

ಮಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಉನ್ನತ ಸೇವೆಗಾಗಿ ನಾಲ್ವರು ಶಿಕ್ಷಕರಿಗೆ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ವತಿಯಿಂದ ‘ನೇಷನ್ ಬಿಲ್ಡರ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಬಲ್ಮಠ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಗದೀಶ್ ಬಾಳ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜೋಯ್ಸ ಹೆನ್ರಿಟಾ, ಉರುಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಗೀತಾ ಬಿ., ಹಾಗೂ ಭಾರತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವಿನಯ ಕುಮಾರಿ ವೈ ಇವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಶಿಕ್ಷಕರು ರೋಟರಿ ಸಂಸ್ಥೆಯ ಸಾಮಾಜಿಕ ಸೇವೆಯು ಶ್ಲಾಘನೀಯ, ತಮ್ಮನ್ನು ಗುರುತಿಸಿ ಸನ್ಮಾನಿಸಿರುವುದು ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚಿನ ಸೇವೆಯನ್ನು ಮಾಡಲು ಪ್ರೇರಣೆ ಯಾಗಿದೆ ಎಂದರು. ಸನ್ಮಾನಿತರನ್ನು ರೋಟರಿ ಮಾಜಿ ಗವರ್ನರ್ ಡಾ.ದೇವದಾಸ ರೈ, ಕೋಶಾಧಿಕಾರಿ ರಾಜೇಶ್ ಸೀತಾರಾಂ ಹಾಗೂ ಗೀತಾ ಬಿ. ರೈ ಪರಿಚಯಿಸಿದರು.
ಕಾರ್ಯದರ್ಶಿ ವಿಕಾಸ್ ಕೋಟ್ಯಾನ್,ವಲಯ ಸೇನಾನಿ ರವಿ ಜಲನ್, ಮಾಜಿ ಅಸಿಸ್ಟೆಂಟ್ ಗವರ್ನರ್‌ಗಳಾದ ರಾಜಗೋಪಾಲ್ ರೈ, ಕೆ. ಯಂ . ಹೆಗ್ಡೆ, ಸ್ಥಾಪಕ ಅಧ್ಯಕ್ಷ ಪ್ರೇಮನಾಥ ಕುಡ್ವ, ಸ್ಥಾಪಕ ಸದಸ್ಯ ಸತೀಶ್ ಪೈ, ಮಾಜಿ ಅಧ್ಯಕ್ಷರುಗಳಾದ ಬ್ರಾಯನ್ ಪಿಂಟೊ, ಸಾಯಿಬಾಬಾ ರಾವ್, ರಾಜೇಶ್ ಶೆಟ್ಟಿ ಉಪಾಧ್ಯಕ್ಷ ರಾಮದಾಸ್, ಸದಸ್ಯರುಗಳಾದ ಮಹೇಶ್ ಪಾಂಡ್ಯ, ಸಿ. ಎ. ಎಸ್.ಎಸ್. ನಾಯಕ್, ಮಂಜುನಾಥ್ ರೇವಣ್ಕರ್, ಪ್ರಮೀಳಾ ಹೆಗ್ಡೆ, ನೀಲಂ ಜಲನ್, ಆರತಿ ಶೆಟ್, ಪೂರ್ಣಿಮಾ ರೈ, ಮಂಗಳೂರು ವಿಶ್ವ ವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯರುಗಳಾದ ಹರೀಶ್ ಆಚಾರ್ಯ ಹಾಗೂ ರಮೇಶ್ ಮೊದಲಾದವರು ಉಪಸ್ಥಿತರಿದ್ದರು.