ಎಸ್‌ಎನ್‌ಡಿಪಿ ಯೋಗಂನಿಂದ ಜಯಂತ್ಯುತ್ಸವ

New Project (20)
Published on

ಕಾಸರಗೋಡು: ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ಕಾಸರಗೋಡು ಕೂಡ್ಲು ಶಾಖೆ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಆಯೋಜಿಸಲಾಯಿತು.

ಭಗವತಿ ಸೇವಾ ಸಂಘ ಮಾಜಿ ಅಧ್ಯಕ್ಷ ಕೃಷ್ಣನ್ ಕೂಡ್ಲು ಉದ್ಘಾಟಿಸಿದರು. ಸ್ವಾಗತ ಸಂಘ ಅಧ್ಯಕ್ಷೆ, ಮಧೂರು ಗ್ರಾಪಂ ಸದಸ್ಯೆ ಜನನಿ ಅನಿಲ್ ಅಧ್ಯಕ್ಷತೆ ವಹಿಸಿದ್ದರು.

ಮಧೂರು ಗ್ರಾಪಂ ಅಧ್ಯಕ್ಷ ಕೆ.ಗೋಪಾಲಕೃಷ್ಣ ಭಾಗವಹಿಸಿದ್ದರು. ಎಸ್‌ಡಿಪಿ ಯೋಗಂ ನಿರ್ದೇಶಕ ವಕೀಲ ಪಿ.ಕೆ.ವಿಜಯನ್, ವಡಗರ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಹಾಯಕ ವ್ಯವಸ್ಥಾಪಕಿ ಸಿ.ಎಚ್.ಆದಿರಾ ಕೂಡ್ಲು, ಒಕ್ಕೂಟ ಕಾರ್ಯದರ್ಶಿ ಗಣೇಶ ಪಾರಕಟ್ಟ, ಯೂನಿಯನ್ ಪಂಚಾಯಿತಿ ಸದಸ್ಯ ಮೋಹನನ್ ಮೀಪುಗುರಿ, ಭಗವತಿ ಸೇವಾ ಸಂಘ ಕೂಡ್ಲು ಗ್ರಾಮ ಸಮಿತಿ ಕಾರ್ಯದರ್ಶಿ ಕೆ.ಅನಿಲ್ ಕುಮಾರ್, ಭಗವತಿ ಮಹಿಳಾ ಸಂಘ ಅಧ್ಯಕ್ಷೆ ಶೈಲಜಾ ರಾಜಗೋಪಾಲ್ ಮೊದಲಾದವರಿದ್ದರು. ಎಸ್‌ಎನ್‌ಡಿಪಿ ಕೂಡ್ಲು ಶಾಖೆ ಕಾರ್ಯದರ್ಶಿ ವಿಜಯನ್ ಸ್ವಾಗತಿಸಿದರು. ರಮಣಿ ಗಿರೀಶ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net