

ಮಂಗಳೂರು: ಒರಿಸ್ಸಾ ರಾಜ್ಯದ ಬೆರಹಂಪುರದಲ್ಲಿ ನಡೆದ ಅಸ್ಮಿತಾ ಖೇಲೋ ಇಂಡಿಯಾ ಮಹಿಳೆಯರ ರಾಷ್ಟ್ರೀಯ ಜೂನಿಯರ್ ವೆಯ್ಟ ಲಿಫ್ಟಿಂಗ್ ಸ್ಪರ್ಧೆಯ 81ಕೆ ಜಿ ವಿಭಾಗದಲ್ಲಿ ಮಂಗಳೂರಿನ ರಥ ಬೀದಿಯ ಡಾ. ಪಿ ದಯಾನಂದ ಪೈ -ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿ ಎ ವಿದ್ಯಾರ್ಥಿನಿ ರಶ್ಮಿತಾ ಆಚಾರ್ಯ ಅವರು ಚಿನ್ನದ ಪದಕ ಪಡೆದಿದ್ದಾರೆ. ಮೈಸೂರಿನಲ್ಲಿ ನಡೆದ ಸಿಎಂ ಕಪ್ ದಸರಾ ವೆಯ್ಟ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದಿರುವ ಇವರು ಮಂಗಳೂರಿನ ಆಕಾಶ ಭವನದ ದಿ. ಪ್ರಭಾಕರ ಆಚಾರ್ಯ ಮತ್ತು ರೂಪ ಆಚಾರ್ಯ ಅವರ ಪುತ್ರಿ. ಕೆನರಾ ಬ್ಯಾಂಕಿನ ನಿವೃತ್ತ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಕಾಮವೆಲ್ತ್ ಚಿನ್ನದ ಪದಕ ವಿಜೇತ ಮತ್ತು ಏಕಲವ್ಯ ಪ್ರಶಸ್ತಿ ವಿಜೇತ ಪುಷ್ಪರಾಜ ಹೆಗಡೆ ಅವರಿಂದ ತರಬೇತಿ ಮತ್ತು ಮಾರ್ಗದರ್ಶನ ಪಡೆಯುತ್ತಿದ್ದಾರೆ.