ಚಾಂಪಿಯನ್ಸ್​ ಟ್ರೋಫಿಗೆ ತಂಡ ಘೋಷಣೆ ಮತ್ತಷ್ಟು ವಿಳಂಬ; ಐಸಿಸಿ ಬಳಿ ಮತ್ತಷ್ಟು ಸಮಯಾವಕಾಶ ಕೇಳಿದ BCCI

Champions Trophy
Published on

ಮುಂಬೈ: ಫೆಬ್ರವರಿ 19ರಿಂದ ಮಾರ್ಚ್​ 09ರವರೆಗೆ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿಗೆ ಈಗಾಗಲೇ ಐಸಿಸಿ ಹಾಗೂ ಪಿಸಿಬಿ ಸಿದ್ಧತೆ ಮಾಡಿಕೊಂಡಿದ್ದು, ಟೂರ್ನಿ ಆರಂಭವಾಗುವುದಕ್ಕೆ ಇನ್ನೂ 38 ದಿನಗಳು ಬಾಕಿ ಉಳಿದಿದೆ. ಪಾಕಿಸ್ತಾನ ಹಾಗೂ ಯುಎಇ ಆತಿಥ್ಯದಲ್ಲಿ ನಡೆಯಲಿರುವ ಟೂರ್ನಿಗೆ ಈಗಾಗಲೇ ತಂಡಗಳು ತಯಾರಿ ಆರಂಭಿಸಿದ್ದು, ಸದಸ್ಯರ ಹೆಸರನ್ನು ಪ್ರಕಟಿಸಬೇಕಿದೆ. ಇನ್ನೂ ಟೀಮ್​ ಇಂಡಿಯಾ ವಿಚಾರಕ್ಕೆ ಬರುವುದಾದರೆ ಬಿಸಿಸಿಐ (BCCI) ಜನವರಿ 12ಕ್ಕೆ ತಂಡವನ್ನು ಪ್ರಕಟಿಸುತ್ತದೆ ಎಂದು ಹೇಳಲಾಗಿತ್ತಾದರು ಇದೀಗ ಇದು ಮುಂದಕ್ಕೆ ಹೋಗಬಹುದು ಎಂದು ಹೇಳಲಾಗಿದೆ.

ಕ್ರಿಕ್​ಬಜ್​ ವರದಿ ಮಾಡಿರುವ ಪ್ರಕಾರ, ತಂಡ ಆಯ್ಕೆ ಸಂಬಂಧ ಬಿಸಿಸಿಐ (BCCI) ಐಸಿಸಿಗೆ ಸಮಯ ಕೇಳಿದ್ದು, ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಗೆ ತಂಡವನ್ನು ಶೀಘ್ರದಲ್ಲೇ ಪ್ರಕಟಿಸುವುದು ಪಕ್ಕಾ ಎಂದು ಹೇಳಲಾಗಿದೆ. ತಾತ್ಕಾಲಿಕ ತಂಡವನ್ನು ಘೋಷಿಸಿದ ಒಂದು ತಿಂಗಳ ನಂತರ ತಂಡಗಳಿಗೆ ಬದಲಾವಣೆಗಳನ್ನು ಮಾಡಲು ಐಸಿಸಿ ಅವಕಾಶ ನೀಡಿದ್ದರೂ ಬಿಸಿಸಿಐ ಹೆಚ್ಚಿನ ಸಮಯವನ್ನು ಕೇಳಿರುವುದಾಗಿ ವರದಿಯಾಗಿದೆ. ಈ ಕಾರಣಕ್ಕೆ ತಂಡದ ಆಯ್ಕೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. 

Mohammed Shami

ಇನ್ನೂ ಬಾರ್ಡರ್​-ಗವಾಸ್ಕರ್​ ಟ್ರೋಫಿ ಸರಣಿ ಸೋಲಿಗೆ ಸಂಬಂಧಿಸಿದಂತೆ ಬಿಸಿಸಿಐ (BCCI) ಗೌತಮ್​ ಗಂಭೀರ್​ ಹಾಗೂ ರೋಹಿತ್​ ಶರ್ಮ ಜತೆ ಪ್ರತ್ಯೇಕವಾಗಿ ಸಭೆ ನಡೆಸಿದ್ದು, ಚಾಂಪಿಯನ್ಸ್​ ಟ್ರೋಫಿ ವಿವಾರವಾಗಿಯೂ ಮಾತುಕತೆ ನಡೆಸಲಾಗುವುದು ಎಂದು ವರದಿಯಾಗಿದೆ. ಈ ಸಂಬಂಧ ಇಬ್ಬರ ಜತೆ ಪ್ರತ್ಯೇಕವಾಗಿ ಬಿಸಿಸಿಐ ಸಭೆ ನಡೆಸಿದ್ದು, ಅಂತಿಮವಾಗಿ ಯಾರ ಆಯ್ಕೆಗೆ ಮಣೆ ಹಾಕಲಿದೆ ಎಂದು ಕಾದು ನೋಡಬೇಕಿದೆ.

ಇನ್ನೂ ಚಾಂಪಿಯನ್ಸ್​ ಟ್ರೋಫಿಯಲ್ಲಿ ಶಮಿ ಕಮ್​ಬ್ಯಾಕ್​ ಮಾಡುವ ವಿಚಾರವಾಗುಯೂ ಕೂಡ ಸಭೆಯಲ್ಲಿ ಚರ್ಚಿಸಲಾಗುತ್ತಿದ್ದು, ಶಮಿ ಫಿಟ್ನೆಸ್​ ಆಧರಿಸಿ ಮಣೆ ಹಾಕಲು ಆಯ್ಕೆ ಸಮಿತಿ ನಿರ್ಧರಿಸಿದೆ. ಈಗಾಗಲೇ ಶಮಿ ಪುನಶ್ಚೇತನ ಕೇಂದ್ರದಲ್ಲಿದ್ದು, ಫಿಟ್ನೆಸ್​ ಸರ್ಟಿಫಿಕೇಟ್​ಗಾಗಿ ಎದುರು ನೋಡುತ್ತಿದ್ದಾರೆ. ಒಂದು ವೇಳೆ ಶಮಿ ಫಿಟ್​ ಆದಲ್ಲಿ ತಂಡಕ್ಕೆ ವಾಪಸ್​ ಆಗುವುದಂತು ಖಚಿತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net