

ವಿಜಯವಾಣಿ ಸುದ್ದಿಜಾಲ ಕೋಟ
ಮನುಕುಲದ ಮೂಲವೇ ಪ್ರಕೃತಿ. ಪರಿಸರವನ್ನು ನಾವು ನಿರ್ಲಕ್ಷಿಸಿದರೆ ನಮ್ಮನ್ನು ಪರಿಸರ ನಿರ್ಲಕ್ಷಿಸುತ್ತದೆ ಎಂದು ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಕುಂದರ್ ಹೇಳಿದರು.
ಕೋಟದ ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್, ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ, ವಿಪ್ರ ಮಹಿಳಾ ಬಳಗ, ಜೆಸಿಐ ಸಿನಿಯರ್ ಲಿಜನ್, ಸಮುದ್ಯತಾ ಗ್ರೂಪ್ಸ್, ಜಯಂಟ್ಸ್ ಕ್ಲಬ್ ಸಹಯೋಗದಲ್ಲಿ ಬಾರಿಕೆರೆ ಯುವಕ ಮಂಡಲದ ಸಂಯೋಜನೆಯಲ್ಲಿ ಪರಿಸರ ಸ್ನೇಹಿ ಹಸಿರು ಜೀವ ಅಭಿಯಾನದಲ್ಲಿ ಮಾತನಾಡಿದರು.
ಹಿರಿಯರಾದ ಗಣಪರಿಗೆ ಗಿಡ ಹಸ್ತಾಂತರಿಸಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಸರಸ್ವತಿ ಪೂಜಾರಿ, ಪ್ರೇಮ ಬಾಬು, ರವಿ ಕುಂದರ್, ಕಮಲಾ ಟೀಚರ್, ಶೀನ ಬತ್ತಡ, ಕೇಶವ ಆಚಾರ್ ಕೋಟ, ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಪುಷ್ಪಾ ಕೆ. ಹಂದಟ್ಟು ಪ್ರಸ್ತಾವನೆಗೈದರು. ಅಕ್ಷತಾ ಗಣೇಶ್ ಸ್ವಾಗತಿಸಿದರು. ಮಹೇಶ್ ಬೆಳಗಾವಿ ವಂದಿಸಿದರು. ಸುಜಾತ ಬಾಯರಿ ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.