More

    ಜಿಂಕೆ ಕಣ್ಣಿನ ಗುಡ್ಡೆಯಲ್ಲಿ ಕೂದಲು: ಜೀವಂತ ಪ್ರಾಣಿಯನ್ನು ಕೊಂದಿದ್ದೇಕೆಂದು ತಿಳಿದ್ರೆ ಕಣ್ಣೀರು ಬರುತ್ತೆ!

    ನ್ಯಾಶ್ವಿಲ್ಲೆ: ಪ್ರಕೃತಿಯು ಹಲವು ಅಚ್ಚರಿಗಳ ಆಗರವಾಗಿದೆ. ಸೃಷ್ಟಿಯಲ್ಲಿ ಆಗಾಗ ನಮಗೆ ಎದುರಾಗುವ ಕೆಲವು ವಿಚಿತ್ರ ಸನ್ನಿವೇಶಗಳು ನಮ್ಮ ಹುಬ್ಬೇರಿಸುತ್ತದೆ. ಅಂಥದ್ದೆ ಒಂದು ವಿಚಿತ್ರ ಘಟನೆ ಯುನೈಟೆಡ್​ ಸ್ಟೇಟ್​​ನ ಟೆನ್ನಿಸ್ಸಿ ಉಪನಗರದಲ್ಲಿ ಇದೀಗ ಬೆಳಕಿಗೆ ಬಂದಿದೆ.

    ಹೌದು. ಕಣ್ಣುಗುಡ್ಡೆಗಳ ಮೇಲೆ ದಪ್ಪ ಕೂದಲು ಬೆಳೆದಿರುವ ವಿಚಿತ್ರ ವೈಟ್‌ಟೇಲ್ ಜಿಂಕೆಯು ಟೆನ್ನಿಸ್ಸಿ ಉಪನಗರದಲ್ಲಿ ಅಲೆದಾಡುತ್ತಿತ್ತು ಎಂಬುದು ತಿಳಿದುಬಂದಿದೆ. ಕಣ್ಣುಗಳ ರಕ್ಷಣೆಗೆಂದೇ ರೆಪ್ಪೆ ಕೂದಲುಗಳು ಇರುವುದು ಸಹಜ. ಆದರೆ, ಕಣ್ಣಿನ ಗುಡ್ಡೆಯಲ್ಲೇ ಕೂದಲು ಬೆಳೆದಿದೆ ಎಂದರೆ ಯಾರು ಸಹ ನಂಬಲಾರರು. ಆದರೆ, ಟೆನ್ನಿಸ್ಸಿ ನಗರದಲ್ಲಿ ಪತ್ತೆಯಾಗಿರುವ ವೈಟ್‌ಟೇಲ್ ಜಿಂಕೆಯು ನಂಬಿಕೆಯನ್ನು ಹುಸಿ ಮಾಡಿದೆ.

    ಇದನ್ನೂ ಓದಿರಿ: ಮಕ್ಕಳ ಹಠಕ್ಕೆ ಮಣಿದು ಬೈಕ್, ಮೊಬೈಲ್ ಕೊಡಿಸುವ ಪೋಷಕರು ಈ ಸ್ಟೋರಿ ನೋಡ್ಲೇಬೇಕು..!

    ಇನ್ನು ಈ ಜಿಂಕೆಯ ಅಸಾಮಾನ್ಯ ವೈಶಿಷ್ಟ್ಯವು ಕಾರ್ನಿಯಲ್ ಡರ್ಮಾಯ್ಡ್ಸ್​ ಎಂಬ ಅಪರೂಪದ ಮತ್ತು ವಿಲಕ್ಷಣ ಸ್ಥಿತಿಗೆ ಕಾರಣವಾಗಿದೆ. ಒಂದು ನಿರ್ದಿಷ್ಟ ಪ್ರಕಾರದ ಅಂಗಾಂಶವು ತಪ್ಪಾದ ಸ್ಥಳದಲ್ಲಿ ಬೆಳೆದಾಗ ಸಂಭವಿಸುವ ಸ್ಥಿತಿಯಾಗಿದ್ದು, ಕಣ್ಣಿನ ಗುಡ್ಡೆಯ ಮೇಲೆ ಕೂದಲು ಬೆಳೆಯುವುದು ಬಹುಶಃ ಈ ಸ್ಥಿತಿಯ ಅತ್ಯಂತ ಕೆಟ್ಟ ಉದಾಹರಣೆ ಎಂದು ತಜ್ಞರು ಹೇಳಿದ್ದಾರೆ.

    ರಾಷ್ಟ್ರೀಯ ಜಿಂಕೆ ಸಂಘದ ಪ್ರಕಾರ ಒಂದು ವರ್ಷದ ಈ ಅನಾಥ ಜೀವಿ 2020ರ ಆಗಸ್ಟ್​​ನಲ್ಲಿ ನಾಕ್ಸ್‌ವಿಲ್ಲೆಯಲ್ಲಿನ ಉಪನಗರದಲ್ಲಿ ಅಲೆದಾಡುವಾಗ ಪತ್ತೆಯಾಗಿತ್ತು. ಅದರ ವಿಚಿತ್ರ ರೂಪ ಸ್ಥಳೀಯರನ್ನು ಗಾಬರಿಗೊಳಿಸಿತ್ತು. ತುಂಬಾ ಹತ್ತಿರದಿಂದ ಜಿಂಕೆಯನ್ನು ನೋಡಿದಾಗ ರಕ್ತಸ್ರಾವವಾಗಿ ದಿಗ್ಭ್ರಮೆಗೊಂಡಿರುವಂತೆ ಗೋಚರವಾಗಿತ್ತು. ಆದರೆ, ಈ ಜಿಂಕೆ ಇತರೆ ಜಿಂಕೆಗಳಂತೆ ಮಾನವನಿಗೆ ಹೆದರುತ್ತಿರಲಿಲ್ಲ.

    ಜಿಂಕೆಯ ಕ್ಲೋಸ್​ ಅಪ್​ ಶಾಟ್​ ಅನ್ನು ರಾಷ್ಟ್ರೀಯ ಜಿಂಕೆ ಸಂಘವು 2021ರ ಫೆ.19ರಂದು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದೆ. ದುರಾದೃಷ್ಟವಶಾತ್ ಜಿಂಕೆಯನ್ನು​ ಪ್ರಾಣಿಗಳ ನಿಯಂತ್ರಣಾಧಿಕಾರಿ ಹತ್ಯೆ ಮಾಡಿದ್ದಾರೆ. ಇನ್ನೊಬ್ಬರಿಗೆ ಪ್ರಾಣಿಯ ವಿಚಿತ್ರ ಸೋಂಕು ತಗುಲಬಹುದೆಂಬ ಶಂಕೆಯಿಂದ ಗುಂಡು ಹಾರಿಸಿ ಕೊಂದಿದ್ದರು. ಇದಾದ ಬಳಿಕ ಜಿಂಕೆಯ ತಲೆಯನ್ನು ಪರೀಕ್ಷೆಗಾಗಿ ಆಗ್ನೇಯ ಸಹಕಾರಿ ವನ್ಯಜೀವಿ ರೋಗ ಅಧ್ಯಯನ (ಎಸ್‌ಸಿಡಬ್ಲ್ಯುಡಿಎಸ್) ಘಟಕಕ್ಕೆ ಕಳುಹಿಸಲಾಗಿತ್ತು.

    ಇದನ್ನೂ ಓದಿರಿ: ಭೀಕರ ಕಾರು ಅಪಘಾತ: ಖ್ಯಾತ ಗಾಲ್ಫ್​ ಆಟಗಾರ ಟೈಗರ್​ ವುಡ್ಸ್​ ಸ್ಥಿತಿ ಗಂಭೀರ..!

    ಪರೀಕ್ಷಿಸಿದಾಗ ಜಿಂಕೆಯ ಕಾಯಿಲೆಯಿಂದ ಮಾನವನಿಗೆ ಯಾವುದೇ ತೊಂದರೆ ಇರಲಿಲ್ಲ ಎಂಬುದು ತಿಳಿಯಿತು. ಜಿಂಕೆ ಎಪಿಜೂಟಿಕ್ ಹೆಮರಾಜಿಕ್ ಕಾಯಿಲೆಯಿಂದ ಬಳಲುತ್ತಿತ್ತು. ಆದರೆ, ಅದರ ಪ್ರಾಣ ಹೋಗಿದ್ದು ಮಾತ್ರ ದುರಂತ ಎಂದು ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಇನ್ಮುಂದೆ ನಾನಾಯಿತು ನನ್ನ ಪಾಡಾಯಿತು…; ಜಗ್ಗೇಶ್

    ಕೀರ್ತಿಯಾಗಲಿ ಸೀತೆ!; ಅಭಿಮಾನಿಗಳಿಂದ ನಿರ್ದೇಶಕರಿಗೆ ಮನವಿ

    ಸದ್ಯದಲ್ಲೇ ಹೊಸ ಪೊಗರು; ಆಕ್ಷೇಪಾರ್ಹ ದೃಶ್ಯಗಳನ್ನು ಕತ್ತರಿಸಲು ಒಪ್ಪಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts