ಅಮಿತಾಭ್​ ಬಚ್ಚನ್​, ಅಭಿಷೇಕ್​ ಬಚ್ಚನ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸಿದ ನೇಪಾಳ ಪ್ರಧಾನಿ

Nepal PM
Published on

ಕಠ್ಮಂಡು: ಕೊವಿಡ್​-19 ಸೋಂಕಿಗೆ ಒಳಗಾಗಿರುವ ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ಅವರ ಆರೋಗ್ಯಕ್ಕಾಗಿ ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಕೋಲ್ಕತ್ತದಲ್ಲಿ ಹವನವನ್ನೂ ಮಾಡುತ್ತಿದ್ದಾರೆ. ರಾಜಕೀಯ, ಕ್ರೀಡಾ ವಲಯಗಳಿಂದ ಗಣ್ಯರೂ ಕೂಡ ಬಿಗ್​ ಬಿ ಆರೋಗ್ಯ ಬೇಗ ಸರಿಯಾಗಲಿ ಎಂದು ಹಾರೈಸುತ್ತಿದ್ದಾರೆ.

ಇದೀಗೆ ನೇಪಾಳ ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಓಲಿ ಅವರು ಟ್ವೀಟ್​ ಮಾಡಿ, ಅಮಿತಾಭ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್​ ಆರೋಗ್ಯ ಶೀಘ್ರವೇ ಸರಿ ಹೋಗಲಿ ಎಂದು ಹಾರೈಸಿದ್ದಾರೆ.ಹಿರಿಯ ನಟ ಅಮಿತಾಭ್​ ಬಚ್ಚನ್​ ಹಾಗೂ ಅವರ ಪುತ್ರ ಅಭಿಷೇಕ್​ ಬಚ್ಚನ್​ ಆದಷ್ಟು ಬೇಗ ಕೊವಿಡ್​-19 ಸೋಂಕಿನಿಂದ ಚೇತರಿಸಿಕೊಳ್ಳಲಿ ಎಂದು ಕೆ.ಪಿ. ಶರ್ಮಾ ಟ್ವೀಟ್​ ಮಾಡಿದ್ದಾರೆ.ಇದನ್ನೂ ಓದಿ: ಗೋಗ್ರಾದಿಂದ ಚೀನಾ ಸೈನಿಕರು ಹಿಂದೆ ಸರಿದಿದ್ದೇ ಸುಳ್ಳು ಎಂದ ನಿವೃತ್ತ ಕರ್ನಲ್​: ರಾಹುಲ್​ ಗಾಂಧಿ ಕೆಂಡಾಮಂಡಲ

ಭಾರತದಲ್ಲಿರುವ ಫ್ರೆಂಚ್​ ರಾಯಭಾರಿ ಇಮ್ಯಾನುವಲ್ ಲೆನಿಯನ್​ ಅವರೂ ಕೂಡ ಟ್ವೀಟ್​ ಮಾಡಿ, ಇವರಿಬ್ಬರ ಆರೋಗ್ಯ ಬೇಗ ಸರಿಯಾಗಲಿ ಎಂದು ಹಾರೈಸಿದ್ದರು.

ನಿನ್ನೆ ಮೊದಲು ಅಮಿತಾಭ್​ ಬಚ್ಚನ್​ ಅವರಲ್ಲಿ ಕರೊನಾ ದೃಢಪಟ್ಟಿತ್ತು. ಅದಾದ ಬಳಿಕ ಅಭಿಷೇಕ್​ ಬಚ್ಚನ್​ರಲ್ಲೂ ಕೊವಿಡ್​ ಇರುವುದು ದೃಢಪಟ್ಟಿತ್ತು. ಹಾಗೇ ಇಂದು, ಐಶ್ವರ್ಯಾ ರೈ ಮತ್ತು ಅವರ ಮಗಳು ಆರಾಧ್ಯ ಅವರಿಗೂ ಸೋಂಕು ಇರುವುದು ಗೊತ್ತಾಗಿದೆ. ಸದ್ಯ ಜಯಾ ಬಚ್ಚನ್​ ಅವರು ಆರೋಗ್ಯವಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net