ಎಕ್ಸ್‌ಪರ್ಟ್‌ನಿಂದ ಶೈಕ್ಷಣಿಕ ಲೋಕದಲ್ಲಿ ಹೊಸ ಇತಿಹಾಸ, ನೀಟ್ ಪ್ರವೇಶ ಪರೀಕ್ಷೆಯಲ್ಲಿ ಅರ್ಜುನ್ ಕಿಶೋರ್ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ

mng-june5-expert3
ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಸಾಧನೆಮಾಡಿದ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು.
Published on

ಮಂಗಳೂರು: ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅರ್ಜುನ್ ಕಿಶೋರ್ ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ರ‌್ಯಾಂಕ್ ಪಡೆಯುವ ಮೂಲಕ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆ ಹೊಸ ಇತಿಹಾಸ ನಿರ್ಮಿಸಿದೆ ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಹೇಳಿದರು.

ಕೊಡಿಯಾಲ್‌ಬೈಲ್‌ನ ಎಕ್ಸ್‌ಪರ್ಟ್ ಪಿಯು ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ಈ ಬಾರಿ ನಡೆದ ನೀಟ್ ಪರೀಕ್ಷೆಯಲ್ಲಿ ಎಕ್ಸ್‌ಪರ್ಟ್ ವಿದ್ಯಾರ್ಥಿ ಅರ್ಜುನ್ ಕಿಶೋರ್ ಅವರು ನೀಟ್‌ನ ಒಟ್ಟು 720 ಅಂಕಗಳಲ್ಲಿ 720 ಅಂಕ ಪಡೆದು ಮೊತ್ತ ಮೊದಲ ಭಾರಿಗೆ ಅಖಿಲ ಭಾರತ ಮಟ್ಟದಲ್ಲಿ ಜನರಲ್ ಮೆರಿಟ್ ವಿಭಾಗದಲ್ಲಿ ಪ್ರಥಮ ರ‌್ಯಾಂಕ್ ನೀಟ್‌ನಲ್ಲಿ ದೊರೆತಿದೆ. ಅಂತರಾಷ್ಟ್ರೀಯ ಗುಣಮಟ್ಟದ ಶೈಕ್ಷಣಿಕ ಹಬ್ ಎಂದು ಗುರುತಿಸಿಕೊಂಡಿರುವ ಮಂಗಳೂರಿನ ಪಾಲಿಗೆ ಇದೊಂದು ಹೆಗ್ಗಳಿಕೆಯ ವಿಚಾರವಾಗಿದೆ ಎಂದರು.

ಒಟ್ಟು ಕಾಲೇಜಿನ 1551 ವಿದ್ಯಾರ್ಥಿಗಳಲ್ಲಿ 1508ರಷ್ಟು ಅಂದರೆ ಶೇ. 97ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಹದಿನಾಲ್ಕು ವಿದ್ಯಾರ್ಥಿಗಳು 700 ಹಾಗೂ ಅದಕ್ಕಿಂತ ಅಧಿಕ ಪಡೆದರೆ, 55 ವಿದ್ಯಾರ್ಥಿಗಳು 675 ಅಂಕಕ್ಕಿಂತ ಅಧಿಕ, 109 ವಿದ್ಯಾರ್ಥಿಗಳು 650 ಅಂಕಕ್ಕಿಂತ ಅಧಿಕ, 176 ವಿದ್ಯಾರ್ಥಿಗಳು 625 ಅಂಕಕ್ಕಿಂತ ಅಧಿಕ, 271 ವಿದ್ಯಾರ್ಥಿಗಳು 600 ಅಂಕಕ್ಕಿಂತ ಅಧಿಕ, 359 ವಿದ್ಯಾರ್ಥಿಗಳು 575ಕ್ಕಿಂತ ಅಧಿಕ, 451 ವಿದ್ಯಾರ್ಥಿಗಳು 550 ಅಂಕಕ್ಕಿಂತ ಅಧಿಕ, 534 ವಿದ್ಯಾರ್ಥಿಗಳು 525 ಅಂಕಕ್ಕಿಂತ ಅಧಿಕ, 628 ವಿದ್ಯಾರ್ಥಿಗಳು 500 ಅಂಕಕ್ಕಿಂತ ಅಧಿಕ, 731 ವಿದ್ಯಾರ್ಥಿಗಳು 475 ಅಂಕಕ್ಕಿಂತ ಅಧಿಕ, 815 ವಿದ್ಯಾರ್ಥಿಗಳು 450 ಅಂಕಕ್ಕಿಂತ ಅಧಿಕ, 895 ವಿದ್ಯಾರ್ಥಿಗಳು 425 ಅಂಕಕ್ಕಿಂತ ಅಧಿಕ, 977 ವಿದ್ಯಾರ್ಥಿಗಳು 400 ಅಂಕಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ ಎಂದರು.

ಎಕ್ಸ್ ಪರ್ಟ್ ಸಂಸ್ಥೆಯ ಉಪಾಧ್ಯಕ್ಷರಾದ ಡಾ. ಉಷಾ ಪ್ರಭಾ ಎನ್ ನಾಯಕ್, ಐಟಿ ನಿರ್ದೇಶಕ ಅಂಕುಶ್ ಎನ್. ನಾಯಕ್, ವಳಚ್ಚಿಲ್ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಎನ್.ಕೆ. ವಿಜಯನ್, ಶೈಕ್ಷಣಿಕ ಪ್ರಿನ್ಸಿಪಾಲ್ ಪ್ರೊ. ಸುಬ್ರಹ್ಮಣ್ಯ ಉಡುಪ, ಕೊಡಿಯಾಲ್ ಬೈಲ್ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಪ್ರೊ.ರಾಮಚಂದ್ರ ಭಟ್, ಎಐಸಿ ವಿಭಾಗದ ಸಂಯೋಜಕ ಪ್ರೊ. ಶ್ಯಾಮ್ ಪ್ರಸಾದ್, ಕೋರ್ ಕಮಿಟಿ ಸಮಿತಿ ಸದಸ್ಯ ಪ್ರೊ. ವಿನಯ್‌ಕುಮಾರ್, ಕೋಚಿಂಗ್ ವಿಭಾಗದ ಕೋ ಆರ್ಡಿನೇಟರ್ ಗುರುದತ್, ಕರುಣಾಕರ ಬಳ್ಕೂರು ಇದರ ಜತೆಗೆ ರ‌್ಯಾಂಕ್ ವಿಜೇತ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರು ಉಪಸ್ಥಿತರಿದ್ದರು.

----------------------

ಎಕ್ಸ್‌ಪರ್ಟ್‌ಗಳ ಅಮೋಘ ಸಾಧನೆ

720ರಲ್ಲಿ 715 ಅಂಕವನ್ನು ಪಡೆದ ಕಾಲೇಜಿನ ವಿದ್ಯಾರ್ಥಿ ಸಂಜನಾ ಸಂತೋಷ್ ಕಟ್ಟಿ ಜನರಲ್ ಮೆರಿಟ್ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ 255ನೇ ರ‌್ಯಾಂಕ್, 710 ಅಂಕ ಪಡೆದ ಉತ್ಸವ್ ಆರ್ 533ನೇ ರ‌್ಯಾಂಕ್, 710 ಅಂಕ ಪಡೆದ ಅಮನ್ ಅಬ್ದುಲ್ ಹಕೀಂ 592ನೇ ರ‌್ಯಾಂಕ್, 705 ಅಂಕ ಪಡೆದ ವಿಘ್ನೇಶ್ ಎಂ.ಆರ್. 1114ನೇ ರ‌್ಯಾಂಕ್, 705 ಅಂಕ ಪಡೆದ ಮಿಹಿರ್ ಗಿರೀಶ್ ಕಾಮತ್ 1164ನೇ ರ‌್ಯಾಂಕ್ ಪಡೆದರೆ, 705 ಅಂಕ ಪಡೆದ ಸಾಯಿ ಭೇಶಜ್ ಜಿ 1223ನೇ ರ‌್ಯಾಂಕ್, 700 ಅಂಕ ಪಡೆದ ಲಿಂಗರಾಜ್ ಹೀರೆಮಠ್ 1708ನೇ ರ‌್ಯಾಂಕ್, 700 ಅಂಕ ಪಡೆದ ಪ್ರಣವ್ ಟಾಟಾ ಆರ್. 1737ನೇ ರ‌್ಯಾಂಕ್, 700 ಅಂಕ ಪಡೆದ ಪ್ರತೀಕ್ ಪಿ. ಗೌಡ 1931ನೇ ರ‌್ಯಾಂಕ್, 700 ಅಂಕ ಪಡೆದ ಆಕಾಶ್ ಎಸ್. ಕನಕವಾಡಿ 2013ನೇ ರ‌್ಯಾಂಕ್, 700 ಅಂಕ ಪಡೆದ ಸಂಜನ್ ಡಿ. 2110ನೇ ರ‌್ಯಾಂಕ್, 700 ಅಂಕ ಪಡೆದ ಸ್ವಸ್ತಿಕ್ ಅಖಿಲ್ ಶರ್ಮಾ 2197ನೇ ರ‌್ಯಾಂಕ್, 700 ಅಂಕ ಪಡೆದ ಲೋಚನ್ ಬಿ.ಎಚ್. 2198ನೇ ರ‌್ಯಾಂಕ್ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ನೀಟ್ ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ. 56ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಅರ್ಹತೆ ಪಡೆದರೆ, ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಶೇ. 97ರಷ್ಟು ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net