ನವಾಜುದ್ದೀನ್​ ಸಿದ್ದಿಕಿ ಮೇಲೆ ಕಿರುಕುಳ ಆರೋಪ ಹೊರಿಸಿದ ಪತ್ನಿ

Nawazuddin Siddiqui
Published on

ಮುಂಬೈ: ನವಾಜುದ್ದೀನ್ ಸಿದ್ದಿಕಿ ಪತ್ನಿ ಆಲಿಯಾ ಸಿದ್ದಿಕಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮಗೆ ಮನೆಯಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಆಸ್ತಿ ವಿವಾದದ ಕಾರಣ ನಟನ ತಾಯಿ ಆಕೆಯ ವಿರುದ್ಧ ದೂರು ನೀಡಿದ ನಂತರ ಆಲಿಯಾ ಸಿದ್ದಿಕಿ ಈ ಆರೋಪ ಹೊರಿಸಿದ್ದಾರೆ. ಪ್ರಸ್ತುತ ನವಾಜುದ್ದೀನ್ ಸಿದ್ದಿಕಿಯ ಅಂಧೇರಿಯಲ್ಲಿರುವ ಮನೆಯಲ್ಲಿ ಆಲಿಯಾ ತಂಗಿದ್ದು, ತಾನು ತನ್ನ ಮನೆಯೊಳಗೆ ಸಿಕ್ಕಿಬಿದ್ದಿದ್ದು ಮತ್ತು ಹೊರಬರಲು ಸಹ ಭಯಪಡುತ್ತಿರುವ ಬಗ್ಗೆ ಆರೋಪಿಸಿದರು.

ಪಾಸ್‌ಪೋರ್ಟ್ ಸಮಸ್ಯೆಯಿಂದಾಗಿ ಆಲಿಯಾ, ತನ್ನ ಮಕ್ಕಳಾದ ಯಾನಿ ಮತ್ತು ಶೋರಾಳೊಂದಿಗೆ ದುಬೈನಿಂದ ಮರಳಿದ್ದಾಳೆ ಎಂದು ವರದಿಯಾಗಿತ್ತು. ಈಕೆ ವಾಪಸ್​ ಮನೆಗೆ ಹಿಂದಿರುಗಿದಾಗ ವಿಷಯಗಳು ಹೊಸ ಹಾದಿ ಹಿಡಿದಿದ್ದವು. ವರ್ಸೋವಾ ಪೋಲಿಸ್ ಪ್ರಕಾರ, ನವಾಜುದ್ದೀನ್ ಅವರ ತಾಯಿ ಮೆಹ್ರುನಿಸಾ ಸಿದ್ದಿಕಿ ಅವರೊಂದಿಗೆ ಆಕೆ ಜಗಳವಾಡಿದ್ದಳು ಮತ್ತು ಈ ಮೊದಲು ವಿಚಾರಣೆಗೆ ಕರೆಯಲ್ಪಟ್ಟಿದ್ದಳು.

ಇದರ ಬಗ್ಗೆ ಮಾತನಾಡುತ್ತಾ, ಆಲಿಯಾ ಅಕಾ ಜೈನಾಬ್ "ನನ್ನನ್ನು ಅಡುಗೆಮನೆಗೆ ಹೋಗುವುದರಿಂದ ನಿಷೇಧಿಸಲಾಗಿದ್ದು ನಾನು ಲಿವಿಂಗ್​ರೂಮ್​ನ ಸೋಫಾವನ್ನೇ ಹಾಸಿಗೆಯ ಹಾಗೆ ಬಳಸುತ್ತಿದ್ದೇನೆ. ಆಹಾರ ಕಳುಹಿಸುವ ನನ್ನ ಸ್ನೇಹಿತರಿಗೆ ಒಳಗೆ ಬರಲು ಅನುಮತಿಸುತ್ತಾ ಇಲ್ಲ. ನಾನು ಹೊರಗೆ ಆಹಾರ ತೆಗೆದುಕೊಳ್ಳಲು ಹೋದರೆ ನನ್ನ ಬೆನ್ನಿನ ಹಿಂದೆ ಬಾಗಿಲು ಮುಚ್ಚಿದರೆ ಏನು ಗತಿ? ಈ ವಿಷಯದಲ್ಲಿ ಆಲಿಯಾ ತನ್ನ ವಕೀಲರ ಮೂಲಕ ಪೊಲೀಸರಿಗೆ ತನ್ನ ಹೇಳಿಕೆಯನ್ನು ವಕೀಲರ ತಲುಪಿಸಿದ್ದಾರೆ.

ಆಲಿಯಾ “ನವಾಜ್ ನನಗೆ ಒಂದು ದಶಕದಿಂದ ಗೊತ್ತು. ಅವರು ಜನಪ್ರಿಯ ತಾರೆಯಾಗಿರದಿದ್ದಾಗ ನಾನು ಅವರನ್ನು ವಿವಾಹವಾದೆ. ಹಾಗಿರುವಾಗ ಅವರ ಹೆಂಡತಿಯಾಗಿ, ನನ್ನ ಸ್ವಂತ ಮನೆಯಲ್ಲಿ ವಾಸಿಸಲು ನನಗೆ ಏಕೆ ಅವಕಾಶವಿಲ್ಲ? ಆಹಾರ ವಿತರಣಾ ಏಜೆಂಟ್‌ಗಳನ್ನೂ ಸಹ ಮನೆಯಲ್ಲಿ ಅನುಮತಿಸುತ್ತಿಲ್ಲ. ನಾನು ಮನೆಯೊಳಗೇ ಸಿಕ್ಕಿಬಿದ್ದಿದ್ದೇನೆ. ನನಗೆ ಯಾವುದೇ ಪರ್ಯಾಯ ವಸತಿ ಇಲ್ಲ. ಅದಲ್ಲದೆ, ನ್ಯಾಯಯುತವಾಗಿ ನನ್ನದೆಂದು ನಾನೇಕೆ ಬಿಡಬೇಕು?” ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ನವಾಜುದ್ದೀನ್ ಅವರು ಕಾನೂನು ಕ್ರಮ ಕೈಗೊಳ್ಳಲು ಸಜ್ಜಾಗುತ್ತಿರುವುದರಿಂದ ಆಲಿಯಾಗೆ ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net