National Best Friends Day 2023: ನಿಜವಾದ ಸ್ನೇಹಿತ ಯಾರು?

friends (1)
Published on

ನವದೆಹಲಿ: ವೇಗವಾಗಿ ಓಡುತ್ತಿರುವ ಜಗತ್ತಿನಲ್ಲಿ ಸುಖ-ದುಃಖಗಳಲ್ಲಿ ನಿಮ್ಮ ಜತೆಯಾಗಿ ನಿಲ್ಲುವವನೇ ಸ್ನೇಹಿತ. ನಿಜವಾದ ಮತ್ತು ಒಳ್ಳೆಯ ಸ್ನೇಹಿತರನ್ನು ಹೊಂದಿರುವ ವ್ಯಕ್ತಿಯು ಈ ಭೂಮಿಯ ಮೇಲಿನ ಅದೃಷ್ಟವಂತ ವ್ಯಕ್ತಿಗಳಲ್ಲಿ ಒಬ್ಬರು ಎಂದು ಹೇಳಲಾಗುತ್ತದೆ. ಅಂತಹ ಸ್ನೇಹಿತರ ದಿನವೇ ಇಂದು.

ರಾಷ್ಟ್ರೀಯ ಬೆಸ್ಟ್ ಫ್ರೆಂಡ್ಸ್ ಡೇ ಜೂನ್ 8. ಈ ದಿನದ ದಿನಾಂಕ ಮತ್ತು ಪ್ರಾಮುಖ್ಯತೆ ಮತ್ತು ಅದನ್ನು ನಿಮ್ಮ ಸ್ನೇಹಿತರ ಜೊತೆ ಆಚರಿಸುವ ವಿಧಾನಗಳ ನೋಟ ಇಲ್ಲಿದೆ.

ಉತ್ತಮ ಸ್ನೇಹಿತರು ನಮ್ಮ ಕುಟುಂಬದ ಸದಸ್ಯರಂತೆ ಕಷ್ಟ-ಸುಖಃಕ್ಕೆ ಜತೆಯಾಗಿ ನಿಲ್ಲುತ್ತಾರೆ. ಹತ್ತಿರವಿರಲಿ ಅಥವಾ ದೂರವಿರಲಿ ನಮ್ಮ ಕಷ್ಟದಲ್ಲಿ ಅಳಲು ನಮಗೆ ಭುಜವನ್ನು ನೀಡುತ್ತಾರೆ, ನಮ್ಮ ಸಂತೋಷದ ಕ್ಷಣಗಳನ್ನು ಅವರಂತೆಯೇ ಸಂಭ್ರಮದಿಂದ ಆಚರಿಸುತ್ತಾರೆ. ಪ್ರಪಂಚದಾದ್ಯಂತ ಜನರು ತಮ್ಮ ಉತ್ತಮ ಸ್ನೇಹಿತರನ್ನು ಆಚರಿಸಲು ಹಲವು ಮಾರ್ಗಗಳಿವೆ. ಪ್ರತಿಯೊಂದು ಸಂಸ್ಕೃತಿಯು ನಮ್ಮ ಜೀವನದಲ್ಲಿ ಅವರ ಪ್ರಾಮುಖ್ಯತೆಯನ್ನು ಆಚರಿಸುತ್ತದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಜೂನ್ 8 ಅನ್ನು ರಾಷ್ಟ್ರೀಯ ಉತ್ತಮ ಸ್ನೇಹಿತರ ದಿನವೆಂದು ಗುರುತಿಸಲಾಗಿದೆ. 

ಈ ದಿನವನ್ನು 1935, ಜೂನ್ 8 ರಂದು ಮೊದಲ ಬಾರಿಗೆ ಜಾರಿಗೆ ತರಲಾಯಿತು. ಅಂದಿನಿಂದ ಪ್ರತಿ ವರ್ಷ ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನವನ್ನು ಆಚರಿಸಲಾಗುತ್ತಿದೆ. ಕಾಲಾನಂತರದಲ್ಲಿ, ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನವು ಅನೇಕ ದೇಶಗಳಲ್ಲಿ ಆಚರಣೆಗೆ ಬಂದಿದೆ.

ರಾಷ್ಟ್ರೀಯ ಉತ್ತಮ ಸ್ನೇಹಿತರ ದಿನದ ಇತಿಹಾಸ:

ನಿಜವಾದ ಸ್ನೇಹಿತ ಯಾರು?: ಸ್ನೇಹದಲ್ಲಿ ಇನ್ನೊಬ್ಬರನ್ನು ಬಳಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಇಲ್ಲಿ ಮತ್ತೊಬ್ಬರನ್ನು ಬಳಸಿಕೊಳ್ಳುವ ಅವಶ್ಯಕತೆಯ ಪ್ರಶ್ನೆಯೇ ಏಳುವುದಿಲ್ಲ. ಯಶಸ್ಸನ್ನು ನೀವು ಪಡೆದಾಗ ನಿಮಗಿಂತ ಹೆಚ್ಚಾಗಿ ನಿಮ್ಮ ಸ್ನೇಹಿತರು ಸಂಭ್ರಮಿಸಿದರೆ ಅವರೇ ನಿಜವಾದ ಸ್ನೇಹಿತರು. ಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಲುವವರೇ ನಿಜವಾದ ಸ್ನೇಹಿತ. ಸಮಯದಲ್ಲಿಯೂ ನಿಮ್ಮನ್ನು ಬಿಟ್ಟು ಹೋಗದವನೇ ಸದಾ ಜೊತೆಗೆ ಇರುವವರು ನಿಜವಾದ ಸ್ನೇಹಿತ. ಒಬ್ಬ ವ್ಯಕ್ತಿಯ ಜೀವನವನ್ನು ಯಶಸ್ವಿಗೊಳಿಸಲು ನಿಜವಾದ ಸ್ನೇಹಿತರು.

ಸ್ನೇಹಿತರ ದಿನದ ಮಹತ್ವ : ಸ್ನೇಹಿತ/ಸ್ನೇಹಿತೆಗೆ ಇಷ್ಟವಾಗುವ ಒಂದು ಚೆಂದದ ಉಡುಗೊರೆ ನೀಡಿ. ಮನಸ್ಸಿನಲ್ಲಿರುವ ಭಾವನೆಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳಿ. ನಿಮ್ಮ ನೆಚ್ಚಿನ ಸ್ನೇಹಿತರೊಂದಿಗೆ ಕಾಲ ಕಳೆಯಿರಿ. ನಿಮ್ಮ ಸ್ನೇಹಿತರೊಂದಿಗೆ ಸಂತೋಷವಾಗಿರಿ.

ರಾಷ್ಟ್ರೀಯ ಉತ್ತಮ ಸ್ನೇಹಿತರ ದಿನ 2023 ಆಚರಣೆಗಳು: ರಾಷ್ಟ್ರೀಯ ಉತ್ತಮ ಸ್ನೇಹಿತರ ದಿನವನ್ನು ಆಚರಿಸಲು ಯಾವುದೇ ಸಾಂಪ್ರದಾಯಿಕ ವಿಧಾನಗಳಿಲ್ಲ. ಈ ದಿನದಂದು ವಿಶೇಷವಾಗಿ ಸ್ನೇಹಿತರಿಗೆ ಶುಭಾಶಯ ಕೋರುವ ಮೂಲಕ ವಿವಿಧ ರೀತಿಯಲ್ಲಿ ಆಚರಿಸಿಕೊಳ್ಳಲಾಗುತ್ತದೆ. ಕೆಲವರು ಪ್ರವಾಸ ಹೋಗುತ್ತಾರೆ. ಇನ್ನು ಕೆಲವರು ಪಾರ್ಟಿ ಮಾಡುತ್ತಾರೆ. ಹೀಗೆ ಅವರಿಗೆ ಇಷ್ಟವಾಗುವಂತ ರೀತಿಯಲ್ಲಿ ಈ ದಿನವನ್ನು ಆಚರಿಸಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net