ಮಂಗಳೂರಿನಿಂದ ಧರ್ಮಸ್ಥಳಕ್ಕೆ ಹೊಸ ಬಸ್

IMG-20240721-WA0022
Published on


 ಮಂಗಳೂರು: ಮಂಗಳೂರಿನಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಹೊರಡುವ ದಿನದ ಕೊನೇಯ ಬಸ್‌ಗೆ ಹೊಸತನದ ಮೆರುಗು ಸಿಕ್ಕಿದೆ. ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗಕ್ಕೆ ಬಂದಿರುವ ಹಲವು ಹೊಸ ಬಸ್‌ಗಳಲ್ಲಿ ಒಂದನ್ನು ದಿನದಿ ಕೊನೇಯ ರೂಟ್ ಮಂಗಳೂರು-ಧರ್ಮಸ್ಥಳಕ್ಕೆ ಬಳಸಿಕೊಂಡಿದೆ.
 ಮಂಗಳೂರಿನ ಸ್ಟೇಟ್‌ಬ್ಯಾಂಕ್‌ನಿಂದ ರಾತ್ರಿ 8.30ಕ್ಕೆ ಧರ್ಮಸ್ಥಳಕ್ಕೆ ದಿನದ ಕೊನೇಯ ಬಸ್ ಸಂಚರಿಸುತ್ತದೆ. ಆದರೆ ಕೆಲವು ತಾಂತ್ರಿಕ ದೋಷದ ಕಾರಣ ಬಹುತೇಕ ಸಂದರ್ಭ ದಾರಿ ಮಧ್ಯದಲ್ಲೇ ನಿಲ್ಲುತ್ತದೆ. ಬದಲಿ ಬಸ್ ಬರುವಾಗ 45 ನಿಮಿಷ ಮತ್ತೆ ತಡವಾಗುವುದು ಸವೇ ಸಾಮಾನ್ಯವಾಗಿತ್ತು. ಪ್ರತೀ ದಿನ ಈ ಬಸ್ ಬಿಸಿ ರೋಡ್ ವರೆಗೆ ತುಂಬಿ ತುಳುಕಿದರೆ ನಂತರ 15-20 ಸೀಟ್‌ಗಳು ಅಂತಿಮವರೆಗೆ ಉಳಿದುಕೊಳ್ಳುತ್ತದೆ. ಹಾಸನದ ಮಧು ಎಂಬ ಕಂಡೆಕ್ಟರ್ ಇದ್ದ ಸಂದರ್ಭ 10.30ಕ್ಕೆ ಧರ್ಮಸ್ಥಳಕ್ಕೆ ತಲುಪುವ ಈ ಬಸ್, ಉಳಿದ ಬೇರೆ ಕಂಡೆಕ್ಟರ್ ಆದರೆ 11 ಗಂಟೆಗೆ ತಲುಪಿದ್ದೇ ಹೆಚ್ಚಾಗಿತ್ತು. ಈಬಗ್ಗೆ ಪ್ರಯಾಣಿಕರು ಡಿಪ್ಪೊ ಮೆನೆಜರ್ ಮಂಜುನಾಥ್ ಅವರಿಗೆ ಪ್ರತೀ ದಿನ ದೂರು ನೀಡಿ ಕಿರಿಕಿರಿ ನೀಡುತ್ತಿದ್ದರು. ಪ್ರತೀ ದಿನ ಒಂದಿಲ್ಲೊಂದು ಕಾರಣದಿಂದ ಪ್ರಯಾಣಿಕರ ಕೋಪಕ್ಕೆ ಗುರಿಯಾಗುತ್ತಿದ್ದ ಈ ಕೊನೇಯ ಕೆ.ಎಸ್.ಆರ್.ಟಿ.ಸಿ ಬಸ್ ಡಿಪ್ಪೊ ಮೆನೆಜರ್ ಮಂಜುನಾಥ್ ಅವರ ಪ್ರಯತ್ನದಿಂದ ಹೊಸ ಬಸ್ ಆಗಿ ಬದಲಿಸಿರುವುದು ಪ್ರಯಾಣಿಕರಿಗೆ ಸಂತಸ ತಂದಿದೆ.
 *ಕೆಎಸ್‌ಆರ್‌ಟಿಸಿ ಸ್ಫಂದನೆ
 ಕಳೆದ 5-6 ತಿಂಗಳಿನಿಂದ ಕೆಎಸ್‌ಆರ್‌ಟಿಸಿಗೆ ಮಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರಡುವ ಕೊನೇಯ ಬಸ್ ಅವ್ಯವಸ್ಥೆಯೇ ತಲೆನೋವಾಗಿತ್ತು. ರಾತ್ರಿ 7.30ರಿಂದ 8.15ರ ವರೆಗಿನ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್‌ನ ಸಾಮಾನ್ಯ ಸಾಮಥ್ಯ 75 ಜನ ತುಂಬುವಂತಿದ್ದರೆ ಪ್ರಯಾಣಿಸುವವರ ಸಂಖ್ಯೆ 100 ದಾಟುತ್ತಿತ್ತು. 8.30ರ ಬಸ್ ಪ್ರಯಾಣ ರದ್ದಾದರೆ ಬಸ್‌ನ ಕೊನೇಯ ರೂಟ್‌ನಲ್ಲಿ 100ಕ್ಕೂ ಅಧಿಕ ಜನ ಪ್ರಯಾಣಿಸುತ್ತಿದ್ದರು. ಇದರಿಂದ ಅಲ್ಲಲ್ಲಿ ಬಸ್ ಕೆಟ್ಟು ನಿಲ್ಲುವುದು ಸಮಾಣ್ಯವಾಗಿತ್ತು. ಪ್ರಸ್ತುತ ಮಂಗಳೂರಿನಿಂದ ಧರ್ಮಸ್ಥಳಕ್ಕೆ ದಿನದ ಕೊನೆಯ ಸಂಚಾರಕ್ಕೆ ಹೊಸ ಬಸ್ ನೀಡಿದ್ದರಿಂದ ಪ್ರಯಾಣಿಕರಿಗೆ ಸಂತಸ ತಂದಿದೆ.
 -------------
 ಮಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರಡುವ ದಿನದ ಕೊನೇಯ ಬಸ್ ಸುಸಜ್ಜಿತ ಹಾಗೂ ಸುಸ್ಥಿತಿಯಲ್ಲಿರು ಉತ್ತಮ ಬಸ್ ಬೇಕು ಎಂಬುವುದು ಪ್ರಯಾಣಿಕರ ಹಲವು ದಿನಗಳ ಬೇಡಿಕೆಯಾಗಿತ್ತು. ಈ ಕಾರಣದಿಂದ ಸುಸ್ಥಿತಿಯಲ್ಲಿರು ಬಸ್‌ನ ಬದಲು ಹೊಸ ಬಸ್‌ನ್ನೇ ನೀಡಿದರೆ ಒಳಿತು ಎಂಬ ನಿಟ್ಟಿನಲ್ಲಿ ಹೊಸ ಬಸ್ ಸಂಚರಿಸಲು ಡಿಪ್ಪೊ ಮೆನೆಜರ್ ವ್ಯವಸ್ಥೆ ಮಾಡಿದ್ದಾರೆ. ಪ್ರಯಾಣಿಕರಿಗೂ ಇದರಿಂದ ಸಂತಸವಾಗಿರುವ ಬಗ್ಗೆ ಹಲವು ಫೋನ್ ಕರೆ ಬಂದಿದೆ.
  ರಾಜೇಶ್ ಶೆಟ್ಟಿ, ವಿಭಾಗೀಯ ನಿಯಂತ್ರಣಾಧಿಕಾರಿ
 ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net