

ಬೆಂಗಳೂರು: ಹಿರಿಯ ನಟ ಶಶಿಕುಮಾರ್ ಅವರ ಮಗ ಅಕ್ಷಿತ್ ಶಶಿಕುಮಾರ್ ಇದೀಗ ಸದ್ದಿಲ್ಲದೆ ‘ಸಮಿತ್’ ಶೀರ್ಷಿಕೆಯ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಮುನ್ನ ಒಪ್ಪಿಕೊಂಡಿದ್ದ ಸೀತಾಯಣ ಚಿತ್ರ ಕನ್ನಡದ ಜತೆಗೆ ತೆಲುಗು ಮತ್ತು ತಮಿಳಿಗೆ ಡಬ್ ಆಗಿ ಬಿಡುಗಡೆಯಾಗುತ್ತಿದೆ.
ಈಗ ಎರಡನೇ ಚಿತ್ರವೂ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ತಯಾರಾಗಿ, ಮಲಯಾಳಂಗೆ ಡಬ್ ಆಗಿ ರಿಲೀಸ್ ಆಗಲಿದ್ದು, ಇತ್ತೀಚೆಗಷ್ಟೇ ಚಿತ್ರದ ಮುಹೂರ್ತ ನೆರವೇರಿದೆ. ನೈಜ ಘಟನೆಯನ್ನು ಆಧರಿಸಿ ತಯಾರಾಗುತ್ತಿರುವ ಈ ಚಿತ್ರವನ್ನು ಸತೀಶ್ ಮಲೆಂಪಾಟಿ ನಿರ್ದೇಶಿಸುತ್ತಿದ್ದಾರೆ. ಅಕ್ಷಿತ್ಗೆ ನಾಯಕಿಯರಾಗಿ ಚಾಂದಿನಿ ಮತ್ತು ಅನುವರ್ಣ ನಟಿಸುತ್ತಿದ್ದಾರೆ.