More

    ಇನ್ನು ಕ್ರೀಡೆ ಪಠ್ಯೇತರವಲ್ಲ, ಪಠ್ಯಕ್ರಮದ ಭಾಗ

    ಮುಂಬೈ: ದೇಶದ ಹೊಸ ಶಿಕ್ಷಣ ನೀತಿಯ ಅನ್ವಯ ಕ್ರೀಡೆಯನ್ನು ಪಠ್ಯೇತರ ಚಟುವಟಿಕೆಯಾಗಿ ಪರಿಗಣಿಸಲಾಗುವುದಿಲ್ಲ. ಕ್ರೀಡೆಯೂ ಪಠ್ಯಕ್ರಮದ ಭಾಗವಾಗಿರುತ್ತದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

    ಇದನ್ನೂ ಓದಿ:  ಕೇರಳ ನರ್ಸ್ ಸೇವೆಗೆ ಗಿಲ್‌ಕ್ರಿಸ್ಟ್ ಶಹಬ್ಬಾಸ್ ಗಿರಿ…!

    21ನೇ ಶತಮಾನದಲ್ಲಿ ಒಲಿಂಪಿಸಂ ಮತ್ತು ಒಲಿಂಪಿಕ್ ಶಿಕ್ಷಣ ಎಂಬ ವಿಷಯದ ಅಂತಾರಾಷ್ಟ್ರೀಯ ಆನ್‌ಲೈನ್ ಕಾನ್ಫರೆನ್ಸ್ ಉದ್ಘಾಟಿಸಿ ಮಾತನಾಡಿದ ರಿಜಿಜು, ‘ಕ್ರೀಡೆಯೂ ಶಿಕ್ಷಣವೇ ಆಗಿರುತ್ತದೆ. ಕ್ರೀಡೆ-ಶಿಕ್ಷಣ ಎರಡೂ ಒಂದೇ ಆಗಿದೆ. ಹೀಗಾಗಿ ಕ್ರೀಡೆಯನ್ನು ಪಠ್ಯೇತರ ಚಟುವಟಿಕೆ ಎನ್ನಬಾರದು. ಕ್ರೀಡೆಯನ್ನು ಐಚ್ಛಿಕ ವಿಷಯವಾಗಿಯೂ ನೋಡಬಾರದು. ಕ್ರೀಡೆಯೂ ಶಿಕ್ಷಣದ ಭಾಗ ಎಂಬುದನ್ನು ಎಲ್ಲರೂ ಅಂಗೀಕರಿಸಬೇಕು’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಭಾರತದ ಮೊದಲ ಏಕದಿನ ಗೆಲುವಿಗೆ 45 ವರ್ಷ…!

    ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿಯನ್ನು ಸ್ಥಾಪಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಹೇಳಿರುವ ರಿಜಿಜು, ಕರೊನಾ ನಿಗ್ರಹಕ್ಕೆ ಬಂದ ಬಳಿಕ ದೇಶದಲ್ಲಿ ಒಲಿಂಪಿಕ್ ಮ್ಯೂಸಿಯಂ ಆರಂಭಿಸುವ ಬಗ್ಗೆ ಚರ್ಚೆ ನಡೆಯಲಿದೆ ಎಂದಿದ್ದಾರೆ.

    ಮಹಿಳಾ ಕ್ರಿಕೆಟ್​ನಲ್ಲಿ ಚೆಂಡು ಸಣ್ಣದಾಗಬೇಕು ಎಂದಿದ್ದೇಕೆ ಸೋಫಿ ಡಿವೈನ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts