VIDEO |ಇದು ವಿರಾಟ್​ ಕೋಹ್ಲಿ ನೋಡಲೇಬೇಕಾದ ವಿಡಿಯೋ; ಕಲಾವಿದನ ಕೈ ಚಳಕದಲ್ಲಿ ಮೂಡಿದ ಶ್ಯಾಡೋ ಆರ್ಟ್​​

shadow portrait
Published on

ನವದೆಹಲಿ: ಕ್ರಿಕೆಟಿಗ ವಿರಾಟ್ ಕೊಹ್ಲಿ ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳಲ್ಲಿ ಒಬ್ಬರು. ಇತ್ತೀಚೆಗೆ ಕಲಾವಿದ ಮತ್ತು ಯೂಟ್ಯೂಬರ್ ಶಿಂಟು ಮೌರ್ಯ ಅವರು ವಿರಾಟ್ ಕೊಹ್ಲಿ ಅವರ ನೆರಳು ಕಲೆಯ ಭಾವಚಿತ್ರವನ್ನು(ಶ್ಯಾಡೋ ಆರ್ಟ್) ರಚಿಸಿದ್ದು, ಸೋಶಿಯಲ್​​ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ.

ಮೌರ್ಯ, ಬೆಂಕಿಕಡ್ಡಿಗಳು ಮತ್ತು ಮರದ ತೆಳುವಾದ ಪಟ್ಟಿಗಳನ್ನು ಬಳಸಿ ವಿರಾಟ್ ಕೊಹ್ಲಿ ನೆರಳಿನ ಚಿತ್ರ ಮಾಡಿದ್ದಾರೆ. ಇದಕ್ಕಾಗಿ ಮೂರು ದಿನ ಶ್ರಮಿಸಿದ್ದಾರೆ. ನೆಟಿಜನ್‌ಗಳು ಈ ವಿಡಿಯೋವನ್ನು ವಿರಾಟ್ ಕೊಹ್ಲಿಗೆ ಟ್ಯಾಗ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಅವರೇ ನೀವು ಇದನ್ನು ನೋಡಬೇಕು ಮತ್ತು ಅವರ ಅದ್ಭುತ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರಶಂಸಬೇಕು ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ವಿರಾಟ್ ಹೇಗೆ ಪ್ರತಿಕ್ರಿಯಿಸುತ್ತಾರೋ ನೋಡೋಣ.

ವಿರಾಟ್ ಕೊಹ್ಲಿಯ ಮೇಲೆ ಕಲಾವಿದರು ಹೊಸ ಹೊಸ ಪ್ರಯೋಗ ಮಾಡುತ್ತಿರುವುದು ಇದೇ ಮೊದಲಲ್ಲ. ಜೂನ್‌ನಲ್ಲಿ ಡಿಜಿಟಲ್ ಸೃಷ್ಟಿಕರ್ತ ಶಾಹಿದ್ ಪ್ರಾಂಪ್ಟ್-ಆಧಾರಿತ ಆರ್ಟ್ ಟೂಲ್ ಮಿಡ್‌ಜರ್ನಿಯನ್ನು ಬಳಸಿಕೊಂಡು AI ಕಲಾ ಸರಣಿಯನ್ನು ರಚಿಸಿದರು. ವಿರಾಟ್‌ನನ್ನು ಹಲವು ವೇಷಗಳಲ್ಲಿ ತೋರಿಸಿದ್ದರು. ರಾಜನಾಗಿ, ಗಗನಯಾತ್ರಿಯಾಗಿ, ಫುಟ್ಬಾಲ್ ಆಟಗಾರನಾಗಿ, ವೈದ್ಯನಾಗಿ, ಯುದ್ಧ ವಲಯದಲ್ಲಿ ಸೈನಿಕನಾಗಿ, ಹಣ್ಣು ಮಾರುವವನಾಗಿ, ಪೈಲಟ್ ಆಗಿ ಕೊಹ್ಲಿ ಕಾಣಿಸಿಕೊಂಡಿದ್ದಾರು. ಕೊಹ್ಲಿಯ ಮೇಲಿನ ಅಭಿಮಾನವನ್ನು ಫ್ಯಾನ್ಸ್​ ಹಲವು ರೀತಿಯಲ್ಲಿ ತೋರಿಸುತ್ತಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net