ಬೆಳಗಿನ ಉಪಾಹಾರಕ್ಕೆ ಇವುಗಳನ್ನು ತಿನ್ನಲೇಬೇಡಿ; ಆರೋಗ್ಯಕ್ಕೆ ಹಾನಿಕಾರಕ ! | Breakfast

Breakfast
Published on

Breakfast: ನಾವು ಬೆಳಿಗ್ಗೆ ಸರಿಯಾದ ಸಮಯಕ್ಕೆ ಉಪಾಹಾರವನ್ನು ಸೇವಿಸುವುದರಿಂದ ನಮ್ಮ ದೇಹವು ದಿನವಿಡಿ ಚಟುವಟಿಕೆಯಿಂದ ಕೂಡಿರುತ್ತದೆ. ಉಪಾಹಾರ ಸೇವಿಸುವುದು ನಮ್ಮ ಆರೋಗ್ಯಕ್ಕೆ ತುಂಬಾ ಅವಶ್ಯಕ, ಅದೇ ರಿತಿ ಉಪಾಹಾರದ ಸಮಯದಲ್ಲಿ ಕೆಲವು ಪದಾರ್ಥಗಳನ್ನು ಸೇವಿಸಬಾರದು. ಆ ಆಹಾರಗಳು ಯಾವುವು? ಈಗ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅವುಗಳನ್ನು ತಿನ್ನುವುದರಿಂದ ಉಂಟಾಗುವ ಪರಿಣಾಮಗಳೇನು ಎಂದು ತಿಳಿದುಕೊಳ್ಳೋಣ.

ಬೆಳಗಿನ ಉಪಾಹಾರವು ದಿನದ ಮೊದಲ ಊಟ ಮಾತ್ರವಲ್ಲ, ಅತ್ಯಂತ ಮುಖ್ಯವಾದ ಊಟವೂ ಆಗಿದೆ. ಅದಕ್ಕಾಗಿಯೇ ತಜ್ಞರು ಉಪಾಹಾರವನ್ನು ಯಾವುದೇ ಸಂದರ್ಭದಲ್ಲೂ ಬಿಡಬಾರದು ಎಂದು ಹೇಳುತ್ತಾರೆ. ಬೆಳಗಿನ ಉಪಾಹಾರವು ದಿನವಿಡೀ ಸಕ್ರಿಯವಾಗಿರಲು ನಮಗೆ ಶಕ್ತಿಯನ್ನು ಒದಗಿಸುವುದಲ್ಲದೆ, ರಕ್ತದಲ್ಲಿನ ಸಕ್ಕರೆ ಮಟ್ಟ, ರಕ್ತದೊತ್ತಡದ ಮಟ್ಟವನ್ನು ಸ್ಥಿರವಾಗಿಡಲು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

1. ಸಿಟ್ರಸ್ ಹಣ್ಣುಗಳು

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಪಾಹಾರಕ್ಕಾಗಿ ಹುಳಿ ರುಚಿಯ ಸಿಟ್ರಸ್ ಹಣ್ಣುಗಳನ್ನು ಸೇವಿಸಬೇಡಿ. ಹುಳಿ ಹಣ್ಣುಗಳಿಂದ ಎದೆಯುರಿ, ಗ್ಯಾಸ್ಟ್ರಿಕ್​ ಸೇರಿದಂತೆ ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು.

2. ಬ್ರೆಡ್

ಅನೇಕ ಜನರು ಉಪಾಹಾರಕ್ಕಾಗಿ ಬ್ರೆಡ್ ತಿನ್ನುವುದನ್ನು ರೂಡಿಸಿಕೊಂಡಿರುತ್ತಾರೆ. ಅದು ತಯಾರಿಸುವುದು ಸುಲಭ ಎನ್ನುವ ಕಾರಣಕ್ಕಾಗಿ ಎಲ್ಲರ ಅದರ ಮೊರೆ ಹೋಗುತ್ತಾರೆ. ಆದರೆ, ಬ್ರೆಡ್ ನಮ್ಮ ಹೊಟ್ಟೆಗೆ ತುಂಬಾ ಹಾನಿಕಾರಕ. ಹೌದು, ಇದು ಹೆಚ್ಚು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳಾಗಿರುವುದರಿಂದ, ಇದು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಬ್ರೆಡ್ ತಿನ್ನುವುದು ದೇಹಕ್ಕೆ ಶಕ್ತಿಯನ್ನು ಒದಗಿಸುವುದಿಲ್ಲ ಬದಲಾಗಿ ಹಸಿವಾಗದಂತೆ ನೋಡಿಕೊಳ್ಳುತ್ತದೆ.

3. ಹುರಿದ ಆಹಾರಗಳು

ಅನೇಕ ಜನರು ಬೆಳಗಿನ ಉಪಾಹಾರಕ್ಕೆ ಪೂರಿ ಮುಂತಾದ ಕರಿದ ಆಹಾರವನ್ನು ಸೇವಿಸುತ್ತಾರೆ. ಆದರೆ ಈ ಆಹಾರಗಳನ್ನು ಎಣ್ಣೆಯಲ್ಲಿ ಹುರಿಯುವುದರಿಂದ ಹೊಟ್ಟೆ ಉಬ್ಬರ ಮತ್ತು ಜಠರದುರಿತದಂತಹ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಬೆಳಗಿನ ಉಪಾಹಾರಕ್ಕೆ ಆರೋಗ್ಯಕರ ಆಹಾರವನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

4. ಸಿಹಿತಿಂಡಿಗಳು

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ, ಅಂದರೆ ಉಪಾಹಾರದ ಸಮಯದಲ್ಲಿ ಸಿಹಿತಿಂಡಿಗಳನ್ನು ತಿನ್ನುವುದನ್ನು ತಪ್ಪಿಸಿ. ಮಧುಮೇಹ ರೋಗಿಗಳು ವಿಶೇಷವಾಗಿ ಉಪಾಹಾರದ ಸಮಯದಲ್ಲಿ ಸಿಹಿತಿಂಡಿಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಬೆಳಿಗ್ಗೆ ಹೆಚ್ಚು ಸಕ್ಕರೆ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಖಾಲಿ ಹೊಟ್ಟೆಯಲ್ಲಿ ಸಿಹಿತಿಂಡಿಗಳನ್ನು ತಿನ್ನುವ ಜನರಿಗೆ ಜೀರ್ಣಕ್ರಿಯೆಯ ಸಮಸ್ಯೆಗಳಿರುವ ಸಾಧ್ಯತೆಯಿದೆ. ಖಾಲಿ ಹೊಟ್ಟೆಯಲ್ಲಿ ಹೆಚ್ಚು ಸಕ್ಕರೆ ಸೇವಿಸುವುದರಿಂದ ಕಣ್ಣಿನ ತೊಂದರೆಗಳು ಉಂಟಾಗಬಹುದು.

5. ಮಸಾಲೆಯುಕ್ತ ಆಹಾರ

ಬೆಳಗಿನ ಉಪಾಹಾರಕ್ಕೆ ಆರೋಗ್ಯಕರ, ಹಗುರವಾದ ಆಹಾರವನ್ನು ಸೇವಿಸಿ. ಕೆಲವರು ಪಕೋಡಾ, ಸಮೋಸಾ ಮತ್ತು ಮಸಾಲೆಯುಕ್ತ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

6. ಮೊಸರು

ಮೊಸರಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಬಯಾಟಿಕ್ ಅಂಶ ಹೆಚ್ಚಾಗಿರುತ್ತದೆ. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವ ತಪ್ಪನ್ನು ಮಾಡಬೇಡಿ. ಏಕೆಂದರೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಹೊಟ್ಟೆ ಉಬ್ಬರ ಮತ್ತು ಎದೆಯುರಿ ಸಮಸ್ಯೆಗಳು ಉಂಟಾಗಬಹುದು.(ಏಜೆನ್ಸೀಸ್)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net