ಹೊಸ ಮೈಲಿಗಲ್ಲು: ಅರ್ಹ ಜನಸಂಖ್ಯೆಯ ಕಾಲು ಭಾಗಕ್ಕೆ ಎರಡೂ ಡೋಸ್ ಲಸಿಕೆ

vacc
Published on

ನವದೆಹಲಿ: ಭಾರತದಲ್ಲಿ ಕರೊನಾ ಲಸಿಕೆಗೆ ಅರ್ಹ ವಯೋಮಾನದಲ್ಲಿರುವ ಪ್ರತಿ ನಾಲ್ಕು ಜನರಲ್ಲಿ ಒಬ್ಬ ವ್ಯಕ್ತಿ ಪೂರ್ಣ ಲಸಿಕೀಕೃತವಾಗಿದ್ದಾರೆ ಎಂದು ಸರ್ಕಾರಿ ಅಂಕಿಅಂಶಗಳು ಹೇಳಿವೆ. ಬುಧವಾರ(ಸೆಪ್ಟೆಂಬರ್​ 29)ದ ಕೋವಿನ್​ ಪೋರ್ಟಲ್​ನ ಮಾಹಿತಿಯ ಪ್ರಕಾರ 23.7 ಕೋಟಿ ಭಾರತೀಯರಿಗೆ ಎರಡೂ ಡೋಸ್​ ಲಸಿಕೆ ನೀಡಲಾಗಿದೆ.

ಈ ಬಗ್ಗೆ ಟ್ವಿಟರ್​ ಮೂಲಕ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವ ಮನಸೂಖ್ ಮಾಂಡವೀಯ ಅವರು, "ಭಾರತದ ನಿರಂತರತೆ ಮತ್ತು ದೃಢ ನಿಶ್ಚಯವು ಜಾಗತಿಕ ಲಸಿಕಾ ಅಭಿಯಾನದಲ್ಲಿ ಉದ್ದಕ್ಕೂ ಅಲೆಗಳನ್ನು ಸೃಷ್ಟಿಸುತ್ತಿದೆ. ಅರ್ಹ ಜನಸಂಖ್ಯೆಯ 1/4 ಭಾಗ ಅಂದರೆ 23.7 ಕೋಟಿ ಜನರು ಕೋವಿಡ್-19 ವಿರುದ್ಧ ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದಾರೆ" ಎಂದು ಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net