ವಿಶ್ವಕಪ್ ಪಂದ್ಯದ ಬಳಿಕ ಬಹುಕಾಲದ ಗೆಳತಿಯೊಂದಿಗೆ ಸಪ್ತಪದಿ ತುಳಿದ ಆರ್​​​ಸಿಬಿ ಮಾಜಿ ಆಟಗಾರ ನವದೀಪ್ ಸೈನಿ

cricket
Published on

ಮುಂಬೈ: ಭಾರತ ತಂಡದ ಹಲವು ಕ್ರಿಕೆಟ್ ಆಟಗಾರರು 2023ರಲ್ಲಿ ವಿವಾಹವಾಗಿದ್ದಾರೆ. ಇದೀಗ ವೇಗದ ಬೌಲರ್ ನವದೀಪ್ ಸೈನಿ ಅವರು ತಮ್ಮ ಬಹುಕಾಲದ ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೈನಿ ದೀರ್ಘಕಾಲದವರೆಗೆ ಟೀಮ್ ಇಂಡಿಯಾದ ಭಾಗವಾಗಿಲ್ಲ. ಆದರೆ ಕೌಂಟಿಯಲ್ಲಿ ಆಡುತ್ತಿರುವುದು ಕಂಡುಬಂದಿದೆ.

ಸದ್ಯ ನವದೀಪ್ ಅವರು ಮದುವೆಯ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಪೋಸ್ಟ್ ಮಾಡಿರುವ ಫೋಟೋದಲ್ಲಿ ಅವರು ತಮ್ಮ ಗೆಳತಿ ಸ್ವಾತಿ ಆಸ್ಥಾನ ಅವರೊಂದಿಗೆ ಇರುವುದನ್ನು ನೋಡಬಹುದು. 

ಪೋಸ್ಟ್‌ ಶೇರ್ ಮಾಡಿದ ನವದೀಪ್ ಸೈನಿ
ನವದೀಪ್ ಸೈನಿ ತಮ್ಮ ಮದುವೆಯ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಶೀರ್ಷಿಕೆಯನ್ನು ಸಹ ಬರೆದಿದ್ದಾರೆ. ನವದೀಪ್ ಸೈನಿ ಅವರ ಪತ್ನಿ ಸ್ವಾತಿ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ ಕೆಲವು ವರದಿಗಳ ಪ್ರಕಾರ, ಅವರು ಬ್ಲಾಗರ್ ಮತ್ತು ಯೂಟ್ಯೂಬ್ ಚಾನೆಲ್ ಅನ್ನು ಸಹ ಹೊಂದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸ್ವಾತಿ ಅವರಿಗೆ 80,000 ಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. 

ಟೀಂ ಇಂಡಿಯಾದ ವೇಗದ ಬೌಲರ್ ನವದೀಪ್ ಭಾರತ ತಂಡಕ್ಕಾಗಿ ಇದುವರೆಗೆ 2 ಟೆಸ್ಟ್, 8 ODI ಮತ್ತು 11 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ನವದೀಪ್ ಟೆಸ್ಟ್ ಮಾದರಿಯಲ್ಲಿ 4 ವಿಕೆಟ್ ಮತ್ತು ಏಕದಿನದಲ್ಲಿ 6 ವಿಕೆಟ್ ಪಡೆದಿದ್ದಾರೆ. ಪ್ರಸ್ತುತ ಸೈನಿ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸೈನಿ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net