More

    ಸಹಕಾರ ಸಂಘಗಳ ಚುನಾವಣೆ ಮುಂದೂಡಿ ಹೊರಡಿಸಿದ್ದ ಆದೇಶ ವಾಪಸ್

    ಬೆಂಗಳೂರು: ಸಹಕಾರ ಸಂಘ/ಸಹಕಾರ ಬ್ಯಾಂಕ್ ಹಾಗೂ ಸೌಹಾರ್ದ ಸಹಕಾರಿಗಳ ಚುನಾವಣೆ ಮುಂದೂಡಿ ಹಾಲಿ ಇರುವ ಆಡಳಿತ ಮಂಡಳಿ ಹಾಗೂ ಪದಾಧಿಕಾರಿಗಳ ಅವಧಿ ಮುಂದುವರಿಸಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿದೆ.

    ಮಾ.13 ರಂದು ರಾಜ್ಯ ಸರ್ಕಾರ ಸಹಕಾರ ಸಂಘಗಳು ಹಾಗೂ ಸಹಕಾರ ಬ್ಯಾಂಕ್‌ಗಳ ಆಡಳಿತ ಮಂಡಳಿಗಳ ಚುನಾವಣೆಯನ್ನು ಹಠಾತ್ ಮುಂದೂಡಿತ್ತು.
    ಹಾಲಿ ಆಡಳಿತ ಮಂಡಳಿ ಅವಧಿಯನ್ನು ಮುಂದುವರಿಸಿ, ಈಗಾಗಲೇ ಚುನಾವಣಾ ವೇಳಾಪಟ್ಟಿ ಪ್ರಕಟಿಸಿರುವ ಸಂಘ, ಒಕ್ಕೂಟ/ ಬ್ಯಾಂಕ್‌ಗಳ ಚುನಾವಣೆಯನ್ನೂ ರದ್ದುಪಡಿಸಿತ್ತು.

    ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿಯಾಗಲಿದೆ. ಜತೆಗೆ ಇಲಾಖೆ ಸಿಬ್ಬಂದಿಯನ್ನು ಲೋಕಸಭೆ ಚುನಾವಣೆ ಕಾರ್ಯಕ್ಕೆ ಬಳಸಿಕೊಳ್ಳುವುದರಿಂದ ಸಹಕಾರ ಕ್ಷೇತ್ರದ ಆಡಳಿತ ಮಂಡಳಿ ಚುನಾವಣೆಗೆ ಒತ್ತಡ, ವ್ಯತ್ಯಯವಾಗಲಿದೆ ಎಂಬ ನೆಪವೊಡ್ಡಿ ಚುನಾವಣೆ ಮುಂದೂಡಲಾಗಿತ್ತು.

    ರಾಜ್ಯದಲ್ಲಿ 45 ಸಾವಿರ ಸಹಕಾರ ಸಂಘ-ಸಂಸ್ಥೆಗಳಿದ್ದು, ಈ ಸಂಘಗಳ ಆಡಳಿತ ಮಂಡಳಿ ಪದಾವಧಿಯು 2024ರ ಮಾರ್ಚ್‌ನಿಂದ ಜೂನ್‌ನಲ್ಲಿ ಮುಕ್ತಾಯವಾಗುತ್ತಿವೆ. ಈ ಹಿನ್ನೆಲೆೆಯಲ್ಲಿ ಮಾರ್ಚ್‌ನಿಂದ ಮೇ ಅಂತ್ಯದೊಳಗೆ ಚುನಾವಣೆ ನಡೆಸಬೇಕಾಗಿದೆ.

    ಕಳೆದ ಬಾರಿ ಲೋಕಸಭೆ ಚುನಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗಲೇ ಪದಾವಧಿ ಮುಗಿಯಲಿರುವ ಸಂಘಗಳ ಆಡಳಿತ ಮಂಡಳಿಗಳಿಗೆ ಚುನಾವಣೆ ನಡೆದಿತ್ತು. ಈ ಬಾರಿ ಲೋಕಸಭೆ ಚುನಾವಣೆ ನೆಪವೊಡ್ಡಿರುವುದು ಸಹಕಾರಿಗಳಿಗೆ ಅಚ್ಚರಿಯಾಗಿತ್ತು.
    ಸರ್ಕಾರದ ಆದೇಶ ವಿರೋಧಿಸಿ ಕೆಲವು ಸಹಕಾರಿಗಳು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಸರ್ಕಾರ ಮಾ.13 ರಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts