

ಉತ್ತರಾಖಂಡದ ಚಮೋಲಿ ಜಿಲ್ಲೆಯ ನಂದನಗರ ಘಾಟ್ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಮೇಘಸ್ಫೋಟ ಸಂಭವಿಸಿದೆ.
ಇನ್ನು ಮೇಘಸ್ಫೋಟ ಹಿನ್ನೆಲೆ ಪಟ್ಟಣದ ಕುಂತ್ರಿ ಲಂಗಾಫಲಿ ವಾರ್ಡ್ನಲ್ಲಿ ಹಲವಾರು ಮನೆಗಳು ಅವಶೇಷಗಳಡಿಯಲ್ಲಿ ಹೂತುಹೋಗಿದ್ದು, ಕನಿಷ್ಠ 5 ಜನರು ನಾಪತ್ತೆಯಾಗಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.
ಮೇಘಸ್ಫೋಟದ ಪರಿಣಾಮದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ನಂದನಗರ ಘಾಟ್ ಅಲಕನಂದಾ ನದಯು ಉಕ್ಕಿ ಹರಿಯುವ ಮತ್ತು ಕಟ್ಟಡಗಳು ಹಾಗೂ ರಸ್ತೆಗಳಿಗೆ ಹಾನಿಯಾಗಿರುವುದು ದೃಶ್ಯಗಳು ಸೆರೆಯಾಗಿವೆ.
ಭಾರೀ ಮಳೆಯಿಂದಾಗಿ ಕನಿಷ್ಠ 7 ಜನರು ಕಾಣೆಯಾಗಿದ್ದಾರೆ. ಕನಿಷ್ಠ 10-12 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ ಎಂದು ಎನ್ನಲಾಗುತ್ತಿದೆ. ಹಾನಿಗೊಳಗಾದ ಮನೆಗಳ ಸಂಖ್ಯೆ ಹೆಚ್ಚಾಗಬಹುದು. ಕೆಲವು ಅಂಗಡಿಗಳು ಹಾನಿಗೊಳಗಾಗಿವೆ ಎಂದು ಪಿಟಿಐ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಿಎಂ ಸಂದೀಪ್ ತಿವಾರಿ ತಿಳಿಸಿದ್ದಾರೆ.(ಏಜೆನ್ಸೀಸ್ )