ಶಿರ್ವ: ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜು ಶಿವಮೊಗ್ಗದಲ್ಲಿ ನಡೆದ ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ತಾಂತ್ರಿಕ ವಿಚಾರ ಸಂಕಿರಣ ಪ್ಲಾಸ್ಮಾ 2ಕೆ24ರಲ್ಲಿ ಭಾಗವಹಿಸಿ ಕೋಡ್-ಸ್ಪಿರಿಟ್ ಹ್ಯಾಕಥಾನ್‌ನಲ್ಲಿ ಬಹುಮಾನ ಪಡೆದಿದ್ದಾರೆ.
ಕೋಡ್-ಸ್ಪಿರಿಟ್ ಹ್ಯಾಕಥಾನ್‌ನ ಮೊದಲ ಹಂತದ ಸತತ ಏಳು ಗಂಟೆಗಳ ಸ್ಪರ್ಧೆಯಲ್ಲಿ ರಾಷ್ಟ್ರಾದ್ಯಂತ ಒಟ್ಟು 72 ತಂಡಗಳು ಭಾಗವಹಿಸಿದ್ದು, ಅಂತಿಮ ಸುತ್ತಿಗೆ 16 ತಂಡ ಆಯ್ಕೆಯಾಗಿದೆ. ವಿದ್ಯಾಸಂಸ್ಥೆಯ ತಂಡದಲ್ಲಿ ದ್ವಿತೀಯ ವರ್ಷದ ಗಣಕಯಂತ್ರ ವಿಭಾಗದ ವಿದ್ಯಾರ್ಥಿ ತೇಜಸ್ ನಾಯಕ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡೇಟಾ ಸೇನ್ಸ್ ವಿಭಾಗದ ಭೂಷಣ್ ಪೂಜಾರಿ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್ ವಿಭಾಗದ ಪೂರ್ಣಾನಂದ ಮತ್ತು ಶಿವಂ ಶೆಟ್ಟಿ ಭಾಗವಹಿಸಿದ್ದು ಪ್ರಥಮ ಸ್ಥಾನಗಳಿಸಿದೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಮತ್ತು ಸಹ ಪಠ್ಯೇತರ ಚಟುವಟಿಕೆ ಸಂಯೋಜಕರು ಅಭಿನಂದಿಸಿದ್ದಾರೆ.