ಪರಿಸರ ಜಾಗೃತಿಗಾಗಿ ದೇಶ ಪರ್ಯಟನೆಗಿಳಿದ ನಂದಿ; ಸೈಕಲ್​ ತುಳಿಯುತ್ತ 28 ರಾಜ್ಯಗಳಿಗೆ ಭೇಟಿ

Nandi
Published on

ಬೆಂಗಳೂರು: ಪರಿಸರ ಜಾಗೃತಿ ಮೂಡಿಸಲು ಸೈಕಲ್​ನಲ್ಲಿ ದೇಶ ಪರ್ಯಟನೆ ನಡೆಸುತ್ತಿರುವ ಒಡಿಶಾ ಮೂಲದ ನಂದಿ ಎಂಬ ಯುವಕ ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದರು.

ಕಳೆದೊಂದು ವರ್ಷದಿಂದ ಸೈಕಲ್​ ತುಳಿಯುತ್ತ ದೇಶದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿದ್ದು, ಕಳೆದ ಗುರುವಾರ ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ಪ್ರಯಾಣಿಸಿದ್ದಾರೆ. ಅಲ್ಲಿಂದ ಒಡಿಶಾಗೆ ಮರಳಿ ಅಭಿಯಾನ ಅಂತ್ಯಗೊಳಿಸುವುದಾಗಿ ತಿಳಿಸಿದ್ದಾರೆ.

ಈಗಾಗಲೇ ಛತ್ತೀಸ್​ಗಢ, ಪಶ್ಚಿಮ ಬಂಗಾಳ, ಅಸ್ಸಾಂ, ಅರುಣಾಚಲ ಪ್ರದೇಶ, ಸಿಕ್ಕಿಂ, ಬಿಹಾರ್​, ಹಿಮಾಚಲ ಪ್ರದೇಶ, ರಾಜಸ್ಥಾನ, ಗೋವಾ, ಕೇರಳ, ತಮಿಳುನಾಡು ಇತ್ಯಾದಿ ರಾಜ್ಯಗಳಿಗೆ ಭೇಟಿ ನೀಡಿದ್ದೇನೆ. ಸೈಕಲ್​ ತುಳಿಯುವುದೇ ನನ್ನ ಉದ್ಯೋಗ. ಪ್ರಯಾಣದ ವೇಳೆ ಪೆಟ್ರೋಲ್​ ಬಂಕ್​, ಪೊಲೀಸ್​ ಠಾಣೆ, ಆಶ್ರಮ, ದೇವಾಲಯಗಳಲ್ಲಿ ರಾತ್ರಿ ತಂಗುತ್ತೇನೆ. ಬೆಳಗ್ಗೆ ಎದ್ದು ಮತ್ತೆ ಸವಾರಿ ಆರಂಭಿಸುತ್ತೇನೆ. ದೇಶದ ವಿವಿಧತೆಯನ್ನು ಅರಿಯುವುದು ಹಾಗೂ ಆ ಬಗ್ಗೆ ಜನಜಾಗೃತಿ ಮೂಡಿಸುವುದು ನನ್ನ ಗುರಿ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net