

ಕಾಠ್ಮಂಡು: ನೇಪಾಳ ಪ್ರಧಾನಿ ಕೆಪಿ. ಶರ್ಮ ಓಲಿಯ ಚೀನಾ ಪರ ನಿಲುವು ಅವರಿಗೇ ತಿರುಗು ಬಾಣವಾಗಿ ಪರಿಣಮಿಸಿದೆ. ಪ್ರಧಾನಿ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿರುವ ಓಲಿ ನೀತಿಯನ್ನು ಖಂಡಿಸಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಈ ನಡುವೆ, ನೇಪಾಳದಲ್ಲಿ ಚೀನಾದ ರಾಯಭಾರಿಯಾಗಿರುವ ಹೌ ಯಾಂಕಿ ಚೀನಾದ ಪ್ರಭಾವವನ್ನು ಉಳಿಸಲು ಹಾಗೂ ಓಲಿಯನ್ನು ಚೀನಾದ ಕೈಗೊಂಬೆಯಾಗಿರುವಂತೆ ನೋಡಿಕೊಳ್ಳುವ ತನ್ನ ಯತ್ನವನ್ನು ಮುಂದುವರಿಸಿದ್ದಾರೆ.
ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದ ಹಲವು ಮುಖಂಡರನ್ನು ಭೇಟಿಯಾಗಿರುವ ಯಾಂಕಿ ಓಲಿಯನ್ನು ಅಧಿಕಾರದಿಂದ ಕೆಳಗಿಳಿಸದಂತೆ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ಕಚೇರಿಯೊಂದಿಗೂ ಆಕೆ ಸಂಪರ್ಕ ಹೊಂದಿದ್ದಾಳೆ.
ಕಳೆದ ಎರಡು ದಿನಗಳಲ್ಲಿ ಮಾಜಿ ಪ್ರಧಾನಿ ಮಾಧವ್ಕುಮಾರ್, ಝಾಲಾನಾಥ್ ಕನ್ನಲ್ ಭೇಟಿಯಾಗಿ ಓಲಿ ಹಾಗೂ ಪ್ರಚಂಡ ನಡುವಿನ ಅಧಿಕಾರ ಹಂಚಿಕೆಯ ಚರ್ಚೆ ನಡೆಸಿದ್ದಾಳೆ ಎಂದು ಹೇಳಲಾಗಿದೆ.
ಯಾಂಕಿಯ ಈ ಚಟುವಟಿಕೆಗಳನ್ನು ನೇಪಾಳದ ಜನರು ವಿರೋಧಿಸಿದ್ದಾರೆ. ಸಾರ್ವಭೌಮ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿರುವ ನೇಪಾಳದ ಆಂತರಿಕ ವಿಚಾರಗಳಲ್ಲಿ ಮೂರನೇಯವರ ಹಸ್ತಕ್ಷೇಪವನ್ನು ವಿರೋಧಿಸುವುದಾಗಿ ರಾಜಕೀಯ ಮುಂಖಂಡರು ಬಹಿರಂಗವಾಗಿ ಹೇಳೀಕೆ ನೀಡಿದ್ದಾರೆ. ಇದು ಚೀನಾದ ಮುಖಭಂಗಕ್ಕೆ ಕಾರಣವಾಗಿದೆ.