

Navy Officer Married Just 7 Days Ago Killed In Pahalgam Terror Attack: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 30 ಜನರು ಸಾವನ್ನಪ್ಪಿದ್ದಾರೆ. ಅನೇಕ ಜನರು ಗಾಯಗೊಂಡಿದ್ದಾರೆಂದು ಎನ್ನಲಾಗಿದೆ. ಮೃತರಲ್ಲಿ ಹರಿಯಾಣದ ಕರ್ನಾಲ್‌ನ 26 ವರ್ಷದ ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಕೂಡ ಸೇರಿದ್ದಾರೆ.
26 ವರ್ಷದ ವಿನಯ್ ನರ್ವಾಲ್ ಎರಡು ವರ್ಷಗಳ ಹಿಂದೆ ನೌಕಾಪಡೆಗೆ ಸೇರಿದರು. ಕೊಚ್ಚಿಯಲ್ಲಿ ಹುದ್ದೆ ವಹಿಸಿಕೊಂಡಿರುವ ವಿನಯ್ ಅಲ್ಲಿ ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ. ವಿನಯ್ ಏಪ್ರಿಲ್ 16 ರಿಂದ ತನ್ನ ಮದುವೆಗೆ ರಜೆಯಲ್ಲಿದ್ದರು. ವಿನಯ್ ಅವರ ವಿವಾಹ ಮತ್ತು ವಿವಾಹ ಆರತಕ್ಷತೆ ಏಪ್ರಿಲ್ 19 ರಂದು ನಡೆಯಿತು. ವಿನಯ್ ನರ್ವಾಲ್ ಮದುವೆಯಾಗಿ ಕೇವಲ ಐದು ದಿನಗಳು ಕಳೆದಿವೆಯಂತೆ. ಮದುವೆಗೆ ರಜೆ ಹಾಕಿದ್ದ ವಿನಯ್, ಕಾಶ್ಮೀರದ ಸೌಂದರ್ಯವನ್ನು ನೋಡುತ್ತಾ ಹೊಸ ಜೀವನ ನಡೆಸಲು ಪತ್ನಿಯೊಂದಿಗೆ ಹೋದರು.
ವಿನಯ್ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ್ದು, ಅವರ ಕುಟುಂಬ ಸದಸ್ಯರು, ಭದ್ರತಾ ವ್ಯವಸ್ಥೆ ಮತ್ತು ಇಡೀ ಸಮುದಾಯವನ್ನು ತೀವ್ರವಾಗಿ ಆಘಾತಗೊಳಿಸಿತು. ವಿನಯ್ ಕುಟುಂಬ , ನೆರೆಹೊರೆಯವರು ಮತ್ತು ಸ್ಥಳೀಯರು ಸಂತಾಪ ಸೂಚಿಸಿದರು.
ವಿನಯ್ ನರ್ವಾಲ್ ಅವರ ಮದುವೆ 4 ದಿನಗಳ ಹಿಂದೆ ನಡೆದಿತ್ತು. ಎಲ್ಲರೂ ಸಂತೋಷವಾಗಿದ್ದರು. ಭಯೋತ್ಪಾದಕರ ದಾಳಿಯಲ್ಲಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿತು. ಇದರಿಂದಾಗಿ, ಮದುವೆ ನಡೆದ ಮನೆ ಈಗ ಶೋಕದಲ್ಲಿ ಮುಳುಗಿದೆ" ಎಂದು ವಿನಯ್ ನರ್ವಾಲ್ ಗ್ರಾಮದ ನಿವಾಸಿ ನರೇಶ್ ಬನ್ಸಾಲ್ ANI ಗೆ ತಿಳಿಸಿದ್ದಾರೆ.
ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್ ಪ್ರದೇಶದಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಭಯೋತ್ಪಾದಕ ದಾಳಿಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಜಕಾರಣಿಗಳು, ಕ್ರಿಕೆಟಿಗರು ಸೇರಿದಂತೆ ಅನೇಕ ಗಣ್ಯರು ಈ ದಾಳಿಯನ್ನು ಖಂಡಿಸಿದ್ದಾರೆ.
ದಾಳಿಕೋರರನ್ನು ಬಂಧಿಸಲು ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅನಂತ್‌ನಾಗ್‌ನ ಪಹಲ್ಗಾಮ್‌ನ ಬೈಸ್ರಾನ್ ಜನರಲ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಮತ್ತೊಂದೆಡೆ, ದೆಹಲಿ ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದೆ. ದೇಶದ ಪ್ರಮುಖ ಪ್ರವಾಸಿ ತಾಣಗಳು ಮತ್ತು ಇತರ ಪ್ರಮುಖ ಸ್ಥಳಗಳ ಮೇಲೆ ನಿಗಾ ಇಡಲು ಅವರು ಆದೇಶಿಸಿದರು.