

ಬೆಂಗಳೂರು: ಭಾರತ ತಂಡ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗ ಬೌಲರ್ ನವದೀಪ್ ಸೈನಿ, ಕಳೆದ ಆಸ್ಟ್ರೆಲಿಯಾ ಪ್ರವಾಸದಲ್ಲಿ ಮೂರು ಮಾದರಿಯಲ್ಲೂ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡುವ ಮೂಲಕ ಗಮನಸೆಳೆದಿದ್ದರು. ತಮ್ಮ ನೂತನ ಬೈಕ್ ಹಾರ್ಲೆ ಡೇವಿಡ್ಸನ್ ಬೈಕ್ ಅನ್ನು ಶರ್ಟ್ಲೆಸ್ನಲ್ಲಿ ಓಡಿಸುವ ವಿಡಿಯೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು. ಬೈಕ್ ನನ್ನ ಜತೆಯಾಗಿದೆ, ಭಯವನ್ನು ಅಸ್ವಾದಿಸಬೇಕು ಎಂದು ಬರೆದುಕೊಂಡಿದ್ದರು.
ಸೈನಿ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ನೆಟ್ಟಿಗರು ನೀವು ಬೌಲಿಂಗ್ನಲ್ಲಿ ಎಕಾನಮಿ ರೇಟ್ ಕಾಯ್ದುಕೊಂಡಿರುವಂತೆ ನಿಮ್ಮ ಬೈಕ್ನಲ್ಲೂ ಎಕಾನಮಿ ಇದೆ ಎಂದಿದ್ದಾರೆ. ನೀವೊಬ್ಬ ಎಕಾನಮಿ ಬೌಲರ್ ಎಂದು ಕೇಳಿಪಟ್ಟಿದೆ, ನಿಜವೇ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. 14ನೇ ಆವೃತ್ತಿಯಲ್ಲಿ ಆರ್ಸಿಬಿ ತಂಡದ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ಪರದಾಡುತ್ತಿದ್ದಾರೆ. ಮುಂದಿನ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಟೂರ್ನಿ ಮುಂದುವರಿಯಲಿದೆ.