

ದೆಹಲಿ: ಡ್ರಗ್ಸ್ ಕೇಸ್ ಸಂಬಂಧ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್, ಶ್ರದ್ಧಾ ಕಪೂರ್ ಮತ್ತು ರಕುಲ್ ಪ್ರೀತ್ ಸಿಂಗ್ಗೆ ಮಾದಕ ವಸ್ತುಗಳ ನಿಯಂತ್ರಣ ವಿಭಾಗ (ಎನ್ಸಿಬಿ) ಸಮನ್ಸ್ ಜಾರಿ ಮಾಡಿದೆ.
ಸ್ಯಾಂಡಲ್ವುಡ್ನ ರಾಗಿಣಿ ದ್ವಿವೇದಿ, ಸಂಜನಾ ಅಲಿಯಾಸ್ ಮಹಿರಾ ಡ್ರಗ್ಸ್ ಕೇಸ್ನಲ್ಲಿ ಜೈಲು ಸೇರಿದ್ದಾರೆ. ಇದೀಗ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ ಮಾಫಿಯಾ ಉರುಳು ಕನ್ನಡದ ಹುಡುಗಿ, ಬಾಲಿವುಡ್ನ ಟಾಪ್ ನಟಿ ದೀಪಿಕಾ ಪಡುಕೋಣೆಗೂ ಸುತ್ತಿಕೊಂಡಿದೆ. ದೀಪಿಕಾ ಜತೆಗೆ ಇನ್ನೂ ಮೂವರಿಗೆ ಎನ್ಸಿಬಿ ಬುಧವಾರ ಸಮನ್ಸ್ ಜಾರಿ ಮಾಡಿದ್ದು, ಬಾಲಿವುಡ್ನಲ್ಲಿ ಸಂಚಲನ ಸೃಷ್ಟಿಸಿದೆ. ಈ ನಾಲ್ವರು ಮುಂದಿನ ಮೂರು ದಿನಗಳೊಳಗೆ ಎನ್ಸಿಬಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ. 25ರಂದು ವಿಚಾರಣೆಗೆ ಹಾಜರಾಗಲು ದೀಪಿಕಾ ಅವರಿಗೆ ಸೂಚಿಸಲಾಗಿದೆ.
ನಟ ಸುಶಾಂತ್ ನಿಗೂಢ ಸಾವಿನ ಹಿನ್ನೆಲೆಯಲ್ಲಿ ಎನ್ಸಿಬಿ ತನಿಖೆ ನಡೆಸುತ್ತಿದೆ. ನಿನ್ನೆಯಷ್ಟೇ (ಮಂಗಳವಾರ) ದೀಪಿಕಾ ಪಡುಕೋಣೆಯ ವ್ಯವಸ್ಥಾಪಕ ಕರಿಷ್ಮಾ ಪ್ರಕಾಶ್ರನ್ನು ಎನ್ಸಿಬಿ ವಿಚಾರಣೆ ನಡೆಸಿತ್ತು. ರಿಯಾ ಚಕ್ರವರ್ತಿ ವಾಟ್ಸ್ಆ್ಯಪ್ ಮೆಸೇಜ್ಗಳ ಆಧಾರದ ಮೇಲೆ ವಿಚಾರಣೆ ನಡೆಯುತ್ತಿದೆ. ಒಟ್ಟಿನಲ್ಲಿ ದಿನಕ್ಕೊಂದು ತಿರುವು ಪಡೆಯುತ್ತಿರುವ ಡ್ರಗ್ಸ್ ಮಾಫಿಯಾ ಪ್ರಕರಣ ಸ್ಯಾಂಡಲ್ವುಡ್ ಮತ್ತು ಬಾಲಿವುಡ್ನ ಘಟಾನುಘಟಿಗಳ ಬುಡಕ್ಕೆ ಬರುತ್ತಿದೆ.