

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತ ನೀರಜ್ ಚೋಪ್ರಾ, ಭಾರತ ಮಹಿಳಾ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಹಾಗೂ ಫುಟ್‌ಬಾಲ್ ತಂಡದ ನಾಯಕ ಸುನೀಲ್ ಛೇಟ್ರಿ ಸೇರಿದಂತೆ 12 ಮಂದಿ ಕ್ರೀಡಾಪಟುಗಳಿಗೆ 2021ನೇ ಸಾಲಿನ ಪ್ರತಿಷ್ಠಿತ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ ಘೋಷಿಸಲಾಗಿದೆ. ನವೆಂಬರ್ 13 ರಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.
ರವಿ ಕುಮಾರ್ (ಕುಸ್ತಿ), ಲವ್ಲಿನಾ ಬೋರ್ಗೊಹೈನ್ (ಬಾಕ್ಸಿಂಗ್), ಪಿಆರ್.ಶ್ರೀಜೇಶ್, ಮನ್‌ಪ್ರೀತ್ ಸಿಂಗ್ (ಇಬ್ಬರೂ ಹಾಕಿ), ಅವನಿ ಲೇಖರ (ಪ್ಯಾರಾ ಶೂಟಿಂಗ್), ಸುಮೀತ್ ಅಂಟಿಲ್ (ಪ್ಯಾರಾ ಅಥ್ಲೆಟಿಕ್ಸ್), ಪ್ರಮೋದ್ ಭಗತ್, ಕೃಷ್ಣ ನಗರ್ (ಪ್ಯಾರಾ ಬ್ಯಾಡ್ಮಿಂಟನ್), ಮನೀಷ್ ನರ್ವಾಲ್‌ಗೆ (ಪ್ಯಾರಾ ಶೂಟಿಂಗ್) ಖೇಲ್ ರತ್ನ ನೀಡಲಾಗಿದೆ.
* 35 ಮಂದಿಗೆ ಅರ್ಜುನ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಬ್ಯಾಡ್ಮಿಂಟನ್‌ನಲ್ಲಿ ಪದಕ ಜಯಿಸಿದ್ದ ಐಎಎಸ್ ಅಧಿಕಾರಿ, ಕರ್ನಾಟಕದ ಸುಹಾಸ್ ಯತೀರಾಜ್ ಹಾಗೂ ಕ್ರಿಕೆಟಿಗ ಶಿಖರ್ ಧವನ್ ಸೇರಿದಂತೆ 35 ಮಂದಿಗೆ ಅರ್ಜುನ ಪ್ರಶಸ್ತಿ ೋಷಿಸಲಾಗಿದೆ. ಅರ್ಪಿಂದರ್ ಸಿಂಗ್ (ಅಥ್ಲೆಟಿಕ್ಸ್), ಸಿಮ್ರಾಜಿತ್ ಕೌರ್ (ಬಾಕ್ಸಿಂಗ್), ಭವಾನಿ ದೇವಿ (ೆನ್ಸಿಂಗ್), ಸಂದೀಪ್ ನರ್ವಾಲ್ (ಕಬಡ್ಡಿ), ಹಿಮಾನಿ ಉತ್ತಮ ಪರಬ್ (ಮಲ್ಲಕಂಬ), ಅಭಿಷೇಕ್ ವರ್ಮ (ಶೂಟಿಂಗ್), ಅಂಕಿತಾ ರೈನಾ (ಟೆನಿಸ್), ದೀಪಕ್ ಪೂನಿಯಾ (ಕುಸ್ತಿ), ಮೋನಿಕಾ, ವಂದನಾ ಕಟಾರಿಯಾ, ದಿಲ್‌ಪ್ರೀತ್ ಸಿಂಗ್,ಹರ್ಮಾನ್ ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಸುರೇಂದರ್ ಕುಮಾರ್, ಅಮಿತ್ ರೋಹಿದಾಸ್, ಬೀರೇಂದ್ರ ಲಾಕ್ರ, ಸುಮಿತ್, ನೀಲಕಂಡ ಶರ್ಮ, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್, ಗುರ್ಜಂತ್ ಸಿಂಗ್, ಶಂಷೀರ್ ಸಿಂಗ್, ಲಲಿತ್ ಕುಮಾರ್ ಉಪಾದ್ಯಯ, ವರುಣ್ ಕುಮಾರ್, ಸಿಮ್ರಾನ್‌ಜಿತ್ ಸಿಂಗ್ (ಎಲ್ಲರೂ ಹಾಕಿ), ಯೋಗೇಶ್ ಕತುನಿಯಾ, ನಿಶಾದ್ ಕುಮಾರ್, ಪ್ರವೀಣ್ ಕುಮಾರ್, ಶರದ್ ಕುಮಾರ್, (ಪ್ಯಾರಾಥ್ಲೀಟ್), ಸುಹಾಸ್ ಯತೀರಾಜ್ (ಪ್ಯಾರಾಬ್ಯಾಡ್ಮಿಂಟನ್), ಸಿಂಗರಾಜ್ ಆಧನಾ (ಪ್ಯಾರಾ ಶೂಟಿಂಗ್), ಭವಿನಾ ಪಟೇಲ್ (ಪ್ಯಾರಾ ಟೇಬಲ್ ಟೆನಿಸ್), ಹರ್ವೀಂದರ್ ಸಿಂಗ್ (ಪ್ಯಾರಾ ಆರ್ಚರಿ).