More

    ಶಿಕ್ಷಣ ಇಲ್ಲ, ಉದ್ಯೋಗ ಕೌಶಲ್ಯ ಅಂತೂ ಇಲ್ವೇ ಇಲ್ಲ ಆದರೂ ಈ ವ್ಯಕ್ತಿಯ ಸಂಬಳ ಕೇಳಿದ್ರೆ ನೀವು ದಂಗಾಗ್ತೀರಾ!

    ಹೆಚ್ಚಿನ ಶಿಕ್ಷಣ ಅಥವಾ ವೃತ್ತಿಪರ ಕೌಶಲ್ಯವಿಲ್ಲದ ವ್ಯಕ್ತಿಗೆ ನಮ್ಮ ದೇಶದಲ್ಲಿ ಉದ್ಯೋಗ ಸಿಗಬಹುದೇ? ಒಂದು ವೇಳೆ ಸಿಕ್ಕರೂ ಅವರ ಸಂಬಳ ಎಷ್ಟಿರಬಹುದು? ಹೇಳಿಕೊಳ್ಳುವಷ್ಟು ಇರುವುದಿಲ್ಲ. ಏಕೆಂದರೆ, ಉನ್ನತ ವಿದ್ಯಾಭ್ಯಾಸ ಮಾಡಿದವರಿಗೆ ಉದ್ಯೋಗ ಸಿಗುವುದು ಕಷ್ಟವಾಗಿರುವ ಈ ಕಾಲದಲ್ಲಿ ವಿದ್ಯಾಭ್ಯಾಸ ಇಲ್ಲದವರಿಗೆ ಕೆಲಸ ಸಿಗುವುದು ಸುಲಭವಲ್ಲ.

    ಆದರೆ, ಯಾವುದೇ ಶಿಕ್ಷಣ ಅಥವಾ ವಿಶೇಷ ಕೌಶಲ್ಯವಿಲ್ಲದ ವ್ಯಕ್ತಿಯು ವಾರ್ಷಿಕ ವೇತನವಾಗಿ ಸುಮಾರು 1.3 ಕೋಟಿ ರೂಪಾಯಿಗಳನ್ನು ಗಳಿಸುತ್ತಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ? ಹೌದು, ನೀವು ಓದುತ್ತಿರುವುದು ಸರಿಯಾಗಿಯೇ ಇದೆ. ಅಮೆರಿಕದ ಕೋರಿ ರಾಕ್‌ವೆಲ್ ಎಂಬಾತ ಇಷ್ಟೊಂದು ಸಂಬಳ ಪಡೆಯುತ್ತಿದ್ದಾರೆ.

    39 ವರ್ಷದ ಕೋರೆ ಅವರಿಗೆ ಹೆಚ್ಚಿನ ಶಿಕ್ಷಣ ಅಥವಾ ಕೌಶಲ್ಯ ಇರಲಿಲ್ಲ. ಜೀವನದಲ್ಲಿ ದಿಕ್ಕು ತೋಚದಂತಾಗಿ, ಲಾಸ್ ಏಂಜಲೀಸ್‌ನಲ್ಲೇ ಶಾಶ್ವತವಾಗಿ ಸಿಲುಕಿಬಿಡುತ್ತೇನೋ ಎಂಬ ಚಿಂತೆಯಲ್ಲಿ ಮುಳುಗಿದ್ದರು. ಕೆಲಸವಿಲ್ಲದೆ, ಮದುವೆ ಮತ್ತು ಮಕ್ಕಳು ಹೊಂದುವ ಆಸೆಯು ಕೂಡ ನಿರಾಸೆಯಾಗಿತ್ತು. ಆದರೆ, ಇದೀಗ ಕೋರೆ ಅವರ ಜೀವನ ಬದಲಾಗಿದೆ.

    ಕೋರೆ ಅವರ ಜೀವನದಲ್ಲಿ ಅಂಥಾ ಪವಾಡ ಏನು ನಡೆಯಿತು ಅಂದರೆ, ತಾಮ್ರದ ಗಣಿಯಲ್ಲಿ ಗಣಿಗಾರನಾಗಿ ಕೋರೆ ಕೆಲಸ ಆರಂಭಿಸಿದ್ದಾರೆ. ಆರಂಭದಲ್ಲಿ ಈ ಕೆಲಸದ ಒಪ್ಪಂದವು ಆರು ತಿಂಗಳಾಗಿತ್ತು, ಆದರೆ ಕಂಪನಿಯು ಅದನ್ನು ಹಲವಾರು ಬಾರಿ ವಿಸ್ತರಿಸಿತು.

    ಉತ್ಖನನ ಕೆಲಸವು ಬೆಳಗ್ಗೆ 6 ಗಂಟೆಗೆ ಪ್ರಾರಂಭವಾಗಿ ಸಂಜೆ 6 ಕ್ಕೆ ಕೊನೆಗೊಳ್ಳುತ್ತದೆ ಮತ್ತು ಈ ಅವಧಿಯಲ್ಲಿ ಕೋರಿ ಭೂಗತವಾಗಬೇಕಾಗಿದೆ. ಗಣಿಗಾರಿಕೆಯು ಅತ್ಯಂತ ಅಪಾಯಕಾರಿ ಸ್ಫೋಟಕಗಳನ್ನು ಬಳಸಿ ಭೂಮಿಯನ್ನು ಕೊರೆಯುವುದನ್ನು ಒಳಗೊಂಡಿರುತ್ತದೆ. ಇದರ ಹೊರತಾಗಿಯೂ, ಕೋರಿ ಅವರು ತಾವು ಮಾಡುತ್ತಿರುವ ಕೆಲಸದ ಬಗ್ಗೆ ಸಂಪೂರ್ಣ ತೃಪ್ತಿ ಹೊಂದಿದ್ದಾರೆ.

    ಈ ಪರಿಸ್ಥಿತಿಗಳ ಹೊರತಾಗಿಯೂ, ನಾನು ನನ್ನ ಕೆಲಸವನ್ನು ಪ್ರೀತಿಸುತ್ತೇನೆ. ವಾಸ್ತವವಾಗಿ, ನಾನು ಗಣಿಯಲ್ಲಿ ಅತ್ಯಂತ ಕೊಳಕು ವ್ಯಕ್ತಿಯಾಗಲು ಪ್ರಯತ್ನಿಸುತ್ತೇನೆ” ಎಂದು ಕೋರಿ ಅವರು ಹೇಳಿದ್ದಾರೆ. (ಏಜೆನ್ಸೀಸ್​)

    ಇದು ಅದೃಷ್ಟ ಅಂದ್ರೆ… ಈ 2 ಮೀನಿನ ಬೆಲೆ ಕೇಳಿದ್ರೆ ನೀವು ಬೆರಗಾಗ್ತೀರಾ! ಬದಲಾಯ್ತು ಮೀನುಗಾರನ ಬದುಕು

    ಪತ್ನಿಯನ್ನು ಕೊಂದ ಆರೋಪಿ ಪತ್ತೆಗೆ 2 ಕೋಟಿ ನಗದು ಬಹುಮಾನ ಘೋಷಣೆ! ಭಾರತೀಯನ ಹಿಂದೆ ಬಿದ್ದ ಅಮೆರಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts