

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ನವಲೂರ ಗ್ರಾಮದ ಶ್ರೀ ಬನಶಂಕರಿ ದೇವಿ ಜಾತ್ರಾ ಮಹೋತ್ಸವ ಜ. 30ರಿಂದ ಆರಂಭವಾಗಲಿದೆ. ಫೆ. 8ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ರವಿ ಬಿರ್ಜೆನವರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 30ರಂದು ಬೆಳಗ್ಗೆ ಧ್ವಜಾರೋಹಣ,ಫೆ. 1ರಂದು ರುದ್ರಾಭಿಷೇಕ, ಸಂಜೆ 7ಕ್ಕೆ ಸಂಗೀತ ಕಾರ್ಯಕ್ರಮ ಜರುಗಲಿದೆ. 2ರಂದು ಬೆಳಗ್ಗೆ ಸತ್ಯನಾರಾಯಣ ಪೂಜೆ, ಸಂಜೆ 7ಕ್ಕೆ ನೃತ್ಯ ಸ್ಪರ್ಧೆ, 3ರಂದು ಬೆಳಗ್ಗೆ 11 ಗಂಟೆಗೆ ಬನಶಂಕರಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮ, ರಾತ್ರಿ 8ಕ್ಕೆ ರಸಮಂಜರಿ ಕಾರ್ಯಕ್ರಮ ಜರುಗಲಿದೆ. 4ರಂದು ಬೆಳಗ್ಗೆ ಪೂಜಾ ವಿಽವಿಧಾನಗಳು, ಪಲ್ಲಕ್ಕಿ ಉತ್ಸವ, ಮಹಾಮಂಗಳಾರತಿ, ದೇವಿಯ ತೊಟ್ಟಿಲು ಕಾರ್ಯಕ್ರಮ, ಸಂಜೆ 5ಕ್ಕೆ ಮಹಾರಥೋತ್ಸವ ಜರುಗುವುದು. ಸಂಜೆ 7ಕ್ಕೆ ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ. ಫೆ. 8ರಂದು ಸಂಜೆ 5ಕ್ಕೆ ಕಳಸಾವರೋಹಣ ಮೂಲಕ ಜಾತ್ರಾ ಮಹೋತ್ಸವ ಸಂಪನ್ನವಾಗಲಿದೆ ಎಂದರು.
* ವಾಲಿಬಾಲ್ ಪಂದ್ಯಾವಳಿ: ಗ್ರಾಮದ ಮುಖಂಡ ಎಸ್.ಎನ್. ಘಾಟಗೆ ಮಾತನಾಡಿ, ಜಾತ್ರಾ ಮಹೋತ್ಸವದ ಅಂಗವಾಗಿ ಜ. 30 ಮತ್ತು 31ರಂದು ರಾಜ್ಯ ಮಟ್ಟದ ಆಹ್ವಾನಿತ ಪುರುಷ ಮತ್ತು ಮಹಿಳಾ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ. ತಲಾ 8 ಪುರುಷ, ಮಹಿಳಾ ತಂಡಗಳು ಭಾಗವಹಿಸಲಿವೆ ಎಂದರು.
ಗ್ರಾಮದ ಮುಖಂಸರಾದ ಸುನೀಲ ವಾಡಕರ, ರಮೇಶ ಕದಂ, ಈಶ್ವರಪ್ಪ ಹಳಕಟ್ಟಿ, ಅಶ್ವಿನ್ ಹಿರೇಗೌಡರ, ವಿ.ಎಂ. ಭಟ್, ಸುದ್ದಿಗೋಷ್ಠಿಯಲ್ಲಿದ್ದರು.