

ಸುಬ್ರಹ್ಮಣ್ಯ: ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಮ್ನ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ನೃಸಿಂಹ ಜಯಂತಿ ಅಂಗವಾಗಿ ಶ್ರೀ ಮಠದ ಅನಿರುದ್ಧತೀರ್ಥ ವೇದಿಕೆಯಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಖ್ಯಾತಿಯ ಬಾಲ ಕಲಾವಿದೆ ಗಂಗಾ ಶಶೀಧರನ್ ಗುರುವಾಯೂರು ಅವರಿಂದ ವಯಲೀನ್ ವಾದನ ನೆರವೇರಿತು. ವಿಜೀತ್ ಸೌಂಡ್ಸ್ನ ವಿಜೀತ್ ಶೆಟ್ಟಿ ಮರ್ದಾಳ ಧ್ವನಿವರ್ಧಕ ವ್ಯವಸ್ಥೆ ಮಾಡಿದ್ದರು.
ತವಿಲ್ನಲ್ಲಿ ತ್ರಿಪುಣಿತ್ತುರ ಶ್ರೀಕುಮಾರ್, ಘಟಂನಲ್ಲಿ ವಾಂಜೂರು ಉನ್ನಿಕೃಷ್ಣನ್, ಕೀಬೋರ್ಡ್ನಲ್ಲಿ ಚೇರ್ತಲ ಉನ್ನಿಕೃಷ್ಣನ್, ರಿದಂ ಪ್ಯಾಡ್ ವೈಕಂ ವಿಜಯ ಕುಮಾರ್ ಹಿಮ್ಮೇಳ ಸಹಕಾರ ನೀಡಿದರು.
ಬಾಲ ಕಲಾವಿದೆ ಗಂಗಾಶಶಿಧರನ್ ಸೇರಿದಂತೆ ಹಿಮ್ಮೇಳ ಕಲಾವಿದರನ್ನು, ಗಂಗಾ ಅವರ ತಂದೆ ಶಶಿಧರನ್, ಧ್ವನಿವರ್ಧಕ ಸಂಯೋಜಿಸಿದ ವಿಜೀತ್ ಶೆಟ್ಟಿ ಮರ್ಧಾಳ ಅವರನ್ನು ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಗೌರವಿಸಿದರು. ಮಠದ ದಿವಾನ ಸುದರ್ಶನ ಜೋಯಿಸ, ಕಲಾವಿದ ಕೆ.ಯಜ್ಞೇಶ್ ಆಚಾರ್, ಕಾರ್ಯಕ್ರಮ ಸಂಯೋಜಕ ಕೆ.ಎಂ.ಗೋಪಿನಾಥ್ ನಂಬೀಶ ಮತ್ತಿತರರಿದ್ದರು.