ನೀರಜ್​-ಮನು ಭಾಕರ್​ ಪ್ರೀತಿಯ ಬಲೆಯಲ್ಲಿ ಬಿದ್ದಿರುವುದು ನಿಜ! ಇದಕ್ಕಿಂತ ಸಾಕ್ಷಿ ಬೇಕಾ ಅಂದ್ರು ನೆಟ್ಟಿಗರು

Neeraj and Manu Bhaker

ನವದೆಹಲಿ: ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಡೈಮಂಡ್ ಲೀಗ್ ಫೈನಲ್‌ನಲ್ಲಿ ಎರಡನೇ ಸ್ಥಾನ ಪಡೆದರು. ಈ ಸ್ಪರ್ಧೆಗೂ ಮುನ್ನವೇ ತರಬೇತಿಯಲ್ಲಿ ನೀರಜ್ ಎಡಗೈ ಬೆರಳು ಮುರಿದಿದೆ. ಗಾಯದಿಂದ ಬಳಲುತ್ತಿದ್ದರೂ ಸ್ಪರ್ಧೆಯಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದರು. ಇದು ಈ ವರ್ಷದ ಕೊನೆಯ ಸ್ಪರ್ಧೆ ಮತ್ತು 2025ರಲ್ಲಿ ನಿಮ್ಮನ್ನು ಮತ್ತೆ ಭೇಟಿಯಾಗುತ್ತೇನೆ ಎಂದು ಗಾಯಗೊಂಡ ಎಕ್ಸ್​ರೇ ಫೋಟೋ ಸಮೇತ ನೀರಜ್ ಚೋಪ್ರಾ ಎಕ್ಸ್​ ಪೋಸ್ಟ್ ಮಾಡಿದ್ದಾರೆ. ಇದೀಗ ನೀರಜ್​ ಪೋಸ್ಟ್‌ಗೆ ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಪ್ರತಿಕ್ರಿಯಿಸಿದ್ದು ಮತ್ತೆ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

ನೀರಜ್​ ಪೋಸ್ಟ್​ನಲ್ಲಿ ಏನಿದೆ?
ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ನೀರಜ್​, 2024ರ ಸೀಸನ್ ಮುಗಿಯುತ್ತಿದ್ದಂತೆ ವರ್ಷದಲ್ಲಿ ನಾನು ಕಲಿತ ಎಲ್ಲದರ ಬಗ್ಗೆ ನಾನು ಹಿಂತಿರುಗಿ ನೋಡುತ್ತೇನೆ. ಸುಧಾರಣೆ, ಹಿನ್ನಡೆ ಹಾಗೂ ಮನಸ್ಥಿತಿ ಎಲ್ಲದರ ಬಗ್ಗೆ ಅವಲೋಕಿಸುತ್ತೇನೆ. ಡೈಮಂಡ್​ ಲೀಗ್​ಗೂ ಮುನ್ನ ಅಭ್ಯಾಸದಲ್ಲಿ ಗಾಯಗೊಂಡೆನು. ಕ್ಷ-ಕಿರಣಗಳು ನನ್ನ ಎಡಗೈಯಲ್ಲಿ ನಾಲ್ಕನೇ ಮೆಟಾಕಾರ್ಪಲ್ ಅನ್ನು ಮುರಿದಿರುವುದನ್ನು ತೋರಿಸಿದೆ. ಇದು ನನಗೆ ಮತ್ತೊಂದು ನೋವಿನ ಸವಾಲಾಗಿತ್ತು. ಆದರೆ, ನನ್ನ ತಂಡದ ಸಹಾಯದಿಂದ ನಾನು ಬ್ರಸೆಲ್ಸ್‌ನಲ್ಲಿ ಭಾಗವಹಿಸಲು ಸಾಧ್ಯವಾಯಿತು. ಇದು ಈ ವರ್ಷದ ಕೊನೆಯ ಸ್ಪರ್ಧೆಯಾಗಿತ್ತು ಮತ್ತು ನನ್ನ ಸೀಸನ್ ಅನ್ನು ಟ್ರ್ಯಾಕ್‌ನಲ್ಲಿ ಕೊನೆಗೊಳಿಸಲು ನಾನು ಬಯಸುತ್ತೇನೆ. ನನ್ನ ಸ್ವಂತ ನಿರೀಕ್ಷೆಗಳನ್ನು ನಾನು ಪೂರೈಸಲು ಸಾಧ್ಯವಾಗದಿದ್ದರೂ, ಇದು ನಾನು ಬಹಳಷ್ಟು ಕಲಿತಿರುವ ಸೀಸನ್​ ಎಂದು ಭಾವಿಸುತ್ತೇನೆ. ನಿಮ್ಮ ಪ್ರೋತ್ಸಾಹಕ್ಕಾಗಿ ನಾನು ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. 2024 ನನ್ನನ್ನು ಉತ್ತಮ ಕ್ರೀಡಾಪಟು ಮತ್ತು ವ್ಯಕ್ತಿಯನ್ನಾಗಿ ಮಾಡಿದೆ. 2025 ರಲ್ಲಿ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ನೀರಜ್​ ಹೇಳಿದ್ದಾರೆ.

ಮನು ಭಾಕರ್​ ಪ್ರತಿಕ್ರಿಯೆ
ನೀರಜ್​ ಪೋಸ್ಟ್​ ಅನ್ನು ಟ್ಯಾಗ್​ ಮಾಡಿ ಪ್ರತಿಕ್ರಿಯೆ ನೀಡಿರುವ ಮನು ಭಾಕರ್​, 2024ರ ಅದ್ಭುತ ಸೀಸನ್​ಗಾಗಿ ನೀರಜ್​ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅಲ್ಲದೆ, ಶೀಘ್ರವಾಗಿ ಚೇತರಿಸಿಕೊಳ್ಳಲು ಮತ್ತು ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಯಶಸ್ಸನ್ನು ಬಯಸುವುದಾಗಿ ಶುಭಕೋರಿದ್ದಾರೆ.

ಊಹಾಪೋಹ ಮತ್ತೆ ಜೀವಂತ
ನೀರಜ್​ ಚೋಪ್ರಾ ಪೋಸ್ಟ್​ಗೆ ಮನು ಭಾಕರ್​ ಪ್ರತಿಕ್ರಿಯೆ ನೀಡುತ್ತಿದ್ದಂತೆ ಊಹಾಪೋಹಗಳು ಮತ್ತೆ ಜೀವ ಪಡೆದುಕೊಂಡಿವೆ. ಕೆಲ ದಿನಗಳ ಹಿಂದೆ ಅಂದರೆ ಪ್ಯಾರಿಸ್​ ಒಲಿಂಪಿಕ್ಸ್​ ಸಮಯದಲ್ಲಿ ಎರಡು ವಿಡಿಯೋ ವೈರಲ್​ ಆಗಿತ್ತು. ಒಂದು ವಿಡಿಯೋದಲ್ಲಿ ನೀರಜ್​ ಮತ್ತು ಮನು ಭಾಕರ್​ ಮತ್ತು ಇನ್ನೊಂದು ವಿಡಿಯೋದಲ್ಲಿ ನೀರಜ್​ ಮತ್ತು ಮನು ಭಾಕರ್​ ತಾಯಿ ಆತ್ಮೀಯವಾಗಿ ಮಾತನಾಡುತ್ತಿರುವ ದೃಶ್ಯವಿತ್ತು. ವಿಡಿಯೋ ವೈರಲ್​ ಆದ ಬಳಿಕ ಮನು ಭಾಕರ್​ ಮತ್ತು ನೀರಜ್​ ಪ್ರೀತಿ ಮಾಡುತ್ತಿದ್ದಾರೆ. ಇಬ್ಬರ ನಡುವೆ ಪ್ರೀತಿ ಚಿಗುರಿದೆ. ಮನು ಭಾಕರ್​ ತಾಯಿ ಸುಮೇಧಾ ಅವರು ನೀರಜ್​ ಜತೆ ತಮ್ಮ ಮಗಳ ಮದುವೆ ಫಿಕ್ಸ್​ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದೆಲ್ಲ ವದಂತಿ ಹರಿದಾಡಿತ್ತು. ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂಬುದು ಬಹುದೊಡ್ಡ ಚರ್ಚೆಯಾಗಿ ಆನಂತರ ತಣ್ಣಗಾಗಿತ್ತು. ಆದರೆ, ಇದೀಗ ನೀರಜ್​ ಪೋಸ್ಟ್​ಗೆ ಮನು ಭಾಕರ್​ ಪ್ರತಿಕ್ರಿಯಿಸಿರುವುದು ಊಹಾಪೋಹಕ್ಕೆ ಮರುಜೀವ ಬಂದಿದೆ. ಇಬ್ಬರ ನಡುವೆ ಖಂಡಿತ ಏನೋ ಇದೆ. ಪರಸ್ಪರ ಇಬ್ಬರು ಪ್ರೀತಿ ಮಾಡುತ್ತಿರಬಹುದು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು ಡೈಮಂಡ್​ ಲೀಗ್​ ವಿಚಾರಕ್ಕೆ ಬಂದರೆ, ಆ್ಯಂಡರ್ಸನ್ ಅವರು ತಮ್ಮ ಮೊದಲ ಎಸೆತದಲ್ಲಿಯೇ 87.87 ಮೀಟರ್​ ದೂರ ಎಸೆದರು. ನೀರಜ್ ತಮ್ಮ ಮೂರನೇ ಥ್ರೋನಲ್ಲಿ 87.86 ಮೀ ಎಸೆದರು. ನಂತರದ ಮೂರು ಎಸೆತಗಳಲ್ಲಿ ನೀರಜ್ ಕ್ರಮವಾಗಿ 82.04 ಮೀ, 83.30 ಮೀ ಹಾಗೂ 86.46 ಮೀ ದೂರ ಥ್ರೋ ಮಾಡಿದರು. ಎರಡು ಬಾರಿ ವಿಶ್ವ ಚಾಂಪಿಯನ್ ಆಗಿರುವ ಗ್ರೆನಡಾದ ಪೀಟರ್ಸ್ ತನ್ನ ಆರಂಭಿಕ ಪ್ರಯತ್ನದಲ್ಲಿ ದಿನದ ಅತ್ಯುತ್ತಮ ಎಸೆತವನ್ನು ಸಾಧಿಸಿದರು. ಜರ್ಮನಿಯ ಜೂಲಿಯನ್ ವೆಬರ್ 85.97 ಮೀಟರ್ ಎಸೆದು ಮೂರನೇ ಸ್ಥಾನ ಗಳಿಸಿದರು.

ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಚಿನ್ನ ಗೆದ್ದಿದ್ದ ನೀರಜ್, ಪ್ಯಾರಿಸ್‌ನಲ್ಲಿ ನಡೆದ 2024 ಒಲಿಂಪಿಕ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಈ ಮೂಲಕ ತಮ್ಮ ಸೀಸನ್​ ಅನ್ನು ಉನ್ನತ ಮಟ್ಟದಲ್ಲಿ ಕೊನೆಗೊಳಿಸಿದರು. ಡೈಮಂಡ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿರುವ ಪೀಟರ್ಸ್ ಡೈಮಂಡ್ ಲೀಗ್ ಟ್ರೋಫಿ ಮತ್ತು 30,000 ಡಾಲರ್ (25 ಲಕ್ಷ ರೂ) ನಗದು ಬಹುಮಾನವನ್ನು ಪಡೆಯಲಿದ್ದಾರೆ. ಇತ್ತ ಎರಡನೇ ಸ್ಥಾನ ಗಳಿಸಿರುವ ನೀರಜ್ 12,000 ಡಾಲರ್ (10 ಲಕ್ಷ ರೂ) ನಗದು ಬಹುಮಾನ ಪಡೆಯಲಿದ್ದಾರೆ.

ಇನ್ನು ಮನು ಭಾಕರ್ ಅವರು ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಶೂಟರ್ ಎಂಬ ದಾಖಲೆ ಸೃಷ್ಟಿಸಿರುವುದು ಗೊತ್ತೇ ಇದೆ. ಪ್ಯಾರಿಸ್ ಒಲಿಂಪಿಕ್ಸ್-2024 ಮಹಿಳೆಯರ 10 ಮೀಟರ್ಸ್​ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚು ಮತ್ತು ಮಿಶ್ರ 10 ಮೀಟರ್ಸ್​ ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಮತ್ತೊಂದು ಕಂಚಿನ ದಾಖಲೆಯನ್ನು ನಿರ್ಮಿಸಿದರು. 25 ಮೀಟರ್ಸ್​ ವಿಭಾಗದಲ್ಲಿ ಮೂರನೇ ಪದಕ ಸ್ವಲ್ಪದರಲ್ಲೇ ಕೈ ತಪ್ಪಿತು. ಇನ್ನೂ ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಫೈನಲ್‌ನಲ್ಲಿ 89.45 ಮೀಟರ್‌ ದೂರ ಜಾವೆಲಿನ್‌ ಎಸೆದು ಎರಡನೇ ಸ್ಥಾನ ಪಡೆದರು. (ಏಜೆನ್ಸೀಸ್​)

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…