ಗುರುವಿನಿಂದ ಸಾಮಾಜಿಕ ಪುನರುತ್ಥಾನ : ಎಂ.ಕೆ ಕುಕ್ಕಾಜೆ ಅನಿಸಿಕೆ

sanmana
ಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಹಿರಿಯ ನಾಟಿವೈದ್ಯೆ ಪೊನ್ನಪ್ಪೆ ಖಂಡಿಗೆ ಅವರನ್ನು ಸನ್ಮಾನಿಸಲಾಯಿತು. ಎಂ.ಕೆ ಕುಕ್ಕಾಜೆ, ಬಿ.ಪಿ.ಶೇಣಿ, ಸುನಿತ್ ಕುಮಾರ್ ಡಿ. ಮೊದಲಾದವರು ಉಪಸ್ಥಿತರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ಪಾಲನೆಯಿಂದ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಲು ಸಾಧ್ಯ ಎಂಬುದಾಗಿ ಸಾಹಿತಿ ಎಂ.ಕೆ.ಕುಕ್ಕಾಜೆ ಹೇಳಿದರು.

ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಪೆರ್ಲ ಘಟಕ ವತಿಯಿಂದ ಮಂಗಳವಾರ ಪೆರ್ಲ ವ್ಯಾಪಾರಿ ಭವನದಲ್ಲಿ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿ, ಶುದ್ಧ ಮನಸ್ಸಿನ ಪೂಜೆಯಿಂದ ದೇವರು ಸಂಪ್ರೀತನಾಗುತ್ತಾನೆ ಎಂಬುದಕ್ಕೆ ನಾರಾಯಣ ಗುರು ನಿದರ್ಶನ. ಕೇರಳ, ಕರ್ನಾಟಕದಲ್ಲಿ 70ಕ್ಕೂ ಹೆಚ್ಚು ದೇಗುಲಗಳನ್ನು ಸ್ವತಹ ಪ್ರತಿಷ್ಠಾಪಿಸುವ ಮೂಲಕ ಸಾಮಾಜಿಕ ಪುನರುತ್ಥಾನ ಸಾಧಿಸಿದ್ದಾರೆ ಎಂದರು.

ಅಧ್ಯಕ್ಷ ಬಿ.ಪಿ.ಶೇಣಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಡಿ.ಸುನಿತ್ ಕುಮಾರ್, ಎಣ್ಮಕಜೆ ಗ್ರಾಪಂ ಸದಸ್ಯ ನರಸಿಂಹ ಪೂಜಾರಿ ವಾಣೀನಗರ, ಬಿಲ್ಲವ ಸೇವಾ ಸಂಘ ಮಹಿಳಾ ಘಟಕ ಅಧ್ಯಕ್ಷೆ ರುಕ್ಮಿಣಿ ಉಪಸ್ಥಿತರಿದ್ದರು.

ಹಿರಿಯ ನಾಟಿ ವೈದ್ಯೆ ಪೊನ್ನಪ್ಪೆ ಖಂಡಿಗೆ, ಯಶಸ್ವಿ ಮಹಿಳಾ ಉದ್ಯಮಿ ಯಶೋದಾ ಕಾನ ಅವರನ್ನು ಸನ್ಮಾನಿಸಲಾಯಿತು. 2023ನೇ ಸಾಲಿನ ಎಸ್ಸೆಸ್ಸೆಲ್ಸಿ, ಪ್ಲಸ್‌ಟು ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು, ಕ್ರೀಡೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು.

ಸಂಘದ ಕೋಶಾಧಿಕಾರಿ ಪದ್ಮನಾಭ ಸುವರ್ಣ ಸ್ವಾಗತಿಸಿದರು. ನಾರಾಯಣ ಪೂಜಾರಿ ಮಾಸ್ಟರ್ ನಿರೂಪಿಸಿದರು. ಕಾರ್ಯದರ್ಶಿ ಅಖಿಲೇಶ್ ಕಾನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net