

ಆಂಧ್ರಪ್ರದೇಶ: ರೈಲಿನ ಇಂಜಿನ್ ರಿಪೇರಿ ಮಾಡುವಾಗ ಮತ್ತೊಬ್ಬ ಮೆಕ್ಯಾನಿಕ್ ಎಂಜಿನ್ ಆನ್ ಮಾಡಿ ಉದ್ಯೋಗಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆ ಅನಂತಪುರ ಜಿಲ್ಲೆ ಗುಂತಕಲ್ಲು ರೈಲ್ವೆ ಲೋಕೋ ಶೆಡ್ ನಲ್ಲಿ ಸಂಭವಿಸಿದೆ.
ಶಾಂತಾರಾಮ್ ಮೃತ. ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಈತ ರೈಲಿನ ಇಂಜಿನ್ ರಿಪೇರಿ ಮಾಡುವಾಗ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಅನಂತಪುರ ಜಿಲ್ಲೆಯ ಗುಂತಕಲ್ಲು ರೈಲ್ವೆ ಲೋಕೋ ಶೆಡ್‌ನಲ್ಲಿ ಡೀಸೆಲ್ ಇಂಜಿನ್ ರಿಪೇರಿ ಮಾಡುವಾಗ ಗ್ರೇಡ್ 1 ಮೆಕ್ಯಾನಿಕ್ ಶಾಂತಾರಾಮ್ ಎಂಬವರು ರೈಲಿನ ಇಂಜಿನ್‌ನಲ್ಲಿನ ಪ್ರೆಶರ್ ಫ್ಯಾನ್‌ನ ರಬ್ಬರ್‌ಗಳನ್ನು ಬದಲಾಯಿಸುವಾಗ, ಇನ್ನೊಬ್ಬ ಉದ್ಯೋಗಿ ಅದನ್ನು ಗಮನಿಸದೆ ರೈಲಿನ ಎಂಜಿನ್ ಅನ್ನು ಆನ್ ಮಾಡಿದ್ದು, ಶಾಂತಾರಾಮ್ ದೇಹ ಫ್ಯಾನ್ ರೆಕ್ಕೆಗಳ ನಡುವೆ ಸಿಲುಕಿಕೊಂಡಿದೆ.
ರೈಲ್ವೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ರೈಲ್ವೆ ಉದ್ಯೋಗಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಅನಂತಪುರ ಜಿಲ್ಲೆಯ ಗುಂತಕಲ್ಲು ರೈಲು ನಿಲ್ದಾಣ ವ್ಯಾಪ್ತಿಯಲ್ಲಿ ಭಾನುವಾರ (ಆಗಸ್ಟ್ 20) ಈ ದಾರುಣ ಘಟನೆ ನಡೆದಿದೆ. ಶಾಂತರಾಮ್ ಅವರ ದೇಹವು ಫ್ಯಾನ್ ರೆಕ್ಕೆಗಳ ನಡುವೆ ಸಿಲುಕಿ ಸಂಪೂರ್ಣ ಛಿದ್ರಗೊಂಡಿದ್ದರಿಂದ, ಅದನ್ನು ಹೊರತೆಗೆಯಲು ರೈಲಿನ ಇಂಜಿನ್ ಮೇಲ್ಭಾಗವನ್ನು ತೆಗೆಯಬೇಕಾಯಿತು.