪ್ರಪಂಚದಾದ್ಯಂತದ ಎಲ್ಲಾ ಸೌಲಭ್ಯಗಳನ್ನು ಹೊಂದಿರುತ್ತದೆ. 131-ಅಂತಸ್ತಿನ ಕಟ್ಟಡವು ಅಪಾರ್ಟ್‌ಮೆಂಟ್‌ಗಳು, ಎಲ್ಲಾ ಸೂಟ್ ಸೆವೆನ್-ಸ್ಟಾರ್ ಹೋಟೆಲ್, ಏಳು ಅಂತಸ್ತಿನ ವರ್ಟಿಕಲ್ ಶಾಪಿಂಗ್ ಮಾಲ್ ಅನ್ನು ಹೊಂದಿರುತ್ತದೆ. ಇದಲ್ಲದೇ ಇಲ್ಲಿಗೆ ಬರುವ ಜನರಿಗೆ ಪ್ರಪಂಚದಾದ್ಯಂತದ ವಸ್ತುಗಳು ಲಭ್ಯವಾಗಲಿವೆ. ಈ ಕಟ್ಟಡವು ಅದರ ಐಷಾರಾಮಿ ದೃಷ್ಟಿಯಿಂದ ಬುರ್ಜ್ ಖಲೀಫಾಕ್ಕಿಂತ ಕಡಿಮೆಯಿಲ್ಲ ಎಂದು ಅವರು ಹೇಳಿದರು.

ದುಬೈನ ಶೇಖ್ ಜಾಯೆದ್ ರಸ್ತೆಯಲ್ಲಿರುವ ಬುರ್ಜ್ ಖಲೀಫಾದಿಂದ ಬುರ್ಜ್ ಅಜೀಜಿಯ ನಡುವೆ ಕೇವಲ 2 ಮೈಲಿಗಳ ಅಂತರವಿದೆ. ಪ್ರಸ್ತುತ ಬುರ್ಜ್ ಖಲೀಫಾ ನಂತರ ದುಬೈನ ಎರಡನೇ ಅತಿ ಎತ್ತರದ ಕಟ್ಟಡ ಮರೀನಾ ಎಂದು ಹೇಳಲಾಗುತ್ತಿದೆ ಇದರ ಎತ್ತರ ಸುಮಾರು 1394 ಅಡಿ ಆಗಿದೆ.

ಕಟ್ಟಡವು ವಿಶ್ವದ ಅತಿ ಎತ್ತರದ ಹೋಟೆಲ್ ಲಾಬಿ, ನೈಟ್​​​​ಕ್ಲಬ್ ಮತ್ತು ವೀಕ್ಷಣಾ ಡೆಕ್ ಸೇರಿದಂತೆ ಟವರ್‌ನ 118ನೇ ಮಹಡಿಯಲ್ಲಿರುವ ನಗರದ ಅತಿ ಎತ್ತರದ ಹೋಟೆಲ್ ಕೊಠಡಿಗಳು ದಾಖಲೆಗಳನ್ನು ನಿರ್ಮಿಸುವ ನಿರೀಕ್ಷೆಯಿದೆ. ಕಟ್ಟಡವು ದುಬೈನ ಅತಿ ಎತ್ತರದ ರೆಸ್ಟೋರೆಂಟ್‌ಗೆ ನೆಲೆಯಾಗಿದೆ. ಇದು ವಿಶ್ವದ ಅತಿ ಎತ್ತರದ ಇನ್ಫಿನಿಟಿ ಪೂಲ್, ಫ್ಲವರ್​ ಗಾರ್ಡೆನ್​​ ಇರಲಿದೆ ಎಂದು ಕಟ್ಟಡ ನಿರ್ಮಾಣ ಸಂಸ್ಥೆ ತಿಳಿಸಿದೆ. ಬುರ್ಜ್ ಅಜೀಜಿ 2028ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಅಪಾರ್ಟ್​​ಮೆಂಟ್​ ಮಾರಾಟವು ಫೆಬ್ರವರಿ 2025ರಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net