ಮೂರನೇ ವರ್ಷಕ್ಕೆ ಹೆಚ್ಚಿದ ಬೇಡಿಕೆ : ರವಿ ಪೂಜಾರಿ ಹರ್ಷ

New Project (23)
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಕಳೆದ 2 ವರ್ಷಗಳಲ್ಲಿ ಯಶಸ್ವಿ ತಿರುಗಾಟ ನಡೆಸಿರುವ ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳವು ಈ ವರ್ಷ ‘ಕಾಲ ಕಲ್ಜಿಗ- ಸತ್ಯ ತೆರಿನಗ’ ನೂತನ ಪ್ರಸಂಗದೊಂದಿಗೆ ಹೆಚ್ಚು ಯಕ್ಷಗಾನ ಪ್ರದರ್ಶಿಸಲಿದೆ. ಮೇಳದ ಯಕ್ಷಗಾನಕ್ಕೆ ದೇಶ- ವಿದೇಶಗಳಿಂದ ಬೇಡಿಕೆ ಬಂದಿದೆ. ಸವಾಲುಗಳಿದ್ದರೂ ಪ್ರೇಕ್ಷಕರ ಒಲವು ಮೇಳಕ್ಕಿದೆ ಎಂದು ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ಹೇಳಿದರು.

ವಾಮಂಜೂರು ಶ್ರೀರಾಮ ಭಜನಾ ಮಂದಿರದ ವಠಾರದಲ್ಲಿ ಭಾನುವಾರ ಶ್ರೀ ಆದಿ ಧೂಮಾವತಿ ಯಕ್ಷಗಾನ ಮಂಡಳಿ ಶ್ರೀ ಗೆಜ್ಜೆಗಿರಿ ಮೇಳದವರ ಈ ವರ್ಷದ ನೂತನ ಪ್ರಸಂಗ, ದೇವದಾಸ್ ಈಶ್ವರಮಂಗಳ ವಿರಚಿತ ‘ಕಾಲ ಕಲ್ಜಿಗ-ಸತ್ಯ ತೆರಿನಗ’ ಬಿಡುಗಡೆ ಹಾಗೂ ಪ್ರಥಮ ಪ್ರದರ್ಶನ ಸಂದರ್ಭ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಸಕ ಡಾ.ಭರತ್ ಶೆಟ್ಟಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶ್ರೀ ಕ್ಷೇತ್ರ ಗೋಕರ್ಣನಾಥೇಶ್ವರ ಕುದ್ರೋಳಿ ಕೋಶಾಧಿಕಾರಿ ಪದ್ಮರಾಜ್, ಮನಪಾ ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಉದ್ಯಮಿ ಪ್ರಶಾಂತ್ ಮಸ್ಕತ್, ಹರೀಶ್ ಮೂಡುಶೆಡ್ಡೆ ಶುಭ ಹಾರೈಸಿದರು.

ಮಾಜಿ ಕಾರ್ಪೋರೇಟರ್ ಜಯಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ನಗರ ಉತ್ತರ ಬಿಜೆಪಿ ಮಂಡಲದ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ವಾಮಂಜೂರಿನಲ್ಲಿ ಗೆಜ್ಜೆಗಿರಿ ಮೇಳದ ಯಕ್ಷಗಾನ ಆಯೋಜಕ ಮೋಹನದಾಸ್ ಬಂಗೇರ, ಮೇಳದ ಸಂಚಾಲಕ ನವೀನ್ ಸುವರ್ಣ, ಉದ್ಯಮಿಗಳಾದ ರಾಜ್‌ಕುಮಾರ್ ಶೆಟ್ಟಿ ತಿರುವೈಲುಗುತ್ತು, ಓಂ ಪ್ರಕಾಶ್ ಶೆಟ್ಟಿ ವಾಮಂಜೂರು, ಉದ್ಯಮಿ ದಿವಾಕರ ಆಚಾರ್ಯ, ಮೂಡುಶೆಡ್ಡೆ ಗ್ರಾಪಂ ಅಧ್ಯಕ್ಷ ಅನಿಲ್ ಕುಮಾರ್, ಸಮಾಜಸೇವಕ ಮೋಹನ್ ಪಚ್ಚನಾಡಿ, ತಾಪಂ ಮಾಜಿ ಸದಸ್ಯ ಹರೀಶ್ ಮೂಡುಶೆಡ್ಡೆ, ಶೇಖರ ಪೂಜಾರಿ ತೊಪೆಕಲ್, ಸದಾನಂದ ಪೂಜಾರಿ, ಚಂದ್ರಶೇಖರ ವಾಮಂಜೂರು, ನವೀನ್ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಸುಖ್‌ಪಾಲ್ ಪೊಳಲಿ ಹಾಗೂ ಪುರುಷೋತ್ತಮ ವಾಮಂಜೂರು ಅವರನ್ನು ಗೌರವಿಸಲಾಯಿತು. ಸ್ಥಳೀಯ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಮುಖಂಡ ಉಮೇಶ್ ಕೋಟ್ಯಾನ್ ವಾಮಂಜೂರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net