More

    ಬೆಳ್ಳುಳ್ಳಿ ಕಬಾಬ್​ ಖ್ಯಾತಿಯ ಚಂದ್ರು ಅವರ ನೆಟ್​​ವರ್ತ್​ ಎಷ್ಟಿದೆ ಗೊತ್ತಾ?

    ಬೆಂಗಳೂರು: ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸೌಂಡ್ ಮಾಡುತ್ತಿರುವ ಬೆಳ್ಳುಳ್ಳಿ ಕಬಾಬ್​ ಖ್ಯಾತಿಯ ನಿಮ್ಮನೆ ಚಂದ್ರು ಅವರ ಸರಳ ಅಡುಗೆ ರೆಸಿಪಿಗಳು ಸಖತ್ ವೈರಲ್ ಆಗುತ್ತಿದೆ. ಬೆಂಗಳೂರು ಮಾತ್ರವಲ್ಲದೇ ದೇಶ ವಿದೇಶಗಳಲ್ಲಿ ಚಂದ್ರು ಅವರು ಮಾಡಿರುವ ರೆಸಿಪಿಗಳನ್ನು ಜನ ಟ್ರೈ ಮಾಡುತ್ತಿದ್ದಾರೆ. ಹೋಟೆಲ್​ ಮಾತ್ರವಲ್ಲದೇ ಸಿನಿಮಾಗಳ ಪ್ರಮೋಷನ್​ನಲ್ಲಿ ಬ್ಯುಸಿ ಇರುವ ಚಂದ್ರು ಅವರು ವಿಜಯವಾಣಿ ವಿಶೇಷ ಸಂದರ್ಶನದಲ್ಲಿ ತಾವು ನಡೆದ ಬಂದ ಹಾದಿ ಬಗ್ಗೆ ಹಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

    ಮೊದಲಿಗೆ ಮೇಕ್​ಅಪ್​ ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದ ಚಂದ್ರು ಅಚಾನಕ್ ಆಗಿ ಹೋಟೆಲ್​ ಬ್ಯುಸಿನೆಸ್​ಗೆ ಬಂದಿದ್ದಾಗಿ ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ. ಆದರೆ, ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು ಎಂಬ ಕುತೂಹಲ ಹಲವರಲ್ಲಿ ಮೂಡಿದ್ದು, ಈ ಬಗ್ಗೆ ಚಂದ್ರು ಕೊಟ್ಟ ಉತ್ತರ ಹೀಗಿದೆ.

    ನಾನು ಯಾವುದೇ ಆಸ್ತಿಯನ್ನು ಮಾಡಿಲ್ಲ. ಫುಟ್​ಪಾತ್​ನಿಂದ ಶುರುವಾದ ವ್ಯಾಪಾರ ಇಂದು ದೊಡ್ಡ ಹೋಟೆಲ್​​ವರೆಗೆ ಬಂದು ನಿಂತಿದೆ ಅದೇ ನಾನು ಮಾಡಿರುವ ಆಸ್ತಿ. ಭಗವಂತ ಹಾಗೂ ಜನರ ಆಶೀರ್ವಾದ ನನ್ನ ಮೇಲೆ ಇದ್ದರೆ ಮುಂದಿನ ದಿನಗಳಲ್ಲಿ ಆಸ್ತಿ ಮಾಡುತ್ತೇನೆ. ನಾನು ಯಾವುದೇ ಪ್ರಮೋಷನ್​ ಮಾಡಿದರು ಅದಕ್ಕೆ ದುಡ್ಡು ತೆಗೆದುಕೊಂಡಿಲ್ಲ. ಶ್ರಮ ಹಾಕುತ್ತಿದ್ದೇನೆ ಅದಕ್ಕೆ ದೇವರು ಪ್ರತಿಫಲ ಕೊಟ್ಟಿದ್ದಾನೆ ಅಷ್ಟೇ.

    ಇದನ್ನೂ ಓದಿ: ಬೆಂಗಳೂರು ಜಲಕ್ಷಾಮ; ಅನಗತ್ಯವಾಗಿ ನೀರನ್ನು ಪೋಲು ಮಾಡಿದರೆ ಬೀಳುತ್ತೆ ಭಾರೀ ದಂಡ

    ನಾನು ಆಗರ್ಭ ಶ್ರೀಮಂತ ಚಿಕ್ಕ ವಯಸ್ಸಿನಿಂದಲೂ ದುಡ್ಡು ನೋಡಿದ್ದೇನೆ. ಅದನ್ನೆಲ್ಲಾ ಬಿಟ್ಟು ಸಿನಿಮಾ ಫೀಲ್ಡ್​ಗೆ ಬಂದೆ. ನಾನು ಸ್ವಂತವಾಗಿ ನಿಂತು ಈ ಮಟ್ಟಕ್ಕೆ ಬೆಳೆದಿದ್ದೇನೆ. ಮೊದಲಿಗೆ ಕುಟುಂಬಸ್ಥರು ಹಾಗೂ ಸಂಬಂಧಿಕರು ಇದಕ್ಕೆ ವಿರೋಧಿಸಿದ್ದರು. ಆದರೆ, ನಾನು ನನ್ನ ಸ್ವಂತ ಪರಿಶ್ರಮದಿಂದ ಬೆಳೆದಿದ್ದೇನೆ. ನಾನು ನನ್ನ ಸ್ವಂತ ಮನೆಯನ್ನು ಮಾರಾಟ ಮಾಡಿ ಈ ಹೋಟೆಲ್​ಅನ್ನು ನಡೆಸುತ್ತಿದ್ದೇನೆ.

    ಜನರು ಕೊಟ್ಟಿರುವ ಪ್ರೀತಿ ವಿಶ್ವಾಸದಿಂದ ನಾನು ಇವತ್ತೂ ಹೋಟೆಲ್​ ಮಾಡಿದ್ದೇನೆ. ಜನರು ಹೀಗೆ ಪ್ರೀತಿಯನ್ನು ಕೊಟ್ಟರೆ ಮುಂದಿನ ದಿನಗಳಲ್ಲಿ ಆಸ್ತಿ ಹಾಗೂ ಇನ್ನೂ ದೊಡ್ಡ ಹೋಟೆಲ್​ಅನ್ನು ಮಾಡುತ್ತೇನೆ. ನನ್ನ ಬಳಿ ಪ್ರಸ್ತುತ ಆಸ್ತಿ ಏನಾದರೂ ಇದ್ದರೆ ಅದು ಈ ಹೋಟೆಲ್​ ಮಾತ್ರ ಇದನ್ನು ಹೊರತುಪಡಿಸಿ ನನ್ನ ಬಳಿ ಬೇರೇನೂ ಇಲ್ಲ. ನಾನು 32 ವರ್ಷಗಳಿಂದ ಈ ಫೀಲ್ಡ್​ನಲ್ಲಿದ್ದು, ಬೆಳ್ಳುಳ್ಳಿ ಕಬಾಬ್​ ವೈರಲ್​ ಆದ ನಂತರ ಬ್ಯುಸಿನೆಸ್​ನಲ್ಲಿ ಒಂದು ಶೇ.30ರಷ್ಟು ಬೆಳವಣಿಗೆಯಾಗಿದೆ. ಆದರೆ, ನಾನು ಯಾವುದೇ ಆಸ್ತಿಯನ್ನು ಮಾಡಿಲ್ಲ ಎಂದು ಬೆಳ್ಳುಳ್ಳಿ ಕಬಾಬ್​ ಖ್ಯಾತಿಯ ನಿಮ್ಮನೆ ಚಂದ್ರು ಅವರು ವಿಜಯವಾಣಿ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts