

ರಿಯೋ ಡಿ ಜನೈರೊ: ಗರ್ಲ್ ಫ್ರೆಂಡ್ ಬ್ರುನಾ ಬಿಯಾನ್ಕಾರ್ಡಿ ಗರ್ಭಿಣಿಯಾಗಿದ್ದ ಸಮಯದಲ್ಲಿ ಬೇರೆ ಹೆಣ್ಣಿನ ಸಂಗ ಮಾಡುವ ಮೂಲಕ ಮೋಸ ಮಾಡಿರುವೆ ಎಂದು ಬ್ರೆಜಿಲ್ ಮತ್ತು ಪ್ಯಾರಿಸ್ ಸೇಂಟ್ ಜಮೈರ್ನ್ ಫುಟ್ಬಾಲ್ ತಂಡದ ತಾರೆ ನೇಮರ್ ಸಾಮಾಜಿಕ ಜಾಲತಾಣದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಖಾಸಗಿ ಬದುಕಿನ ಬಗ್ಗೆ ಸುದೀರ್ ಪೋಸ್ಟ್ ಹಾಕಿರುವ 31 ವರ್ಷದ ನೇಮರ್, "ನಾನೊಂದು ತಪ್ಪು ಮಾಡಿರುವೆ. ನಾನು ನಿನಗೆ ಮೋಸ ಮಾಡಿರುವೆ. ಈ ತಪ್ಪಿನ ಬಗ್ಗೆ ಪ್ರತಿದಿನವೂ ಹೇಳಬಲ್ಲೆ. ಆದರೆ ಈ ತಪ್ಪನ್ನು ನಾನು ನನ್ನ ಮನೆಯ ವೈಯಕ್ತಿಕ ಬದುಕಿನಲ್ಲೇ ತಿದ್ದಿಕೊಳ್ಳುವೆ. ಬ್ರುನಾ, ನಾನು ಈಗಾಗಲೆ ಈ ಬಗ್ಗೆ ನಿನ್ನಲ್ಲಿ ಕ್ಷಮೆಯಾಚಿಸಿರುವೆ. ಇದೀಗ ಸಾರ್ವಜನಿಕವಾಗಿಯೂ ನಿನ್ನ ಕ್ಷಮೆಯಾಚಿಸಲು ಬಯಸಿರುವೆ' ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ಹಲವು ಗರ್ಲ್ ಫ್ರೆಂಡ್ಗಳನ್ನು ಹೊಂದಿದ್ದ ನೇಮರ್, ಕಳೆದ ವರ್ಷ ಏಪ್ರಿಲ್ನಿಂದ ಬ್ರುನಾ ಬಿಯಾನ್ಕಾರ್ಡಿ ಜತೆ ಡೇಟಿಂಗ್ನಲ್ಲಿದ್ದಾರೆ. ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಅವರು ಕಳೆದ ಏಪ್ರಿಲ್ನಲ್ಲಿ ಪ್ರಕಟಿಸಿದ್ದರು. ನೇಮರ್ ಈಗಾಗಲೆ ಬಾಡಿಗೆ ತಾಯಿಯ ಮೂಲಕ 11 ವರ್ಷದ ಓರ್ವ ಪುತ್ರನನ್ನು ಹೊಂದಿದ್ದಾರೆ.