ಸಿನಿಪ್ರೇಮಿಗಳಿಗೆ ಬಂಪರ್ ಆಫರ್: ರಾಷ್ಟ್ರೀಯ ಸಿನಿಮಾ ದಿನ 99ಕ್ಕೆ ಸಿನಿಮಾ ನೋಡುವ ಅವಕಾಶ

ಬೆಂಗಳೂರು: ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಎಂಎಐ) ವತಿಯಿಂದ ಕಳೆದ ಮೂರು ವರ್ಷಗಳಿಂದ ರಾಷ್ಟ್ರೀಯ ಸಿನಿಮಾ ದಿನ ಆಚರಿಸಲಾಗುತ್ತಿದೆ. ಈ ವರ್ಷ ಕಳೆದ ಮಾ.30ರಂದು ರಾಷ್ಟ್ರೀಯ ಸಿನಿಮಾ ದಿನ ಆಚರಿಸಲಾಗಿತ್ತು. ಅದಾಗಿ ಆರು ತಿಂಗಳ ಬಳಿಕ ಮತ್ತೆ ನ್ಯಾಷನಲ್ ಸಿನಿಮಾ ಡೇ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ದೇಶಾದ್ಯಂತ 4000 ಮಲ್ಟಿಪ್ಲೆಕ್ಸ್‌ಗಳಲ್ಲಿ ಕೇವಲ 99 ರೂಪಾಯಿಗೆ ಸಿನಿಮಾ ವೀಕ್ಷಿಸಲು ಅವಕಾಶ ನೀಡಲಾಗಿದೆ.

ಆಚರಣೆ ಹಿನ್ನೆಲೆ: ಮೂರು ವರ್ಷಗಳ ಹಿಂದೆ ಕರೊನಾ ಸೃಷ್ಟಿಸಿದ್ದ ಅವಾಂತರದಿಂದಾಗಿ ದೇಶಾದ್ಯಂತ ಥಿಯೇಟರ್‌ಗಳು, ಮಲ್ಟಿಪ್ಲೆಕ್ಸ್‌ಗಳು ಬಂದ್ ಆಗಿದ್ದವು. ಕರೊನಾ ನಂತರವೂ ಪ್ರೇಕ್ಷಕರು ಥಿಯೇಟರ್‌ಗೆ ಬರಲು ಹಿಂದೇಟು ಹಾಕುತ್ತಿದ್ದರು. ಜತೆಗೆ ಒಟಿಟಿ ಹಾವಳಿ, ಪ್ರೇಕ್ಷಕರು ಮತ್ತು ಸಿನಿಮಾಗಳ ನಡುವೆ ಮತ್ತಷ್ಟು ಅಂತರ ಸೃಷ್ಟಿಸಿತ್ತು. ಹೀಗಾಗಿ ಭಾರತೀಯ ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಪ್ರೇಕ್ಷಕರನ್ನು ಮತ್ತೆ ಸಿನಿಮಾ ಮಂದಿರಕ್ಕೆ ಕರೆತರಲು 2022ರ ಸೆ. 22ರಂದು ‘ರಾಷ್ಟ್ರೀಯ ಸಿನಿಮಾ ದಿನ’ ಆಚರಣೆಗೆ ನಾಂದಿ ಹಾಡಿತು. ನೆಚ್ಚಿನ ಸಿನಿಮಾ ವೀಕ್ಷಿಸಲು ಕೇವಲ ₹75 ದರ ನಿಗದಿಪಡಿಸಲಾಗಿತ್ತು. ಮೊದಲ ವರ್ಷವೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ 2023ರಲ್ಲಿ ಅ. 13ರಂದು ಎರಡನೇ ವರ್ಷದ ಆಚರಣೆ ನಡೆಸಲಾಯಿತು. ಪ್ರಸ್ತುತ ಇದು ಮೂರನೇ ವರ್ಷದ ಆಚರಣೆ.

ಆಫರ್ ಎಲ್ಲೆಲ್ಲಿ?: ದೇಶಾದ್ಯಂತ ಪಿವಿಆರ್ ಐನಾಕ್ಸ್, ಸಿನಿಪೊಲಿಸ್, ಮಿರಾಜ್, ಮೂವೀ ಟೈಮ್, ಸಿಟಿಪ್ರೈಡ್, ಏಷಿಯನ್, ಮುಕ್ತ ಎ2, ವೇವ್, ಡಿಲೈಟ್ ಸೇರಿ 4000ಕ್ಕೂ ಅಧಿಕ ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಿವೆ. ಬಹುತೇಕ ಎಲ್ಲ ಸ್ಕ್ರೀನ್‌ಗಳಲ್ಲೂ ಈ ಆರ್ ಲಭ್ಯವಿದೆ. ಆದರೆ, 3ಡಿ ಅಥವಾ ಪ್ರೀಮಿಯಂ, ಗೋಲ್ಡ್ ಕ್ಲಾಸ್ ಮತ್ತು ರಿಕ್ಲೈನರ್ ಸೀಟ್‌ಗಳಿಗೆ ಈ ಆರ್ ಇರುವುದಿಲ್ಲ.

ಕನ್ನಡ ಸಿನಿಮಾಗಳಿಗೆ ಹಬ್ಬ: ರಾಷ್ಟ್ರೀಯ ಸಿನಿಮಾ ದಿನದ ಅಂಗವಾಗಿ ರಾಜ್ಯದ ವಿವಿಧ ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಸಿನಿಮಾಗಳಿಗೆ ಹಬ್ಬವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಕನ್ನಡದ ‘ಕೃಷ್ಣ ಪ್ರಣಯ ಸಖಿ’, ‘ಇಬ್ಬನಿ ತಬ್ಬಿದ ಇಳೆಯಲಿ’, ‘ರಾನಿ’, ‘ಕಾಲಾಪತ್ಥರ್’, ‘ಲಾಫಿಂಗ್ ಬುದ್ಧ’ ಚಿತ್ರಗಳು ಈ ಆರ್‌ನಲ್ಲಿ ಬರಲಿವೆ. ಅಲ್ಲದೇ ಈ ವಾರ ತೆರೆ ಕಾಣಲಿರುವ ‘ಧ್ರುವತಾರೆ’, ‘ಕರ್ಕಿ’, ‘ಹಗ್ಗ’, ‘ರಮ್ಮಿ ಆಟ’ ಚಿತ್ರತಂಡಗಳು ಈ ವಿಶೇಷ ಆರ್‌ನಿಂದ ಹೆಚ್ಚಿನ ಪ್ರೇಕ್ಷಕರನ್ನು ನಿರೀಕ್ಷಿಸುತ್ತಿವೆ. ಕೆಲ ತಿಂಗಳಿನಿಂದ ಪ್ರೇಕ್ಷಕರ ಬರ ಎದುರಿಸುತ್ತಿರುವ ಮಲ್ಟಿಪ್ಲೆಕ್ಸ್‌ಗಳು, ಇಂತಹ ವಿಶೇಷ ಆರ್‌ನಿಂದ ಮತ್ತೆ ಹೌಸ್‌ುಲ್ ಆಗಬಹುದು ನಿರೀಕ್ಷೆಯಲ್ಲಿವೆ.

Share This Article

ಗಂಟಲಲ್ಲಿ ಮೀನಿನ ಮುಳ್ಳು ಸಿಲುಕಿಕೊಂಡ್ರೆ ಏನು ಮಾಡ್ಬೇಕು? ಇಲ್ಲಿದೆ ನೋಡಿ ಸಿಂಪಲ್​ ಟಿಪ್ಸ್​ | Fish

ಮೀನು ( Fish ) ಗಳು ಅನೇಕ ಜನರ ನೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಮೀನು ಆರೋಗ್ಯಕ್ಕೆ…

ಒಂದು ಕೈಯಲ್ಲಿ ಫೋನ್ ಹಿಡಿದುಕೊಂಡು ಸ್ಕ್ರೋಲಿಂಗ್ ಮಾಡ್ತೀರಾ?  ಇದ್ರಿಂದಲೇ ಗೊತ್ತಾಗುತ್ತದೆ ನಿಮ್ಮ Personality traits…

ಬೆಂಗಳೂರು:  ಈಗ  ಕೆಲವು ಅಧ್ಯಯನಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು (Personality traits ) ಹುಟ್ಟಿದ ದಿನಾಂಕ, ಕಣ್ಣಿನ…

Salt Water : ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚನೆಯ ನೀರಿನಲ್ಲಿ ಉಪ್ಪು ಹಾಕಿ ಕುಡಿದರೆ ಏನಾಗುತ್ತೆ ಗೊತ್ತಾ?

ಬೆಂಗಳೂರು: ನಾವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದು ತುಂಬಾ…