ಮುರುಳ್ಯ ಶಾಲಾ ವಿದ್ಯಾರ್ಥಿಗಳಿಂದ ನೇಜಿ ನಾಟಿ

New Project (3)
Published on

ಸುಬ್ರಹ್ಮಣ್ಯ: ಕೇರ್ಪಡದ ದೇವರಮಜಲು ಪ್ರಗತಿಪರ ಕೃಷಿಕ ಅವಿನಾಶ್ ದೇವರಮಜಲು ಹೊಸದಾಗಿ ನಿರ್ಮಿಸಿದ ಭತ್ತದ ಗದ್ದೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಂಡ ಭತ್ತದ ತಳಿ ಸಹ್ಯಾದ್ರಿ ಬ್ರಹ್ಮ ನೇಜಿ ನಾಟಿ ಕಾರ್ಯ ನಡೆಯಿತು.

ಮುರುಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಹಿರಿಯರ ಸಹಕಾರದಿಂದ ನೇಜಿ ನಾಟಿ ಮಾಡಿದರು. ವಿದ್ಯಾರ್ಥಿಗಳಿಗೆ ನೇಜಿ ನಾಟಿಯ ಪ್ರಾತ್ಯಕ್ಷಿಕೆ ನೀಡಲಾಯಿತು.

ಪಂಜದ ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕಿ ಸ್ಮಿತಾ ಮಾಹಿತಿ ನೀಡಿದರು. ಕೃಷಿ ಸಖಿ ಪ್ರೇಮ ಮೋಹನ ಎಡಮಂಗಲ, ವಾರಿಜಾ ದಾಮೋದರ ಗೌಡ ದೇವರಮಜಲು ಮತ್ತು ಮನೆಯವರು, ನಿವೃತ್ತ ಅರಣ್ಯಾಧಿಕಾರಿ ದೇರಣ್ಣ ಗೌಡ ಅಬ್ಬಡ, ಕಮಲ ದೇರಣ್ಣಗೌಡ ಅಬ್ಬಡ, ಮುರುಳ್ಯ ಶಾಲಾ ಗೈಡ್ ಶಿಕ್ಷಕಿ ನಳಿನಾಕ್ಷಿ ಬಿ., ಹರ್ಷಿತಾ ಸುರೇಶ್, ಮೇದಪ್ಪ ಗೌಡ ಕೇರ್ಪಡ, ಯತೀಂದ್ರನಾಥ ರೈ ನಾಗನಕಜೆ, ಕಾವ್ಯಂಜಲಿ ಕಾರ್ಕಳ, ಗೀತಾ ಮಾಚಣ್ಣ ಗೌಡ ಕೇರ್ಪಡ, ವಾರಿಜಾಕ್ಷಿ ಕೇರ್ಪಡ, ಪುಷ್ಪಾವತಿ ಕೇರ್ಪಡ, ಮುರುಳ್ಯ ಎಸ್‌ಡಿಎಂಸಿ ಉಪಾಧ್ಯಕ್ಷೆ ಸವಿತಾ ಕರಂಬಿಲ ಸಹಕರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net