ಗೌಡತ್ತಿಗೆ ಗದ್ದೆಯಲ್ಲಿ ಸಿರಿ ಸಮೃದ್ಧಿ ನೇಜಿ ನಾಟಿ

New Project (4)
Published on

ಬೆಳ್ತಂಗಡಿ: ಜೈ ಶ್ರೀರಾಮ್ ಸೇವಾ ಟ್ರಸ್ಟ್, ಶ್ರೀರಾಮ ಶಿಶು ಮಂದಿರದ ಮಕ್ಕಳ ಅನ್ನಯಜ್ಞಕ್ಕೆ ಮೊಗ್ರು ಗ್ರಾಮದ ಮುಗೇರಡ್ಕ ಪರಿಸರದ ಗೌಡತ್ತಿಗೆ ಗದ್ದೆಯಲ್ಲಿ ಸಿರಿ ಸಮೃದ್ಧಿ ನೇಜಿ ನಾಟಿ ಕಾರ್ಯಕ್ರಮ ಭಾನುವಾರ ನಡೆಯಿತು.

ಅಲೆಕ್ಕಿ ಜೈ ಶ್ರೀರಾಮ್ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಉದಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಿದರು.

ಉದ್ಯಮಿ ಮೋಹನ್ ಕುಮಾರ್, ಪದ್ಮುಂಜ ಸಿ.ಎ.ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪಣಿಕ್ಕರ, ಮಡಂತ್ಯಾರು ಶ್ರೀ ದುರ್ಗಾ ಇಂಡಸ್ಟ್ರೀಸ್‌ನ ಉಮೇಶ್ ಶೆಟ್ಟಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣಿಯೂರು ವಲಯ ಮೇಲ್ವಿಚಾರಕ ಶಿಲ್ಪಾ, ಮುಗೇರಡ್ಕ ಮೂವರು ದೈವಗಳ ದೈವಸ್ಥಾನ ಆಡಳಿತ ಮೊಕ್ತೇಸರ ಮನೋಹರ ಗೌಡ ಅಂತರ, ಪ್ರಗತಿಪರ ಕೃಷಿಕ ಚಂದ್ರಹಾಸ ಗೌಡ ದೇವಸ್ಯ, ಬಂದಾರು ಗ್ರಾಪಂ ಸದಸ್ಯರಾದ ಗಂಗಾಧರ ಪೂಜಾರಿ, ಬಾಲಕೃಷ್ಣ ಗೌಡ ಮುಗೇರಡ್ಕ, ಅಲೆಕ್ಕಿ ಜೈ ಶ್ರೀರಾಮ್ ಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ್ ಎನ್., ಜಿನ್ನಪ್ಪ ಗೌಡ ಗೌಡತ್ತಿಗೆ, ಉಮಾವತಿ ಗೌಡ ಗೌಡತ್ತಿಗೆ, ಮನೋಹರ ಅಂತರ, ಕೊರಗಪ್ಪ ಕೊಳಬ್ಬೆ, ಧನ್ವಿತ್ ಪ್ರಶಾಂತ್ ಗೌಡ ಉರುಂಬುತ್ತಿಮಾರ್ ಮೊದಲಾದವರಿದ್ದರು. ಶಿಶುಮಂದಿರ ಮಾತಾಜಿ ಪುಷ್ಪಲತಾ ಸ್ವಾಗತಿಸಿದರು. ಭರತೇಶ್ ಪಿ.ಪುಣ್ಕೆದಡಿ ನಿರೂಪಿಸಿದರು. ಬಾಲಕೃಷ್ಣ ಗೌಡ ಮುಗೇರಡ್ಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net