ನಾಳೆ ಬೆಳ್ತಂಗಡಿಗೆ ನಂದಿ ರಥಯಾತ್ರೆ

Published on

ಬೆಳ್ತಂಗಡಿ: ಗೋಸೇವಾ ಗತಿವಿಧಿ ಕರ್ನಾಟಕ ರಾಧಾಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಸಂಚರಿಸುತ್ತಿರುವ ನಂದಿ ರಥಯಾತ್ರೆ ಮಾ.18ರಂದು ಬೆಳ್ತಂಗಡಿ ತಾಲೂಕಿಗೆ ಆಗಮಿಸಲಿದೆ. ಮಧ್ಯಾಹ್ನ 12ಕ್ಕೆ ಕೊಕ್ಕಡ, 1ಕ್ಕೆ ಸೌತಡ್ಕ, 3ಕ್ಕೆ ಧರ್ಮಸ್ಥಳ, 4ಕ್ಕೆ ಕನ್ಯಾಡಿ ಮೂಲಕ ಬಂದು ಸಂಜೆ 5ಕ್ಕೆ ಉಜಿರೆಗೆ ತಲುಪಲಿದೆ. ಉಜಿರೆಯ ಬೆಳಾಲು ಕ್ರಾಸ್‌ನಿಂದ ಭವ್ಯ ರಥಯಾತ್ರೆಗೆ ದೇಸಿ ಗೋಸಂರಕ್ಷಕ ರಮೇಶ್ ಎಸ್.ಬೆಳ್ತಂಗಡಿ ಚಾಲನೆ ನೀಡಲಿದ್ದಾರೆ. ಶಾರದಾ ಮಂಟಪದಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಅಧ್ಯಕ್ಷತೆ ವಹಿಸಲಿದ್ದಾರೆ. ರಾಧಾ ಸುರಭಿ ಗೋಮಂದಿರ ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಭಕ್ತಿಭೂಷಣದಾಸ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕಳೆಂಜ ನಂದಗೋಕುಲ ಗೋಶಾಲೆ ಅಧ್ಯಕ್ಷ ಡಾ.ಎಂ.ಎಂ.ದಯಾಕರ್ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net