ಪ್ರೀತಿಸಿ ಕೈ ಕೊಟ್ಟ ಯುವತಿಯ ಮೇಲೆ ಚಾಕುವಿನಿಂದ ಹಲ್ಲೆ! ಯುವಕ ಇದೀಗ ಜೈಲುಪಾಲು

bnglr
Published on

ಬೆಂಗಳೂರು: ಹುಚ್ಚನಂತೆ ಪ್ರೀತಿಸಿದ ಯುವತಿ ನನ್ನ ಪ್ರೀತಿಗೆ ಒಲ್ಲೆ ಎಂದಳು ಎನ್ನುವ ಕಾರಣಕ್ಕೆ ಆಕೆಯ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದ ಪಾಗಲ್​ ಪ್ರೇಮಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ದೀಪಕ್​ (32) ಬಂಧಿತ ಪಾಗಲ್​ ಪ್ರೇಮಿ. ಈತ ಕಳೆದ ಎರಡು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದ. ಅದರೆ ಕಳೆದ ವರ್ಷ ಆಗಸ್ಟ್​ನಲ್ಲಿ ಲವ್ ಬ್ರೇಕ್ ಅಪ್ ಅಗಿತ್ತು. ನಿನ್ನನ್ನು ಪ್ರೀತಿಸಲು ಸಾಧ್ಯವಿಲ್ಲ ಎಂದು ಯುವತಿ ದೀಪಕ್​ನಿಂದ ದೂರಾಗಿದ್ದಳು. ಬಳಿಕ ಆತನ ಜತೆ ಸಂಪರ್ಕ ಕಡಿತಗೊಳಿಸಿದ್ದಳು.

ಆದರೆ ಅಷ್ಟಕ್ಕೆ ಸುಮ್ಮನಾಗದ ದೀಪಕ್​ ಹಲವಾರು ಬಾರಿ ಬೇರೆ ಬೇರೆ ಫೋನ್ ನಂಬರ್​​ನಿಂದ ಕರೆ ಮಾಡಿ ಹಿಂಸೆ ನೀಡಿದ್ದ. ಕಳೆದ ಹದಿನೈದು ದಿನದ ಹಿಂದೆ ಯುವತಿ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದ. ಜನವರಿ 25ರಂದು ಬೈಕ್​ನಲ್ಲಿ ಹೋಗುತ್ತಿದ್ದ ವೇಳೆ ಯುವತಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಬೆನ್ನು, ಹೊಟ್ಟೆ, ತಲೆ, ಕೈಗೆ ಚಾಕುವಿನಿಂದ ಚುಚ್ಚಿದ್ದಾನೆ. ಈ ಹಿನ್ನಲೆಯಲ್ಲಿ ಯುವತಿ ನಂದಿನಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಳು. ದೀಪಕ್​ಗಾಗಿ ಬಲೆ ಬೀಸಿದ್ದ ಪೊಲೀಸರು ಫೆ. 7ರಂದು ಆತನನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net