More

    ಹೊಸ ವರ್ಷಕ್ಕೆ ಸೆಟ್ಟೇರಿತು ನಾನಿ ಅಭಿನಯದ 30ನೇ ಚಿತ್ರ … ಇದು ಅಪ್ಪ-ಮಗಳ ಬಾಂಧವ್ಯದ ಕಥೆ

    ಹೈದರಾಬಾದ್​: ಒಂದು ಕಡೆ ಹೊಸ ವರ್ಷದ ದಿನ ಬೇರೆ ಸ್ಟಾರ್​ಗಳ ಚಿತ್ರಗಳ ಟೀಸರ್​, ಪೋಸ್ಟರ್​ಗಳು ಬಿಡುಗಡೆಯಾಗಿದ್ದರೆ, ಇನ್ನೊಂದು ಕಡೆ ತೆಲುಗು ನಟ ನಾನಿ ಅಭಿನಯದ 30ನೇ ಚಿತ್ರ ಸದ್ದಿಲ್ಲದೆ ಸೆಟ್ಟೇರಿದೆ. ಈ ಚಿತ್ರಕ್ಕೆ ಸದ್ಯ ನಾನಿ 30 ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದು, ಇನ್ನಷ್ಟೇ ಅಧಿಕೃತ ಹೆಸರು ಇಡಬೇಕಿದೆ

    ಇದಬ್ಬೂ ಓದಿ: ಮತ್ತೊಮ್ಮೆ ‘ಗೂಢಾಚಾರಿ’ ಆಗಲು ಹೊರಟ ಅಡವಿ ಶೇಷ್​ …

    ಹೊಸ ವರ್ಷಕ್ಕೆ ಸೆಟ್ಟೇರಿತು ನಾನಿ ಅಭಿನಯದ 30ನೇ ಚಿತ್ರ … ಇದು ಅಪ್ಪ-ಮಗಳ ಬಾಂಧವ್ಯದ ಕಥೆಕೆಲವು ದಿನಗಳ ಹಿಂದೆ ವೈರ ಎಂಟಟೈನ್ಮೆಂಟ್ಸ್ ಬ್ಯಾನರ್, ನಾನಿ ಜತೆಗೆ ಮುಂದಿನ ಸಿನಿಮಾ ಮಾಡೋದಾಗಿ ಮಾಹಿತಿ ಹಂಚಿಕೊಂಡಿತ್ತು. ಆದರೆ, ಈ ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಾರೆ? ತಂತ್ರಜ್ನರು ಮತ್ತು ಕಲಾವಿದರು ಯಾರು? ಮುಂತಾದ ವಿಷಯಗಳಿಗೆ ಉತ್ತರ ನೀಡಲಿಲ್ಲ. ಈಗ ಹೊಸ ವರ್ಷದ ಆರಂಭದ ದಿನ ಚಿತ್ರತಂಡ ವೀಡಿಯೋ ತುಣುಕನ್ನು ಬಿಡುಗಡೆ ಮಾಡುವ ಮೂಲಕ ನಾನಿ ಅಭಿನಯದ 30ನೇ ಚತ್ರವನ್ನು ಅಧೀಕೃತವಾಗಿ ಲಾಂಚ್ ಮಾಡಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

    ‘ನಾನಿ 30’ ಚಿತ್ರಕ್ಕೆ ಶೌರ್ಯುವ್ ಆಕ್ಷನ್-ಕಟ್ ಹೇಳುತ್ತಿದ್ದು, ನಿರ್ದೇಶಕನಾಗಿ ಇದು ಇವರ ಮೊದಲ ಸಿನಿಮಾ. ಅಪ್ಪ-ಮಗಳ ಬಾಂದವ್ಯದ ಸುತ್ತ ಹೆಣೆಯಲಾದ ಈ ಕಥೆಯಲ್ಲಿ ನಾನಿ ಜೋಡಿಯಾಗಿ ಬಾಲಿವುಡ್​ ನಟಿ ಹಾಗು ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ಒಂದು ಮಗುವಿನ ಸುತ್ತ … ‘ಬ್ರಹ್ಮಕಮಲ’ಳಾದ ಅದ್ವಿತಿ ಶೆಟ್ಟಿ

    ವೈರ ಎಂಟಟೈನ್ಮೆಂಟ್ಸ್ ಬ್ಯಾನರ್​ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಸಾನು ಜಾನ್ ವರ್ಗೀಸ್ ಅವರ ಛಾಯಾಗ್ರಹಣ ಮತ್ತು ಹೇಶಮ್ ಅಬ್ದುಲ್ ವಹಾಬ್ ಅವರ ಸಂಗೀತವಿದೆ.

    ಎರಡು ವರ್ಷಗಳ ನಂತರ ಹೆದರಿಸಲು ಬರುತ್ತಿದ್ದಾರೆ ‘ದಿಯಾ’ ಖುಷಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts