

ಬೆಂಗಳೂರು: ಮಕ್ಕಳ ಹಠಕ್ಕೆ ಮಣಿದು ಸಾಲ ಮಾಡಿ ಮಕ್ಕಳಿಗೆ ಬೈಕ್, ಹೆಣ್ಣು ಮಕ್ಕಳಿಗೆ ಮೊಬೈಲ್ ಕೊಡಿಸುವ ಪೋಷಕರು ಈ ಸ್ಟೋರಿ ನೋಡಲೇಬೇಕು. ಆನ್ಲೈನ್ ಜಮಾನದಲ್ಲಿ ಸ್ವಲ ಯಾಮಾರಿದರೂ ನಿಮ್ಮ ಮಕ್ಕಳು ಕೈಮೀರುವುದು ಖಚಿತ ಎನ್ನುವುದಕ್ಕೆ ಈ ಸ್ಟೋರಿ ಒಂದು ತಾಜಾ ಉದಾಹರಣೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚಾಗಿ ವ್ಹೀಲಿಂಗ್ ಕ್ರೇಜ್ ಮರುಳಾಗುತ್ತಿದ್ದಾರೆ. ಸಿನಿಮಾ ಶೈಲಿಯಲ್ಲಿ ಹುಡುಗಿಯರನ್ನು ಇಂಪ್ರೆಸ್ ಮಾಡಲು ಮುಖ್ಯ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡಲು ಮುಂದಾಗುತ್ತಿದ್ದಾರೆ. ಈ ಬಗ್ಗೆ ಪಾಲಕರು ಎಚ್ಚರವಹಿಸುವುದು ಸೂಕ್ತ. ಇಲ್ಲವಾದಲ್ಲಿ ನಿಮ್ಮ ಮಕ್ಕಳು ನಿಮ್ಮ ಕೈತಪ್ಪಿ ಹೋಗುವುದುರಲ್ಲಿ ಸಂಶಯವೇ ಇಲ್ಲ.
ತಾಜಾ ಉದಾಹರಣೆ ಎಂಬಂತೆ ಮಾರ್ಕೆಟ್ ಪ್ಲೇಓವರ್ ಮೇಲೆ 21 ವರ್ಷದ ಜೈಕರ್ ಎಂಬಾತ ವ್ಹೀಲಿಂಗ್ ಮಾಡಿದ್ದು, ಅದರ ವಿಡಿಯೋವನ್ನು ತನ್ನ ಸ್ನೇಹಿತೆಗೆ ಕಳುಹಿಸಿ, ಬಿಲ್ಡಪ್ ತೆಗೆದುಕೊಂಡಿದ್ದಾನೆ. ಜೈಕರ್ ಅದೃಷ್ಟ ಕೆಟ್ಟಿತ್ತೇನೋ ವ್ಹೀಲಿಂಗ್ ಮಾಡುವಾಗ ಬ್ಯಾಟರಾಯನಪುರ ಸಂಚಾರಿ ಇನ್ಸ್ಪೆಕ್ಟರ್ ಗಿರಿರಾಜ್ ಕೈಗೆ ಜೈಕರ್ ಲಾಕ್ ಆಗಿದ್ದಾನೆ.
ಒಂದು ಕಡೆದ ಹುಡುಗಿಯನ್ನು ಇಂಪ್ರೆಸ್ ಮಾಡಲು ಫ್ಲೈಓವರ್ ಮೇಲೆ ಜೈಕರ್ ವ್ಹೀಲಿಂಗ್ ಮಾಡಿ ಸಿಕ್ಕಿಬಿದ್ದಿದ್ದರೆ, ಮತ್ತೊಂದು ಕಡೆ ನಿಖಿಲ್ ಎಂಬಾತ ಫೇಸ್ಬುಕ್ ಮತ್ತು ವಾಟ್ಸ್ಆ್ಯಪ್ ಸ್ಟೇಟಸ್ ಹಾಕಲು ಡೆಡ್ಲಿ ಬೈಕ್ ಸ್ಟಂಟ್ ಮಾಡಿ ಸಿಕ್ಕಿಬಿದ್ದಿದ್ದಾನೆ. ಡ್ಯೂಕ್ ಬೈಕ್ನಲ್ಲಿ ಸ್ಟಂಟ್ ಮಾಡುವುದರ ಜತೆಗೆ ಮಚ್ಚು ಹಿಡಿದ ಪೋಸ್ ನೀಡಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬ್ಯಾಟರಾಯನಪುರ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ