

ಬೆಂಗಳೂರು: ಲಾಕ್ಡೌನ್ ಸಡಿಲಿಕೆಗೆ ಹೊಂದಾಣಿಕೆಯಾಗುವಂತೆ ಕಂಟೇನ್ಮೆಂಟ್ ಪ್ರದೇಶ ಹಾಗೂ ಬಫರ್ ವಲಯಗಳಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವ ಮೂಲಕ ಬಿಬಿಎಂಪಿ ಸೋಮವಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಹೊಸ ಮಾರ್ಗಸೂಚಿ ಪ್ರಕಾರ, ಯಾವುದೇ ವ್ಯಕ್ತಿಗೆ ಸೋಂಕು ಕಂಡುಬಂದಲ್ಲಿ ಆತನ ಮನೆಯಿಂದ 100 ಮೀ. ಸುತ್ತಲಿನ ಪ್ರದೇಶವನ್ನು 28 ದಿನ ಕಂಟೇನ್ಮೆಂಟ್ ಮಾಡಲಾಗುತ್ತದೆ. ಜತೆಗೆ ಸೋಂಕಿತರಿಂದಾಗಿ 10ಕ್ಕೂ ಹೆಚ್ಚು ಪ್ರಥಮ ಅಥವಾ ದ್ವಿತೀಯ ಸಂರ್ಪತರು ಕಂಡು ಬಂದಲ್ಲಿ ಅದನ್ನು ‘ವಾರ್ಡ್ ಕಂಟೇನ್ಮೆಂಟ್’ ಮಾಡಲಾಗುತ್ತದೆ. ಈ ಮೊದಲು ಕಂಟೇನ್ಮೆಂಟ್ ಪ್ರದೇಶದ 1 ಕಿ.ಮೀ. ಸುತ್ತಲಿನ ಪ್ರದೇಶವನ್ನು ‘ಬಫರ್ ಜೋನ್’ ಎಂದು ಗುರುತಿಸಲಾಗುತ್ತಿತ್ತು. ಅದನ್ನು 200 ಮೀ.ಗೆ ಇಳಿಕೆ ಮಾಡಲಾಗಿದೆ.
ಇದನ್ನೂ ಓದಿ: 1974ರಿಂದ ತಿಮ್ಮಪ್ಪನ 126 ಆಸ್ತಿ ಮಾರಾಟ
ಹಿಂದೆ, ಅಪಾರ್ಟ್ವೆುಂಟ್ನಲ್ಲಿ ವಾಸವಿದ್ದ ವ್ಯಕ್ತಿಗೆ ಸೋಂಕು ದೃಢಪಟ್ಟರೆ, ಇಡೀ ಅಪಾರ್ಟ್ವೆುಂಟ್ನ್ನು ಕಂಟೇನ್ಮೆಂಟ್ ಮಾಡಲಾಗುತ್ತಿತ್ತು. ಈಗ ಸೋಂಕಿತನ ಮನೆಯ ಮೇಲಿನ ಮತ್ತು ಕೆಳ ಅಂತಸ್ತಿನ ಮನೆಗಳ ನಿವಾಸಿಗಳನ್ನು ಮಾತ್ರ ಕ್ವಾರಂಟೈನ್ ಮಾಡಲಾಗುತ್ತದೆ. ಪ್ರತ್ಯೇಕ ಮನೆಯಲ್ಲಿ ಸೋಂಕಿತ ಕಂಡುಬಂದರೆ, ಮನೆಯ ಬೀದಿಯನ್ನು ಹಾಗೂ ವಾಣಿಜ್ಯ ಪ್ರದೇಶದಲ್ಲಿ ಮನೆಯಿದ್ದರೆ ನಿರ್ದಿಷ್ಟ ಭಾಗದಲ್ಲಿ ಕಂಟೇನ್ಮೆಂಟ್ ಜಾರಿಗೊಳಿಸಲಾಗುತ್ತದೆ. ಕೊಳೆಗೇರಿ ಪ್ರದೇಶದಲ್ಲಿ ಸೋಂಕಿತ ಕಂಡುಬಂದರೆ ಅವರ ಮನೆಯ ಹಿಂದಿನ ಮತ್ತು ಮುಂದಿನ 2 ಬೀದಿಗಳಿಗೆ ಜನರ ಪ್ರವೇಶ ಅಥವಾ ಹೊರಬರುವುದನ್ನು ನಿರ್ಬಂಧಿಸಲಾಗುತ್ತದೆ.
ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಎಕ್ಸಾಂ ಕಸಿವಿಸಿ
ಕಂಟೇನ್ಮೆಂಟ್ ನಿರ್ವಹಣಾ ಕೇಂದ್ರ: ಯಾವುದೇ ಪ್ರದೇಶದಲ್ಲಿ ಸೋಂಕಿತರು ಪತ್ತೆಯಾದರೂ, ಅಲ್ಲಿ ಕಂಟೇನ್ಮೆಂಟ್ ಜಾರಿಗೊಳಿಸಿ ಕಮಾಂಡರ್ ನೇಮಿಸುವ ಮೂಲಕ ಸೋಂಕು ಹರಡುವುದನ್ನು ತಡೆಯಲು ಕ್ರಮ ವಹಿಸಲಾಗುತ್ತದೆ. ಜತೆಗೆ ಹತ್ತಿರದಲ್ಲಿ ಮೇಲ್ವಿಚಾರಣಾ ಕೇಂದ್ರ ಆರಂಭಿಸಿ ಪಾಲಿಕೆಯ ಎಲ್ಲ ಆದೇಶ ಮತ್ತು ಸೂಚನೆಗಳನ್ನು ಪಾಲಿಸಲು ಕಮಾಂಡರ್ಗೆ ಸೂಚಿಸಲಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಪ್ರತಿಕ್ರಿಯಿಸಲು ಸದಾ ಜಾಗೃತರಾಗಿರುವಂತೆ ಕಮಾಂಡರ್ಗೆ ತಿಳಿಸಲಾಗಿದೆ.