More

    ಅಮಾಯಕನ ‘ವಿಚಾರಣೆ’; ಪೊಲೀಸರ ಚಿತ್ರಹಿಂಸೆ …

    ಬೆಂಗಳೂರು: ಅಮಾಯಕರು ಮತ್ತು ಪೊಲೀಸ್​ ದೌರ್ಜನ್ಯದ ಕುರಿತು ಚಿತ್ರಗಳಿಗೇನೂ ಬರವಿಲ್ಲ. ಈಗಾಗಲೇ ಸಾಕಷ್ಟು ಚಿತ್ರಗಳು ಬಿಡುಗಡೆಯಾಗಿದ್ದು, ಈಗ ಪೊಲೀಸ್​ ವಿಚಾರಣೆಯ ಕುರಿತು ‘ವಿಚಾರಣೆ’ ಎಂಬ ಚಿತ್ರ ಸದ್ದಿಲ್ಲದೆ ಸೆಟ್ಟೇರಿದೆ. ಇದೊಂದು ಹೊಸಬರ ಚಿತ್ರವಾಗಿದ್ದು, ಕಲಾವಿದರು ಮತ್ತು ತಂತ್ರಜ್ನರ ವಿಭಾಗದಲ್ಲಿ ಹೊಸಬರೇ ತುಂಬಿಕೊಂಡಿದ್ದಾರೆ.

    ಇದನ್ನೂ ಓದಿ: 14 ವರ್ಷಗಳ ನಂತರ ಜತೆಯಾಗಿ ನಟಿಸುತ್ತಿದ್ದಾರೆ ವಿಜಯ್​-ತ್ರಿಷಾ!

    ಯಶ ಫಿಲಂಸ್ ಬ್ಯಾನರ್​ನಡಿ ಈ ಚಿತ್ರವನ್ನು ಆರ್. ಭಾಗ್ಯ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಅವರು , ‘ಪಟ್ಟಾಭಿಷೇಕ’, ‘ಬೆಲ್’ ಮತ್ತು ‘ ಎಫ್ ಐ ಆರ್’ ಎಂಬ ಚಿತ್ರಗಳನ್ನು ನಿರ್ಮಿಸಿದರು. ಈ ಚಿತ್ರವನ್ನು ಎನ್. ಅಕುಲ್ ನಿರ್ದೇಶನ ಮಾಡುತ್ತಿದ್ದು. ಇವರು ಮೂಲತಃ ನೃತ್ಯ ನಿರ್ದೇಶಕರು. ಇದಕ್ಕೂ ಮೊದಲು 150ಕ್ಕೂ ಹೆಚ್ಚು ಸಿನಿಮಾಗಳಿಗೆ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿರುವ ಅಕುಲ್​, ಈ ಚಿತ್ರದ ಮೂಲಕ ನಿರ್ದೇಶಕನ ಪಟ್ಟ ಅಲಂಕರಿಸುತ್ತಿದ್ದಾರೆ.

    ‘ವಿಚಾರಣೆ’ ಸಿನಿಮಾ ಕುರಿತು ಹೇಳುವ ನಿರ್ದೇಶಕ ಅಕುಲ್, ‘ಒಂದು ಘಟನೆಯಲ್ಲಿ ಅಮಾಯಕನೊಬ್ಬ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಾನೆ. ಆ ಅಮಾಯಕ ಯಾವುದೇ ತಪ್ಪು ಮಾಡದಿದ್ದರೂ, ಪೋಲೀಸರಿಂದ ಚಿತ್ರಹಿಂಸೆ ಅನುಭವಿಸುತ್ತಾನೆ. ಅವನು ತಪ್ಪು ಮಾಡಿದ್ದು ಏನು? ಅನ್ನೋದು ಸಸ್ಪೆನ್ಸ್. ಜೊತೆಗೆ ಆ ಅಮಾಯಕನನ್ನು ಮದುವೆಯಾದ ಹುಡುಗಿ, ಈ ಘಟನೆಯಿಂದ ಎಷ್ಟೆಲ್ಲಾ ತೊಂದರೆ ಅನುಭವಿಸುತ್ತಾಳೆ? ಕೊನೆಗೆ ಆ ಹುಡುಗ ಪೊಲೀಸರ ಕೈಯಿಂದಹೊರ ಬರುತ್ತಾನಾ ಇಲ್ಲವಾ ಎಂಬುದು ಚಿತ್ರದ ಒನ್ ಲೈನ್ ಸ್ಟೋರಿ’ ಎನ್ನುತ್ತಾರೆ.

    ಇದನ್ನೂ ಓದಿ: ಛತ್ರಪತಿ ಶಿವಾಜಿಯಾಗಿ ಅಕ್ಷಯ್​ ಕುಮಾರ್​ ಹೀಗೆ ಕಾಣ್ತಾರೆ ನೋಡಿ …

    ಈ ಚಿತ್ರದಲ್ಲಿ ಮಡೆನೂರು ಮನು, ಜಾನು, ಕೇಶವ್, ಪ್ರಮೋದ್ ಶೆಟ್ಟಿ, ನಾಗೇಂದ್ರ ಅರಸ್ ಮುಂತಾದವರು ಅಭಿನಯಿಸುತ್ತಿದ್ದಾರೆ. ಸತೀಶ್​ ಬಾಬು ಅವರ ಸಂಗೀತ ಮತ್ತು ರಮೇಶ್​ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

    ವಿದೇಶದಲ್ಲೂ ಜೋರಾಗಿದೆ ‘ವಿಜಯಾನಂದ’ ಚಿತ್ರದ ಹವಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts