ನಮ್ಮೂರ ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ

shikshana
Published on

ಕುಂದಾಪುರ: ಮೂಡುಬಗೆ ಅಂಪಾರು ಸೇವಾ ಚೇತನ ಟ್ರಸ್ಟ್ ಆಶ್ರಯದಲ್ಲಿ 4ನೇ ವಾರ್ಷಿಕೋತ್ಸವ ಪ್ರಯುಕ್ತ ಅಂಪಾರು ಮೂಡುಬಗೆ ಶಾನ್ಕಟ್ಟು ಮೈದಾನದಲ್ಲಿ ನಡೆದ ನಮ್ಮೂರ ಸಂಭ್ರಮ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಿಂತಕ ಡಾ.ಚೇತನ್ ಶೆಟ್ಟಿ ಕೋವಾಡಿ ಅವರಿಗೆ ನಮ್ಮೂರ ಶಿಕ್ಷಣರತ್ನ ಪ್ರಶಸ್ತಿಯನ್ನು ಉದ್ಯಮಿ ಆನಗಳ್ಳಿ ಕರುಣಾಕರ ಹೆಗ್ಡೆ ಪ್ರದಾನಿಸಿದರು.

ಸೌತ್ ಫೀಲ್ಡ್ ಪೇಂಟ್ಸ್‌ನ ಆಡಳಿತ ನಿರ್ದೇಶಕ ಎಸ್.ಎಸ್.ಹೆಗ್ಡೆ ನಮ್ಮೂರ ಸಂಭ್ರಮ ಉದ್ಘಾಟಿಸಿದರು. ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ಬೆಂಗಳೂರು ಬಂಟರ ಸಂಘ ಅಧ್ಯಕ್ಷ ಸಿ.ಎ.ಅಶೋಕ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ಹುಬ್ಬಳ್ಳಿ ಧಾರವಾಡ ಬಂಟರ ಸಂಘ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಉದ್ಯಮಿ ಆಜ್ರಿ ತಗ್ಗುಂಜೆ ಮನೆ ದಯಾನಂದ ಶೆಟ್ಟಿ, ಅಶೋಕ್ ಶೆಟ್ಟಿ ಬೆಳ್ಳಾಡಿ, ಆದರ್ಶ ಶೆಟ್ಟಿ ಹಾಲಾಡಿ, ಸುರೇಶ್ ಶೆಟ್ಟಿ, ನಮ್ಮೂರ ಸಂಭ್ರಮ ಸ್ಥಾಪಕ ಅಧ್ಯಕ್ಷ ಸಂತೋಷ್ ಶೆಟ್ಟಿ ಮೂಡುಬಗೆ, ಅಧ್ಯಕ್ಷ ಅರುಣ್ ಶೆಟ್ಟಿ ಅಂಪಾರು, ಕೆ.ಅಶೋಕ್ ನಾಯ್ಕ, ನವೀನ್ ಶೆಟ್ಟಿ ಹೊಸಿಮನೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net