ಐಪಿಎಲ್‌ಗೆ ಪತಂಜಲಿ ಪ್ರಾಯೋಜಕತ್ವ ವಹಿಸಲಿ ಎಂದ ನೆಟ್ಟಿಗರು!

ipl pathanjali
Published on

ನವದೆಹಲಿ: ಚೀನಾ ವಿರುದ್ಧದ ಜನಾಕ್ರೋಶದ ಹಿನ್ನೆಲೆಯಲ್ಲಿ ವಿವೋ ಮೊಬೈಲ್ ಕಂಪನಿ ಶೀರ್ಷಿಕೆ ಪ್ರಾಯೋಜಕತ್ವದಿಂದ ಹಿಂದೆ ಸರಿದಿರುವ ಬೆನ್ನಲ್ಲೇ ಐಪಿಎಲ್ ಟೂರ್ನಿ ಟ್ರೋಲ್‌ಗೆ ಒಳಗಾಗಿದೆ. ಐಪಿಎಲ್ ಟೂರ್ನಿಗೆ ಇನ್ನು ಪತಂಜಲಿ ಅಥವಾ ಜಿಯೋ ಸಂಸ್ಥೆ ಪ್ರಾಯೋಜಕತ್ವ ವಹಿಸಲಿ ಎಂಬ ಸಲಹೆಯೊಂದಿಗೆ ನೆಟ್ಟಿಗರು ಐಪಿಎಲ್ ಟೂರ್ನಿಯ ಸಂಘಟಕ ಬಿಸಿಸಿಐ ಕಾಲೆಳೆದಿದ್ದಾರೆ.

ವಾರ್ಷಿಕ 440 ಕೋಟಿ ರೂ. ಮೊತ್ತದ ಶೀರ್ಷಿಕೆ ಪ್ರಾಯೋಜಕತ್ವ ಹೊಂದಿದ್ದ ವಿವೋ ಕಂಪನಿ ಹಿಂದೆ ಸರಿದಿರುವುದರಿಂದ ಬಿಸಿಸಿಐಗೆ ಈಗ ಹೊಸ ಪ್ರಾಯೋಜಕರನ್ನು ಹುಡುಕುವ ತಲೆನೋವು ಎದುರಾಗಿದೆ. ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ನಿಗದಿಪಡಿಸಲಾಗಿರುವ ಟೂರ್ನಿಗೆ ಇನ್ನು ಸುಮಾರು 45 ದಿನಗಳಷ್ಟೇ ಬಾಕಿ ಉಳಿದಿವೆ. ಹೀಗಾಗಿ ಐಪಿಎಲ್ ಟೂರ್ನಿಯ ಪ್ರಾಯೋಜಕರ ಬಗ್ಗೆ ನೆಟ್ಟಿಗರು, ವಿನೂತನ ಸಲಹೆಗಳನ್ನು ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net