More

  ಮದುವೆಯ ನಂತ್ರ ಅತ್ತೆಯ ಮನೆಯವರಿಗೆ ಹಲ್ವಾ ಕೊಟ್ಟ ಕೃತಿ ಕರ್ಬಂದಾ!

  ನವದೆಹಲಿ: ನಟ ಪುಲ್ಕಿತ್ ಸಾಮ್ರಾಟ್ ಮತ್ತು ನಟಿ ಕೃತಿ ಖರ್ಬಂದಾ ಮಾರ್ಚ್ 15 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ನಂತರ ಇಬ್ಬರೂ ತಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  ಮದುವೆಯ ನಂತರ, ಮಾರ್ಚ್ 17 ರಂದು, ನವ ದಂಪತಿ ದೆಹಲಿ ಮನೆಗೆ ಬಂದರು. ಅಲ್ಲಿ ನವ ವಧುವನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಇತ್ತೀಚೆಗೆ ಕೃತಿ ಕರ್ಬಂದಾ ಮದುವೆಯ ನಂತರ ತನ್ನ ಮೊದಲ ಬಾರಿ ಅಡುಗೆ ಮಾಡಿದ್ದಾಳೆ. ಅದರ ರುಚಿ ಅವಳ ಅತ್ತೆ ಮನೆಯವರಿಗೆ ತುಂಬಾ ಇಷ್ಟವಾಗಿದೆ ಅಂತೆ. ಹಾಗಾದರೆ ಕೃತಿ ಕರ್ಬಂದಾ ತನ್ನ ಮೊದಲ ಅಡುಗೆಮನೆಯಲ್ಲಿ ಏನು ಮಾಡಿದ್ದಾಳೆಂದು ತಿಳಿಯೋಣ ಬನ್ನಿ…

  ಕೃತಿ ಕರ್ಬಂದಾ ಅವರು ತಮ್ಮ ಪತಿ ಮನೆಯಲ್ಲಿ ಮೊದಲ ಬಾರಿಗೆ ಅಡುಗೆ ಮಾಡಿದ ಚಿತ್ರಗಳನ್ನು  ಇನ್​​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ನಟಿ ಕೆಂಪು ಚೂಡಿದಾರ್​, ಕೈಗಳಲ್ಲಿ ಬಳೆಗಳು, ಕುತ್ತಿಗೆಗೆ ಮಂಗಳ ಸೂತ್ರ ಮತ್ತು ಹಣೆಯ ಮೇಲೆ ಸಿಂಧೂರ ಇಟ್ಟಿದ್ದಾರೆ. ಒಂದು ಚಿತ್ರದಲ್ಲಿ, ಕೃತಿ ಖರ್ಬಂದಾ ಅವರು ತಮ್ಮ ಮೊದಲ ಅಡುಗೆಮನೆಯಲ್ಲಿ ತಯಾರಿಸಿದ ಖಾದ್ಯವನ್ನು ತೋರಿಸಿದ್ದಾರೆ. ನಟಿ ಹಲ್ವಾ ಮಾಡಿ ಅತ್ತೆಗೆ ನೀಡಿದೆ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

  ಪುಲ್ಕಿತ್ ಸಾಮ್ರಾಟ್ ಇತ್ತೀಚೆಗೆ ಬಿಡುಗಡೆಯಾದ ‘ಫುಕ್ರೆ 3’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಕೃತಿ ಕರ್ಬಂದಾ  ನಟ ಸನ್ನಿ ಸಿಂಗ್ ಅವರೊಂದಿಗೆ ‘ರಿಸ್ಕಿ ರೋಮಿಯೋ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  VIDEO | ಹೀಗೆ ಮಾಡಿ ನೋಡಿ ನಿಮ್ಮ ಚಪ್ಪಲಿಗಳು ಎಂದಿಗೂ ಕಳ್ಳತನವಾಗುವುದಿಲ್ಲ!

  ನನಗೆ ಮದುವೆ ಬೇಡ,ಒಂಟಿಯಾಗಿರುತ್ತೇನೆಂದ ಸೀರಿಯಲ್​ ನಟಿ; ಯಾಕಮ್ಮಾ? ಇಂತಾ ನಿರ್ಧಾರ ಎಂದ್ರು ಫ್ಯಾನ್ಸ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts