ವಸಾಯಿ ವಿಧಾನಸಭಾ ಕ್ಷೇತ್ರಕ್ಕೆ ಎಐಸಿಸಿ ಸಂಯೋಜಕರಾಗಿ ನವೀನ್ ಡಿಸೋಜ ನೇಮಕ

naveen dsouza
Published on


ಮಂಗಳೂರು: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಾಲ್ಘರ್ ಜಿಲ್ಕೆಯ ವಸಾಯಿ ವಿಧಾನಸಭಾ ಕ್ಷೇತ್ರಕ್ಕೆ ಎಐಸಿಸಿ ಸಂಯೋಜಕರಾಗಿ ಮಂಗಳೂರು ಮಹಾ ನಗರ ಪಾಲಿಕೆಯ ಕಾರ್ಪೊರೇಟರ್ ನವೀನ್ ಡಿಸೋಜ ಅವರು ನೇಮಕಗೊಂಡಿದ್ದಾರೆ. ನವೀನ್ ಡಿಸೋಜ ಅವರು ಕೆಪಿಸಿಸಿ ಮಾಜಿ ಕಾರ್ಯದರ್ಶಿಯಾಗಿ, ಸಂಯೋಜಕರಾಗಿ, ಗೋವಾ ವಿಧಾನಸಭಾ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದು, ಮಂಗಳೂರು ಮಹಾ ನಗರ ಪಾಲಿಕೆಯ ಬೆಂದೂರು ವಾರ್ಡ್‌ನಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net